Bengaluru Rent: ಬೆಂಗಳೂರಲ್ಲಿ ಮನೆ ಬಾಡಿಗೆ ಬೆಲೆ ಭರ್ಜರಿ ಏರಿಕೆ, ಸಾಮಾನ್ಯ ಜನರು ಏನು ಮಾಡಬೇಕು?

ಬೆಂಗಳೂರಿನಲ್ಲಿ ಬಾಡಿಗೆ ದರ ಆಕಾಶ ಮುಟ್ಟಿದೆ, ಜನರು ಕೂಡ ಪರದಾಡುತ್ತಿದ್ದಾರೆ. ಕೆಲ ಕಂಪನಿಗಳು ಈಗಾಗಲೇ ವರ್ಕ್ ಫ್ರಂ ಹೋಂ ಸಂಪೂರ್ಣವಾಗಿ ನಿಲ್ಲಿಸಿದ್ದು, ಬಹುತೇಕ ಜನ ಇದೀಗ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಇದು ಬಾಡಿಗೆ ಮನೆಗಳ ಮಾಲೀಕರಿಗೆ ಭರ್ಜರಿ ಲಾಭ ತರಿಸಿದ್ದು, ಇದೀಗ ಭಾರಿ ಪ್ರಮಾಣದಲ್ಲಿ ಮನೆ ಬಾಡಿಗೆ ಏರಿಕೆ ಆಗಿದೆ. ಹಾಗಾದರೆ, ಬೆಂಗಳೂರಿನಲ್ಲಿ ಈಗ 1 ಬೆಡ್‌ರೂಂ, 2 ಬೆಡ್‌ರೂಂ, 3 ಬೆಡ್‌ರೂಂ ಮನೆಗಳ ಬೆಲೆ ಎಷ್ಟು ಗೊತ್ತೆ?

ಅಂದಹಾಗೆ ಕಳೆದ ಕೆಲವು ತಿಂಗಳಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಶೇಕಡಾ 20 ರಿಂದ 30 ರಷ್ಟು ಹೆಚ್ಚಾಗಿದೆ. ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಅಂದ್ರೆ, ಮನೆಯಿಂದ ಕೆಲಸ ಮಾಡುವುದನ್ನ ರದ್ದು ಮಾಡಿದೆ. ಆ ನಂತರ ದೂರದ ಊರಿನಿಂದ ನೆಮ್ಮದಿಯಾಗಿ, ತಮ್ಮ ತಮ್ಮ ಊರು & ಹಳ್ಳಿಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಇದೀಗ ವಾಪಸ್ ಬೆಂಗಳೂರಿಗೆ ಬರುವಂತೆ ಆಗಿದೆ. ಹೀಗಾಗಿ ಜನರು ಕೂಡ ಪರದಾಡುತ್ತಿದ್ದು, ಇದೇ ಹಿನ್ನೆಲೆ ಬಾಡಿಗೆ ಮನೆಗಳ ಮಾಲೀಕರು ಮನೆ ಬಾಡಿಗೆ ದರ ಭರ್ಜರಿ ಏರಿಕೆ ಮಾಡಿಸಿದ್ದಾರೆ. ಆದ್ರೂ ನಿಮಗೆ ಅತ್ಯುತ್ತಮವಾಗಿ, ಅಚ್ಚುಕಟ್ಟಾದ ಜಾಗದಲ್ಲಿ ಮನೆ ಹುಡುಕಲು ಅವಕಾಶ ಇಲ್ಲಿದೆ.

Bangalore Real Estate Dont Buy Rental properties in Bengaluru Before Knowing these 5 things

ಸಿಂಗಾಪುರ ಮೀರಿಸಿದ ಬೆಂಗಳೂರು!

ಬೆಂಗಳೂರಲ್ಲಿ ಮನೆ ಬಾಡಿಗೆ ದರ ಅದೆಷ್ಟು ವೇಗವಾಗಿ ಏರಿಕೆ ಕಾಣುತ್ತಿದೆ ಎಂದರೆ, ನಮ್ಮ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಏರಿಕೆ ಪ್ರಮಾಣ ಈಗ ಸಿಂಗಾಪುರ ದೇಶವನ್ನು ಕೂಡ ಮೀರಿಸಿದೆ. ಹಾಗೆ ದುಬೈಗಿಂತ ಹೆಚ್ಚಾಗುತ್ತಾ ಸಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಸಾಮಾನ್ಯವಾಗಿ ಸಿಂಗಾಪುರದಲ್ಲಿ ಸರಾಸರಿ ಬಾಡಿಗೆ ಹಣದುಬ್ಬರ ಶೇಕಡಾ 29 ರಷ್ಟು ಇದ್ದು, ದುಬೈ ನೆಲದಲ್ಲಿ ಶೆಕಡಾ 20 ರಷ್ಟು ಇದೆ. ಆದರೆ ಬೆಂಗಳೂರಿನಲ್ಲಿ ಶೇಕಡಾ 30ಕ್ಕೆ ಬಂದು ತಲುಪಿದೆ ಎನ್ನುತ್ತಿವೆ ವರದಿಗಳು. ಈ ಪೈಕಿ ಅಪಾರ್ಟ್‌ಮೆಂಟ್ ಫ್ಲಾಟ್‌ಗಳ ದರದಲ್ಲಿ ಕೂಡ ಗಣನೀಯ ಏರಿಕೆ ಕಂಡುಬಂದಿದೆ.

'ನಮ್ಮ ಮೆಟ್ರೋ' ಏರಿಯಾದಲ್ಲಿ ಶಾಕ್!

ಮತ್ತೊಂದು ಆಘಾತಕಾರಿ ಸುದ್ದಿ ಏನೆಂದರೆ, ಇದೀಗ ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಕಾರಿಡಾರ್ ಹಾದು ಹೋಗಿರುವ ಪ್ರದೇಶದಲ್ಲಿ ಮನೆ ಬಾಡಿಗೆ ಮುಗಿಲು ಮುಟ್ಟುತ್ತಿದೆ. ಈ ಮೂಲಕ ಮೆಟ್ರೋ ಕಾರಿಡಾರ್ ಪ್ರದೇಶಗಳಲ್ಲಿ ಶೇಕಡಾ 20ಕ್ಕೂ ಹೆಚ್ಚು ಬಾಡಿಗೆ ಏರಿಕೆಯ ಮಾಡಲಾಗಿದೆ ಎನ್ನುತ್ತಿವೆ ಅಂಕಿ & ಅಂಶಗಳು. ಹಾಗಾದರೆ ಐಟಿ ಪಾರ್ಕ್ & ಕಂಪನಿಗಳ ಸುತ್ತಮುತ್ತ ಕಥೆ ಏನಾಗಿದೆ ಗೊತ್ತಾ?

Bangalore Real Estate Dont Buy Rental properties in Bengaluru Before Knowing these 5 things

ಐಟಿ ಪಾರ್ಕ್‌ & ಆಫಿಸ್ ಹಬ್‌ಗಳ ಸುತ್ತಮುತ್ತ ಆಸ್ತಿ ಬೇಡಿಕೆ ಹೆಚ್ಚಾಗಿ, ಜನರು ಮನೆ ಬಾಡಿಗೆ ಪಡೆಯಲು ಪರದಾಡುತ್ತಿದ್ದಾರೆ. ಅದರಲ್ಲೂ ಹೊಸದಾಗಿ ಮೆಟ್ರೋ ಕಾಮಗಾರಿ ಶುರುವಾದ ಪ್ರದೇಶದಲ್ಲಿ ಬಾಡಿಗೆ ದರ ಭಾರಿ ಏರಿಕೆ ಕಂಡಿದೆ ಎಂದು ಹೇಳುತ್ತಿದ್ದಾರೆ ಸ್ಥಳೀಯರು. ಇನ್ನು ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌ ಪ್ರದೇಶದಲ್ಲೀಗ ಜನ ಮನೆ ಪಡೆಯುವುದೇ ಸಾಹಸ ಆಗಿದೆ. ಹಾಗಾದರೆ ಇಲ್ಲೆಲ್ಲಾ ಎಷ್ಟಿದೆ ಬಾಡಿಗೆ ದರ?

2BHK ಬೆಲೆ ತಿಂಗಳಿಗೆ 45,000

ಇಂದಿರಾನಗರ ಮೆಟ್ರೋ ಕಾರಿಡಾರ್ ಬಳಿ, ತಿಂಗಳಿಗೆ 30,000 ರೂಪಾಯಿಗೆ ಸಿಗುತ್ತಿದ್ದ 2BHK ಈಗ ತಿಂಗಳಿಗೆ 45,000 ಆಗಿದೆ. ಇದೇ ಪ್ರದೇಶದಲ್ಲಿ 5BHK ಬಂಗಲೆ ತಿಂಗಳಿಗೆ 3 ಲಕ್ಷ ರೂಪಾಯಿ ಬೆಲೆಗೆ ಸೇಲ್ ಆಗುತ್ತಿದೆ. ಕಳೆದ ವರ್ಷ ತಿಂಗಳಿಗೆ 1.9 ಲಕ್ಷ ರೂಪಾಯಿ ಬಾಡಿಗೆ ಇತ್ತು. ಅದೇ ಪ್ರದೇಶದಲ್ಲಿ 3BHK ಕಳೆದ ವರ್ಷ ತಿಂಗಳಿಗೆ ಸುಮಾರು 70,000 ರೂಪಾಯಿ ಇತ್ತು. ಹೀಗಿದ್ದಾಗ ಬಾಡಿಗೆ ಬೆಲೆ ಈಗ ತಿಂಗಳಿಗೆ 80,000 ದಿಂದ 1 ಲಕ್ಷ ರೂಪಾಯಿಗೆ ಏರಿಕೆ ಕಂಡಿದೆ.

ಸಾಮಾನ್ಯ ಜನರ ಗತಿ ಏನು?

ಮತ್ತೊಂದು ಕಡೆ ವೈಟ್‌ಫೀಲ್ಡ್‌ ಸುತ್ತಮುತ್ತ ಕೂಡ ಬಾಡಿಗೆ ದರ ಏರಿಕೆ ಕಂಡಿದ್ದು, 3BHK ತಿಂಗಳಿಗೆ 50,000 ದಿಂದ 70,000ಕ್ಕೆ ಫಿಕ್ಸ್ ಆಗಿದೆ. ಮೆಟ್ರೋ ಕಾರ್ಯಾರಂಭ ಮಾಡುವುದಕ್ಕೂ ಮೊದಲು ಸುಮಾರು 80,000 ರೂಪಾಯಿ ಇದ್ದ 3BHK ವಿಲ್ಲಾ ಈಗ, ಅಂದರೆ ವರ್ಕ್ ಫ್ರಂ ಹೋಂ ಕ್ಯಾನ್ಸಲ್ ಆದ ನಂತರ ಸುಮಾರು 1.5 ಲಕ್ಷ ರೂಪಾಯಿ ಬಾಡಿಗೆಗೆ ನೀಡಲಾಗುತ್ತಿದೆ ಎಂದರೆ ನಂಬಲೇಬೇಕು. ಈ ಮೂಲಕ ಭರ್ಜರಿ ಏರಿಕೆಯನ್ನ ಕಂಡಿದೆ ಬಾಡಿಗೆ ದರ, ಇದು ಸಿಲಿಕಾನ್ ಸಿಟಿ ಬೆಂಗಳೂರಿನ ಬಡವರು & ಸಾಮಾನ್ಯ ಜನರ ನಿದ್ದೆಗೆಡಿಸಿದೆ.

ಬೆಂಗಳೂರು 'ಐಟಿ' ತವರು ಎಂಬ ಹೆಗ್ಗಳಿಕೆ ಪಡೆದ ನಗರ. ಬೆಂಗಳೂರು ಅಂದ್ರೆ ಮಂಡ್ಯ ಟು ಇಂಡಿಯಾ ಮಾತ್ರವಲ್ಲ, ಅಮೆರಿಕ ಟು ಆಸ್ಟ್ರೇಲಿಯಾ ಕೂಡ ಸದ್ದು ಮಾಡುತ್ತೆ. ಹೀಗೆ ನಮ್ಮ ಬೆಂಗಳೂರಿನ ಹೆಮ್ಮೆಯನ್ನು ಮುಗಿಲೆತ್ತರಕ್ಕೆ ಹಾರಿಸಲು ಹಲವರ ಕೊಡುಗೆಯು ಇದೆ. ಬೆಂಗಳೂರು ಬೆಳೆಯುತ್ತಿದ್ದಂತೆ ಬಾಡಿಗೆ ದರ ಕೂಡ ಹೆಚ್ಚುತ್ತಾ ಹೋಗಿದೆ. ಆದರೂ ನಿಮಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕಡಿಮೆ ಬಾಡಿಗೆಗೆ ಫ್ಲಾಟ್ ಸಿಗುತ್ತವೆ, ಅವು ಯಾವುವು..? ಅನ್ನೋ ಪ್ರಶ್ನೆಗೆ ಉತ್ತರ ಹುಡುಕೋಣ ಮುಂದೆ ಓದಿ.

ಪೂರ್ವ ಬೆಂಗಳೂರಿನಲ್ಲಿ ಎಷ್ಟು?

ಬೆಂಗಳೂರು ಸಾಕಷ್ಟು ದೊಡ್ಡದಾಗಿ ಬೆಳೆದ ಕಾರಣ, ಸುತ್ತಮುತ್ತಲೂ ಇರುವ ಹಳ್ಳಿಗಳನ್ನೂ ತನ್ನ ಒಡಲಿಗೆ ಸೇರಿಸಿಕೊಂಡಿದೆ. ಹೀಗೆ ಪೂರ್ವ ಬೆಂಗಳೂರಿನಲ್ಲಿ ಅಭಿವೃದ್ಧಿ ಹೊಂದಿರುವ ಉಪನಗರಗಳು, ಕೆಆರ್ ಪುರ, ಬೂದಿಗೆರೆ ಕ್ರಾಸ್, ವರ್ತೂರು ಸೇರಿದಂತೆ ಈ ಸುತ್ತಮುತ್ತಲು ದೊಡ್ಡ ಪ್ರಮಾಣದಲ್ಲಿ ಐಟಿ ಕಂಪನಿಗಳು ಇವೆ. ಈ ಪ್ರದೇಶದಲ್ಲಿ ಇದೀಗ, ಸುಮಾರು 20 ರಿಂದ 25 ಸಾವಿರ ರೂಪಾಯಿ ತನಕ 2 ಬಿಎಚ್‌ಕೆ ಫ್ಲಾಟ್‌ಗಳು ಬಾಡಿಗೆಗೆ ದೊರೆಯುತ್ತವೆ. ಅಂದರೆ 2 ಬೆಡ್ ರೂಂ ಇರುವ ಫ್ಲಾಟ್‌ಗಳಿಗೆ ಇಷ್ಟು ಬಾಡಿಗೆ ಇದೆ. ಬೆಂಗಳೂರು ನಗರಕ್ಕೆ ಹೋಲಿಕೆ ಮಾಡಿದರೆ ಇದು ಅತಿ ಕಡಿಮೆ ವೆಚ್ಚ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+