ವಿಲ್ಸನ್ ಗಾರ್ಡನ್: ಲೈವ್ ಬ್ಯಾಂಡ್ 55 ಯುವತಿಯರ ಸೆರೆ

ಖಚಿತ ಮಾಹಿತಿ ಮೇರೆಗೆ ಡಬಲ್ ರೋಡ್ ನಲ್ಲಿರುವ 'ಬೆಂಗಳೂರು ಶೇಖರ್ಸ್ ಲೈವ್ ಬ್ಯಾಂಡ್' ಮೇಲೆ ನಿನ್ನೆ ಬುಧವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ಲೈವ್ ಬ್ಯಾಂಡಿನಲ್ಲಿದ್ದ ನರ್ತಕಿಯರ ಸಮೂಹ, ಯುವಕರು ಮತ್ತು ಲೈವ್ ಬ್ಯಾಂಡ್ ಮಾಲೀಕ ಜಯರಾಂನನ್ನೂ ಬಂಧಿಸಿದ್ದಾರೆ.
ಲೈವ್ ಬ್ಯಾಂಡಿನಲ್ಲಿ ನರ್ತಕಿಯರು ಯಾವ ಪಾಟಿಯಿದ್ದರು ಅಂದರೆ ಅವರನ್ನೆಲ್ಲಾ ಬಂಧಿಸಿ ಕರೆದೊಯ್ಯಲು ಪೊಲೀಸ್ ಜೀಪು ಸಾಲದಾಗಿ, ವೋಲ್ವೋ ಬಸ್ಸಿನಲ್ಲಿ ಸಿಸಿಬಿ ಕಚೇರಿಗೆ ಟ್ರಿಪ್ ಹೋಗುವಂತೆ ಕರೆದೊಯ್ಯಲಾಗಿದೆ.
ಬೆಂಗಳೂರಿನಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಲೈವ್ ಬ್ಯಾಂಡ್ ಯುವತಿಯರನ್ನು ಬಂಧಿಸಿರುವುದು ಇದೇ ಮೊದಲು. ಬಂಧಿತರನ್ನೆಲ್ಲಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿಡಲಾಗಿದ್ದು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಶೇಖರ್ ಲೈವ್ ಬ್ಯಾಂಡಿನಲ್ಲಿದ್ದ ಸಿಸಿಟಿವಿಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಯುವತಿಯರೆಲ್ಲ ಹೊರ ರಾಜ್ಯದವರು. ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಈ ದಾಳಿ ನಡೆಸಿದ್ದಾರೆ ಎಂದು ಸಿಸಿಬಿ DCP ಅಭಿಷೇಕ್ ಗೋಯಲ್ ತಿಳಿಸಿದ್ದಾರೆ.












Click it and Unblock the Notifications