ಜಯನಗರದಲ್ಲಿ ಫೆ.23ರ ಭಾನುವಾರ ಸೈಕಲ್ ಡೇ

ಬೆಂಗಳೂರು, ಫೆ.22 : ಸೈಕಲ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರ ಆಯೋಜಿಸಲಾಗುವ ‘ಫೀಲ್‌ ಬೆಂಗಳೂರು ಸೈಕಲ್‌ ಡೇ' ಫೆ.23ರ ಭಾನುವಾರ ಜಯನಗರದ ಐದನೇ ಬ್ಲಾಕ್ ನಲ್ಲಿ ನಡೆಯಲಿದೆ.

ಫೆ.23ರ ಭಾನುವಾರ ಜಯನಗರದ 5ನೇ ಬ್ಲಾಕ್ ನ ಶಾಲಿನಿ ಗ್ರೌಂಡ್ಸ್ ಬಳಿ ಬೆಳಗ್ಗೆ 7.30ಕ್ಕೆ ಫೀಲ್ ಬೆಂಗಳೂರು ಸೈಕಲ್ ಡೇ ಆರಂಭವಾಗಲಿದ್ದು, 6.5 ಕಿ.ಮೀಗಳ ವಿವಿಧ ಮಾರ್ಗಗಳ ಮೂಲಕ ಸಾಗಿ 9.45ಕ್ಕೆ ಪುನಃ ಶಾಲಿನಿ ಗ್ರೌಂಡ್ಸ್ ಬಳಿ ಮುಕ್ತಾಯವಾಗಲಿದೆ. [ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ]

Jayanagar

ಸೈಕಲ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರ ‘ಫೀಲ್‌ ಬೆಂಗಳೂರು ಸೈಕಲ್‌ ಡೇ' ಕಾರ್ಯಕ್ರವನ್ನು ಆಯೋಜಿಸಲಾಗುತ್ತಿದೆ. ನಗರ ಭೂ ಸಾರಿಗೆ ಕರ್ನಾಟಕ ಸರ್ಕಾರದ ನಿರ್ದೇಶನಾಲಯ ಆಯೋಜಿಸುವ ಈ ಕಾರ್ಯಕ್ರಮಕ್ಕೆ ಡಲ್ಟ್‌, ಬಿಬಿಎಂಪಿ, ಬಿಎಂಟಿಸಿ, ತೋಟಗಾರಿಕೆ ಇಲಾಖೆ, ಬಿಟಿಪಿ, ಬಿಎಂಆರ್‌ಸಿಎಲ್‌ ಸಹ ಬೆಂಬಲ ಈ ಸೈಕಲ್ ಡೇ ಗೆ ಬೆಂಬಲ ನೀಡುತ್ತಿವೆ. [4ನೇ ಸೈಕಲ್ ಡೇ ಚಿತ್ರಗಳು]

2013ರ ಅಕ್ಟೋಬರ್ 28ರಂದು ಕಬ್ಬನ್‌ ಪಾರ್ಕ್‌ ಆವರಣದಲ್ಲಿ ಸೈಕಲ್‌ ದಿನ ಕಾರ್ಯಕ್ರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕಟ್ಟೆ ಸತ್ಯನಾರಾಯಣ ಚಾಲನೆ ನೀಡಿದ್ದರು. ಅಂದಿನಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ಬೆಂಗಳೂರಿನ ವಿವಿಧ ಬಡವಾಣೆಗಳಲ್ಲಿ ಸೈಕಲ್ ಡೇ ಆಚರಿಸಲಾಗುತ್ತಿದೆ.

ಫೀಲ್ ಬೆಂಗಳೂರು ಸೈಕಲ್ ಡೇ ಜಾಥಾ ಸರಣಿಯ ನಾಲ್ಕನೇ ಕಾರ್ಯಕ್ರಮ ಜ.26ರಂದು ಜಯನಗರದಲ್ಲಿ ನಡೆಯಿತು. ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಜಾಥಾದಲ್ಲಿ ಭಾಗವಹಿಸಿದ್ದರು. ಸರಣಿಯ ಐದನೇ ಕಾರ್ಯಕ್ರಮ ಫೆ.23ರ ಭಾನುವಾರ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+