ನೆದರ್ ಲ್ಯಾಂಡ್ಸ್ ನಲ್ಲೂ ಆರಂಭವಾಯ್ತು ಇನ್ಫಿ ಬಿಪಿಒ!

ನೆದರ್ ಲ್ಯಾಂಡ್ಸ್ Eindhovenದಲ್ಲಿ ಈ ಹೊಸ ಕೇಂದ್ರದ ಸ್ಥಾಪನೆಯೊಂದಿಗೆ Europe, Middle East ಮತ್ತು Africa (EMEA) ಭಾಗದಲ್ಲಿ ತ್ವರಿತವಾಗಿ ಮತ್ತು ಹೆಚ್ಚು ದಕ್ಷತೆಯಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಕೇಂದ್ರದಲ್ಲಿ ಪ್ರಸ್ತುತ 120 ಮಂದಿ ಉದ್ಯೋಗಿಗಳಿದ್ದು, ಜಾಗತಿಕ ಮಟ್ಟದಲ್ಲಿ ತನ್ನ ಸೇವಾಜಾಲವನ್ನು ವಿಸ್ತರಿಸಲು ಸಾಧ್ಯವಾಗಲಿದೆ ಎಂದು ಕಂಪನಿ ಆಶಿಸಿದೆ.
ಜಾಗತಿಕವಾಗಿ ಆಯಕಟ್ಟಿನ ಜಾಗದಲ್ಲಿ ಹಣಕಾಸು ಮತ್ತು ಲೆಕ್ಕ ವಹಿವಾಟು ಕ್ಷೇತ್ರ ಸೇರಿದಂತೆ ಜಾಗತಿಕ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಯನ್ನೊದಗಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
580 ದಶಲಕ್ಷ ಡಾಲರ್ ಮೌಲ್ಯದ Infosys BPO ಕಂಪನಿಯ ಈ ಅಂಗ ಸಂಸ್ಥೆಯ ಸ್ಥಾಪನೆಯಿಂದ ಎಲ್ಲ ಭಾಷೆ, ಗಡಿ, ಸಮಯಕ್ಕೆ ತ್ವರಿತವಾಗಿ ಸೇವೆಗೆ ಲಭ್ಯವಾಗಲಿದೆ ಎಂದು Infosys BPO CEO - MD ಗೌತಂ ಥಕ್ಕರ್ ತಿಳಿಸಿದ್ದಾರೆ.












Click it and Unblock the Notifications