ಈ 7 ಔಷಧ ಬಳಸಬೇಡಿ: ಬೆಂಗಳೂರು ಡ್ರಗ್ ಕಂಟ್ರೋಲರ್

bangalore-drugs-control-department-advises-not-to-use-7-medicines
ಬೆಂಗಳೂರು, ಏಪ್ರಿಲ್ 23: ಸೂಚಿತ ಗುಣಮಟ್ಟ ಹೊಂದಿಲ್ಲದ 7 ಔಷಧಗಳನ್ನು ಬಲಸದಂತೆ ರಾಜ್ಯ ಔಷಧ ನಿಯಂತ್ರಕ ಇಲಾಖೆ ಸೂಚಿಸಿದೆ. ಈ ಔಷಧಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕೆಂದು ಔಷಧ ನಿಯಂತ್ರಕ ರಘುರಾಮ ಭಂಡಾರಿ ಅವರು ಮನವಿ ಮಾಡಿದ್ದಾರೆ.

ಸರ್ಕಾರಿ ವಿಶ್ಲೇಷಕರು, ಔಷಧ ಪ್ರಯೋಗಾಲಯ- ಹುಬ್ಬಳ್ಳಿ ಮತ್ತು ಬಳ್ಳಾರಿಯ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರ ಜಂಟಿ ಪರಿಶೀಲನೆಯ ನಂತರ ಈ ಏಳೂ ಔಷಧಗಳ ಗುಣಮಟ್ಟದಲ್ಲಿ ಲೋಪವಿರುವುದು ಕಂಡುಬಂದಿದೆ. ಹಾಗಾಗಿ ಔಷಧಗಳನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕಾಗಿ ಭಂಡಾರಿ ಮನವಿ ಮಾಡಿದ್ದಾರೆ.

* ಆಸ್ಪೆನ್ ಲೈಫ್ ಸೈನ್ಸಸ್ ಕಂಪನಿಯ ಅಂಬ್ರೋಕ್ಸಾಲ್ ಹೈಡ್ರೋಕ್ಲೋರೈಡ್ ಗ್ಯೂಫೆನೇಸಿನ್ ಮತ್ತು ಲೆವೊಸಾಲ್ಬುಟಮಲ್ ಸಲ್ಫೈಡ್ ಸಿರಪ್‌ ಬ್ಯಾಚ್ ಸಂಖ್ಯೆ ಎ-3169.
* ಯಾಕೋ ಫಾರ್ಮದ ಜಿಪ್ ರ್‍ಯಾಬ್ 20 ಟ್ಯಾಬ್ಲೆಟ್ಸ್ ಬ್ಯಾಚ್ ಸಂಖ್ಯೆ ವೈಪಿ 13002 ಹಾಗೂ ಫಾರ್ಮ ಕೆಮಿಕೋ ಲ್ಯಾಬರೇಟರೀಸ್‌ ಎಕ್ಸ್‌ಕ್ಯೂರ್ ಟ್ಯಾಬ್ಲೆಟ್ಸ್‌ ಬ್ಯಾಚ್ ಸಂಖ್ಯೆ 1043 ಕೂಡ ಗುಣಮಟ್ಟ ಹೊಂದಿಲ್ಲ ಎಂದು ನಿಯಂತ್ರಕರು ತಿಳಿಸಿದ್ದಾರೆ.
* ಝೀ ಲ್ಯಾಬೊರೇಟರೀಸ್‌ ಎಕ್ಸ್‌ಫೆನಿಕಲ್‌ ಬ್ಯಾಚ್ ಸಂಖ್ಯೆ ಝಡಿಎಸ್-224 ಹಾಗೂ ಎಲಿಗೆಂಟ್ ಡ್ರಗ್ಸ್‌ ಬಿಸಾಕೊಡಿಲ್ ಟ್ಯಾಬ್ಲೆಟ್ಸ್‌ನ ಬ್ಯಾಚ್ ಸಂಖ್ಯೆ ಇಬಿಟಿ01 ಕೂಡ ಬಳಕೆಗೆ ಯೋಗ್ಯವಾಗಿಲ್ಲ.
* ಮ್ಯಾಗ್ನಸ್ ಬಯೋಟಿಕ್‌ ಮ್ಯಾಗ್ರಾಬ್ ಟ್ಯಾಬ್ಲೆಟ್ಸ್ ಟಿ-260 ಹಾಗೂ ಕ್ವಿಸ್ಟ್ ಲ್ಯಾಬೋರೇಟರೀಸ್‌ ಟಿನಿವರ್ಮ್ ಬ್ಯಾಚ್ ಸಂಖ್ಯೆ ಕೂಡ ಗುಣಮಟ್ಟದಿಂದ ಕೂಡಿಲ್ಲ ಹಾಗೂ ಬಳಕೆಗೆ ಯೋಗ್ಯವಾಗಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಔಷಧಿಗಳನ್ನು ವ್ಯಾಪಾರಿಗಳು, ಸಗಟು ಮಾರಾಟಗಾರರು, ವೈದ್ಯರು , ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು, ಮಾರಾಟ ಹಾಗೂ ಉಪಯೋಗ ಮಾಡಬಾರದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಇಂತಹ ಔಷಧಗಳ ದಾಸ್ತಾನಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕೆಂದು ಸೂಚಿಸಿದ್ದಾರೆ. ಸಾರ್ವಜನಿಕರು ಇಂತಹ ಗುಣಮಟ್ಟವಿಲ್ಲದ ಔಷಧಿಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು. ಔಷಧಗಳನ್ನು ಬಳಸುವಾಗ ಎಚ್ಚರಿಕೆಯಿಂದ ಅದರ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+