BMTC: ಆನ್ ಲೈನ್ ಮೂಲಕ ನೇರ ನೇಮಕಾತಿ
ಬೆಂಗಳೂರು, ಫೆ. 15: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಆನ್ ಲೈನ್ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಸಜ್ಜಾಗಿದೆ. ಸಂಸ್ಥೆಯಲ್ಲಿ ಸುಮಾರು 1400 ಹುದ್ದೆಗಳು ಖಾಲಿಯಿದ್ದು, ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಫೆಬ್ರವರಿ 15ರಂದು ಸಂಸ್ಥೆಯು ಪತ್ರಿಕಾ ಜಾಹೀರಾತು ನೀಡಿದೆ. ಹುದ್ದೆಯ ಅರ್ಹತೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ವಿವರಗಳು ವೆಬ್ ಸೈಟ್ www.bmtccareers.comನಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹ ವಿದ್ಯಾರ್ಹತೆ, ವಯೋಮಿತಿ, ದೇಹ ದಾರ್ಢ್ಯತೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇನ್ನಿತರ ಸಂಪೂರ್ಣ ಮಾಹಿತಿಗಳನ್ನು ಸಂಸ್ಥೆಯ ಸೂಚನಾ ಫಲಕ ಅಥವಾ ಸಂಸ್ಥೆಯ ವೆಬ್ ಸೈಟ್ ನಲ್ಲಿ ನೀಡಲಾಗಿದೆ. ಹುದ್ದೆಗಳ ವರ್ಗಾವಾರು ವರ್ಗೀಕರಣ ಜಾಹೀರಾತನ್ನು ನೋಡಿ ವಿವರ ಪಡೆಯುವುದು.












Click it and Unblock the Notifications