ಪರೀಕ್ಷೆ ಬರೆಯಲಿನ್ನು ಪೆನ್ನು ಪೇಪರ್‌ ಬೇಡ!

ಬೆಂಗಳೂರು, ಸೆ. 5: ಇನ್ನು ಮುಂದೆ ಪೆನ್ನು ಹಿಡಿದು, ಹಾಲ್‌ನಲ್ಲೇ ಕುಳಿತು ಪರೀಕ್ಷೆ ಬರೆಯಬೇಕಾಗಿಲ್ಲ. ಹೌದು... ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜು ಬಿಬಿಎಂ ಘಟಕ ಈ ರೀತಿಯ ವಿನೂತನ ಪ್ರಯತ್ನವೊಂದಕ್ಕೆ ಮುಂದಾಗಿದ್ದು ಕಾಗದ ರಹಿತ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಚೆನೈ ಮೂಲದ ಕಂಪನಿಯೊಂದು ಈ ರೀತಿಯ ಎಲೆಕ್ಟ್ರಾನಿಕ್‌ ಉಪಕರಣವೊಂದನ್ನು ಬಿಡುಗಡೆ ಮಾಡಿದೆ. ಟ್ಯಾಬ್‌ಲೆಟ್‌ ರೀತಿಯಲ್ಲೇ ಕಂಡುಬರುವ ಉಪಕರಣದ ಡಿಸ್ಪ್ಲೇ ಮೇಲೆ ಪರೀಕ್ಷಾ ಉತ್ತರ ಪತ್ರಿಕೆ ತರಹದ ರಚನೆಯೆ ಮೂಡುತ್ತದೆ.

mount carmek collage

ಪೆನ್‌ನಂಥ ಮತ್ತೊಂದು ಉಪಕರಣವನ್ನು ಬಳಸಿ ಡಿಸ್ಪ್ಲೇ ಮೇಲೆ ಬರೆಯಬಹುದು. ಬಣ್ಣ ನೀಡುವುದು, ಅಡಿ ಗೆರೆ ಎಳೆಯುವುದು, ಅಳಿಸುವುದು ಎಲ್ಲವೂ ಸುಲಭ ಸಾಧ್ಯ. ಇದಕ್ಕೆ ಸದ್ಯ ಎಕ್ಸಾಮ್‌ ಪ್ಯಾಡ್‌ ಎಂಬ ಹೆಸರು ನೀಡಲಾಗಿದೆ.(ಬೆಳಿಗ್ಗೆ ಎದ್ದು ಕಾಲೇಜಿಗೆ ಹೋದರೆ ಕೂರಲು ಜಾಗವಿಲ್ಲ!)

ಬರೆದ ಉತ್ತರಗಳ ಆನ್‌ಲೈನ್‌ನಲ್ಲೇ ಮೌಲ್ಯಮಾಪನಕ್ಕೆ ಒಳಗಾಗುತ್ತವೆ. ಅಲ್ಲದೇ ಪುನರ್‌ ಮನನಕ್ಕೆ ವಿದ್ಯಾರ್ಥಿಗಳ ಬಳಿಯೂ ಕಳಿಸಲು ಸಾಧ್ಯ. ಬರೆದ ಎಲ್ಲ ಉತ್ತರಗಳು ಡಿಜಿಟಲ್‌ ತಂತ್ರಜ್ಞಾನದಡಿ ದಾಖಲಾಗುತ್ತವೆ.

ನಾವು ಕಾಗದ ಬಳಕೆ ಕಡಿಮೆ ಮಾಡಿ ಪರಿಸರ ಉಳಿಸುವ ಕೆಲಸ ಮಾಡಬೇಕೆಂದು ತೀರ್ಮಾನಿಸಿದ್ದೇವು. ಕೆಲ ದಿನಗಳ ನಂತರ ಈ ತಂತ್ರಜ್ಞಾನ ನಮ್ಮ ಗಮನಕ್ಕೆ ಬಂತು. ಆಡಳಿತ ಮಂಡಳಿ ಮತ್ತು ಎಲ್ಲರೂ ಸೇರಿ ಮಾತನಾಡಿ ಇದನ್ನು ಅಳವಡಿಸಿಕೊಳ್ಳುವ ತೀರ್ಮಾನ ಮಾಡಿದೆವು ಎಂದು ಕಾಲೇಜು ಆಡಳಿತ ಮಂಡಳಿ ಅಧಿಕಾರಿ ರಾಜ್‌ಕುಮಾರ್‌ ವಿವರಿಸುತ್ತಾರೆ.

ಹಿಂದಿನ ವಾರ ವಿದ್ಯಾರ್ಥಿಗಳು ಇದರ ಪ್ರಯೋಗಾತ್ಮ ಬಳಕೆ ಮಾಡಿದ್ದೇವೆ. ಇದರ ಒಂದು ದೊಡ್ಡ್ ಅನುಕೂಲವೆಂದರೆ ಹೆಚ್ಚುವರಿ ಹಾಳೆಗಳಿಗಾಗಿ ತಡಕಾಡಬೇಕಾಗಿಲ್ಲ. ಗಂಟು ಕಟ್ಟಿ ನೀಡುವ, ಅಥವಾ ಪುಟ ಕಳೆದು ಹೋಗುವ ಭಯ ಇರುವುದಿಲ್ಲ ಎಂದು ವಿದ್ಯಾರ್ಥಿನಿ ಪ್ರಿಯಾಂಕಾ ರಘುರಾಮ್‌ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+