202 ಆರೋಪಿಗಳ ಬಂಧನ- 6 ಕೋಟಿ ಮಾಲು ವಶ
ಬೆಂಗಳೂರು, ಮೇ.22: ಬೆಂಗಳೂರು ನಗರ, ಪೂರ್ವ ವಿಭಾಗದ ಪೊಲೀಸರು 202 ಆರೋಪಿಗಳನ್ನು ಬಂಧಿಸಿ, 6 ಕೋಟಿಗೂ ಹೆಚ್ಚು ಮೊತ್ತದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ 10 ಕೆ.ಜಿ 113 ಗ್ರಾಂ ಚಿನ್ನದ ಅಭರಣಗಳು, 7 ಕೆಜಿ 230 ಗ್ರಾಂ ಬೆಳ್ಳಿ ಸಾಮಾನುಗಳು ಅವುಗಳಲ್ಲಿ 1 ವಜ್ರದ ಹರಳು, 1 ವಜ್ರದ ನೆಕ್‍ಲೆಸ್, 2 ವಜ್ರದ ರಿಂಗ್, 10 ಮಾಂಗಲ್ಯ ಸರಗಳು, 153 ಚಿನ್ನದ ಚೈನುಗಳು, 48 ನೆಕ್ಲೆಸ್‍ಗಳು, 18 ಬ್ರಾಸ್‍ಲೆಟ್‍ಗಳು, 120 ಜೊತೆ ಬಳೆಗಳು, 152 ಉಂಗುರಗಳು, 122 ಜೊತೆ ಕಿವಿಯ ಓಲೆಗಳು, 1 ಚಿನ್ನದ ಕಡಗ, 1 ಕಾಸಿನ ಸರ, 1 ಚಿನ್ನದ ನಾಣ್ಯ, 2 ಚಿನ್ನದ ಬಿಸ್ಕೆಟ್, 5 ಜೊತೆ ಮೂಗುತಿ ವಶಪಡಿಸಿದ್ದಾರೆ.
ಇಷ್ಟೇ ಅಲ್ಲದೇ 3 ಚಿನ್ನದ ಡಾಲರ್, 9 ಬೆಳ್ಳಿ ನಾಣ್ಯಗಳು, 47 ಮೊಬೈಲ್ ಪೋನ್‍ಗಳು, 7 ಕಾರುಗಳು, 8 ಆಟೋರಿಕ್ಷಾಗಳು, 93 ದ್ವಿಚಕ್ರ ವಾಹನಗಳು, 1 ಲಾರಿ, 1 ಟ್ರಾಕ್ಟರ್, 19 ಲ್ಯಾಪ್‍ಟಾಪ್‍ಗಳು, 3 ಕ್ಯಾಮೆರಾಗಳು, ನಗದು ಹಣ 91,67,100 ರೂ., 01 ಕಾಪರ್ ಪೈಪ್, 17 ಗ್ಯಾಸ್ ಸಿಲೆಂಡರ್‌ಗಳು, 15 ಕೈ ಗಡಿಯಾರಗಳು, 36 ಸಾವಿರ ಬೆಲೆ ಬಾಳುವ ಬ್ಯಾಟರಿಗಳು, ಕಬ್ಬಿಣದ 75 ಸೆಟ್ರಿಂಗ್ ಶೀಟ್‍ಗಳು, 01 ಜನರೇಟರ್, 15 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಇದರಿಂದ 12 ಕೊಲೆ ಮತ್ತು 2 ಲಾಭಕ್ಕಾಗಿ ಕೊಲೆ, 6 ದರೋಡೆ, 3 ದರೋಡೆಗೆ ಸಂಚು, 10 ಸುಲಿಗೆ, 17 ಸರ ಅಪಹರಣ, 38 ಕನ್ನ ಕಳವು, 51 ಮನೆ ಕಳವು, 8 ಸೇವಕರಿಂದ ಕಳವು, 2 ಮೊಬೈಲ್ ಕಳವು, 6 ನಾಲ್ಕು ಚಕ್ರ ವಾಹನ ಕಳವು, 5 ತ್ರಿಚಕ್ರ ವಾಹನ ಕಳವು, 69 ದ್ವಿಚಕ್ರ ವಾಹನ ಕಳವು, 39 ಸಾಮಾನ್ಯ ಕಳವು, 1 ಜಾನವಾರು ಕಳವು, 7 ಮೋಸದ ಪ್ರಕರಣಗಳನ್ನು ಪತ್ತೆಹಚ್ಚಿ ಪೂರ್ವ ವಿಭಾಗದಲ್ಲಿ ಒಟ್ಟು 275 ಪ್ರಕರಣಗಳನ್ನು ಪತ್ತೆಹಚ್ಚಿರುತ್ತಾರೆ.
ಅವುಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು 9 ಪ್ರಕರಣ, ಶಿವಾಜಿನಗರ ಪೊಲೀಸರು 2 ಪ್ರಕರಣ, ಡಿ.ಜೆ ಹಳ್ಳಿ 23 ಪ್ರಕರಣ ಪುಲಕೇಶಿನಗರ ಪೊಲೀಸರು 14 ಪ್ರಕರಣ, ಭಾರತೀನಗರ ಪೊಲೀಸರು 6 ಪ್ರಕರಣ ಮಹದೇವಪುರ ಪೊಲೀಸರು 15 ಪ್ರಕರಣಗಳನ್ನು ಜೆ.ಬಿ ನಗರ ಪೊಲೀಸರು 11 ಪ್ರಕರಣ, ಬೈಯಪ್ಪನಹಳ್ಳಿ ಪೊಲೀಸರು 14 ಪ್ರಕರಣ, ಹಲಸೂರು ಪೊಲೀಸರು 17 ಪ್ರಕರಣ, ಇಂದಿರಾನಗರ ಪೊಲೀಸರು 15 ಪ್ರಕರಣ, ಕೆ.ಜಿ ಹಳ್ಳಿ ಪೊಲೀಸರು 48 ಪ್ರಕರಣ, ಹೆಣ್ಣೂರು ಪೊಲೀಸರು 22 ಪ್ರಕರಣ, ಬಾಣಸವಾಡಿ ಪೋಲೀಸರು 25 ಪ್ರಕರಣ, ಕೆ.ಆರ್ ಪುರ ಪೊಲೀಸರು 12 ಪ್ರಕರಣ ಮತ್ತು ರಾಮಮೂರ್ತಿನಗರ ಪೊಲೀಸರು 42 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.












Click it and Unblock the Notifications