ಸೌರಶಕ್ತಿ ಮೊರೆ ಹೋದ ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು, ಅಕ್ಟೋಬರ್ 02 : ಪರಿಸರ ಸ್ನೇಹಿಯಾಗುತ್ತ ಹೆಜ್ಜೆ ಇಟ್ಟಿರುವ ಬೆಂಗಳೂರು ವಿಶ್ವವಿದ್ಯಾಲಯ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಿದೆ. 495 ಕಿಲೋವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸ್ ಆವರಣದಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸುಮಾರು 500 ಕಿಲೋವಾಟ್ ವಿದ್ಯುತ್ ಅಗತ್ಯವಿದೆ.

495 ಕಿಲೋವಾಟ್ ವಿದ್ಯುತ್ ವಿವಿ ಆವರಣದಲ್ಲಿಯೇ ತಯಾರಾಗುವುದರಿಂದ ವಿದ್ಯುತ್ ಮೇಲಿನ ಬೇಡಿಕೆ ಕಡಿಮೆಯಾಗಲಿದೆ. ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂಗೆ ಪ್ರತಿ ಯೂನಿಟ್‌ಗೆ 7 ರೂ. ಅನ್ನು ಪಾವತಿ ಮಾಡಲಾಗುತ್ತಿದೆ.

Bangalore University Set Up 495 Kilowatt Solar Power Plant

ಈಗ ಸೌರ ವಿದ್ಯುತ್ ಉತ್ಪಾದನೆಯಿಂದಾಗಿ ಬೆಸ್ಕಾಂಗೆ ಪ್ರತಿ ಯೂನಿಟ್‌ಗೆ 4 ರೂ. ಪಾವತಿ ಮಾಡಬೇಕಿದೆ. ಇದರಿದಾಗಿ ಶೇ 50ರಷ್ಟು ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಬೆಂಗಳೂರು ವಿವಿ ಪ್ರಕಟಣೆಯಲ್ಲಿ ಹೇಳಿದೆ.

ವಿಶ್ವವಿದ್ಯಾಲಯ ಆರು ಕಟ್ಟಡಗಳ ಮೇಲೆ ಸೌರ ಫಲಕವನ್ನು ಅಳವಡಿಕೆ ಮಾಡಲಾಗಿದೆ. ಸುಮಾರು 5 ಸಾವಿರ ಚದರ ಅಡಿಯಲ್ಲಿ ಫಲಕ ಹಾಕಲಾಗಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ವಿವಿಗೆ ವಿದ್ಯುತ್ ಪೂರೈಕೆಯಾಗುವ ಗ್ರಿಡ್‌ಗೆ ಸಂಪರ್ಕಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ಸ್ಥಳಾವಕಾಶವಿದೆ. ಭವಿಷ್ಯದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಿ ಬೆಸ್ಕಾಂಗೆ ಮಾರಾಟ ಮಾಡುವ ಚಿಂತನೆಯೂ ವಿವಿ ಮುಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+