ಸ್ಕೈಡೈವಿಂಗ್‌: ಪತಿಯ ಕಣ್ಣೆದುರಿಗೇ ನವವಿವಾಹಿತೆ ಸಾವು

ಬೆಂಗಳೂರು, ಜ.31: ಇದೇನು ದುರ್ವಿಧಿಯೋ ಅಥವಾ ಬೇಕೆಂದೇ ಆಹ್ವಾನಿಸಿಕೊಂಡಿದ್ದೋ ಅಂತೂ ಮದುವೆಯಾದ ಒಂದು ವರ್ಷಕ್ಕೆ ಸಂಭ್ರಮಾಚರಣೆಗೆಂದು ಹೋದ ನವದಂಪತಿ ಘೋರ ದುರಂತ ಕಂಡಿದೆ. ಸ್ಕೈ ಡೈವಿಂಗ್‌ ಎಂಬ ದುಬಾರಿ ಹವ್ಯಾಸ ಹೊಂದಿದ್ದ ದಂಪತಿ ಆಗಸದಲ್ಲಿ ಪ್ರಥಮ ವಾರ್ಷಿಕಾಚರಣೆ ಮಾಡಲು ಹೋಗಿ ದುಬಾರಿ ಅನಾಹುತ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ವಿನೋದ್‌ ಅಯ್ಯರ್ (28) ಮತ್ತು ಕೇರಳ ಮೂಲದ ರಮ್ಯಾ (24) ದಂಪತಿಯೇ ಈ ದುರಂತಕ್ಕೀಡಾದವರು. ದಂಪತಿ ಸ್ಕೈ ಡೈವಿಂಗ್‌ ನಲ್ಲಿ ನಿರತರಾಗಿದ್ದಾಗ ಸುಮಾರು 10 ಸಾವಿರ ಅಡಿ ಎತ್ತರದಿಂದ ಹಾರಿಬಿದ್ದ ರಮ್ಯಾ, ಪತಿ ವಿನೋದ್‌ ಕಣ್ಣೇದುರಿಗೇ 24 ಸೆಕೆಂಡುಗಳಲ್ಲಿ ದುರಂತ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಸೇಲಂ ಬಳಿಯ ಓಮಲೂರು (Omalur) ಬಳಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

Bangalore-based couple Skydiving tragedy Skydiving wife Ramya died

skydiving exercise ಸಂದರ್ಭದಲ್ಲಿ 10 ಸಾವಿರ ಅಡಿ ಎತ್ತರದಿಂದ ಹಾರಿದ್ದ ರಮ್ಯಾ, 6 ಸಾವಿರ ಅಡಿ ಕೆಳಗೆ ಹಾರಿದ ನಂತರ ಪ್ಯಾರಾಚೂಟ್‌ ಬಿಚ್ಚಿಕೊಳ್ಳುತ್ತದೆ ಎಂದು ಭಾವಿಸಿ, ಹಾರಿದ್ದರು. ಆದರೆ ಕೈಕೊಟ್ಟ ಪ್ಯಾರಾಚೂಟ್‌ ಕೊನೆಯವರೆಗೂ ಬಿಚ್ಚಿಕೊಳ್ಳದೇ, ರಮ್ಯವಾದ ಬದುಕನ್ನು ಮುದುಡಿಸಿದೆ. ರಮ್ಯಾ ಸುರಕ್ಷಿತವಾಗಿ ಕೆಳಗೆ ಹಾರಿದ ನಂತರ ಅದೇ ವಿಮಾನದಲ್ಲಿದ್ದ ವಿನೋದ್‌ ಸಹ ಹಾರಬೇಕಿತ್ತು. ಆದರೆ ಅಷ್ಟರೊಳಗೆ ಕೆಳಗೆ ಅನಾಹುತ ನಡೆದಿತ್ತು. [Skydiving Spots in India]

ಬೆಂಗಳೂರು ಮೂಲದ ಇಂಡಿಯನ್‌ ಸ್ಕೈಡೈವಿಂಗ್‌ ಹಾಗೂ ಪ್ಯಾರಾಚೂಟ್‌ ಅಸೋಸಿಯೇಷನ್‌ (Indian Skydiving and Parachute Association- ISPA) ಈ ಸ್ಕೈಡೈವಿಂಗ್‌ ತರಬೇತಿಯನ್ನು ಆಯೋಜಿಸಿತ್ತು. ಐದು ಮಂದಿ ಮಹಿಳೆಯರು ಸೇರಿ ಒಟ್ಟು 11 ಮಂದಿ ಸ್ಕೈಡೈವಿಂಗ್‌ ನಲ್ಲಿ ಪಾಲ್ಗೊಂಡಿದ್ದರು.

ರಮ್ಯಾ-ವಿನೋದ್‌ ದಂಪತಿ ತಾವಾಗಿಯೇ ಮೃತ್ಯಕೂಪಕ್ಕೆ ಆಹ್ವಾನ ಪಡೆದುಕೊಂಡಿದ್ದಾರೆ. ಆದರೆ ಘಟನೆಗೆ ಸ್ಕೈಡೈವಿಂಗ್‌ ಸಂಸ್ಥೆಯವರು ಕಾರಣಾಗಿದ್ದಾರೆ. ಜತೆಗೆ, ಘಟನೆಯ ನಂತರ ದಿವ್ಯ ನಿರ್ಲಕ್ಷವನ್ನೂ ತೋರಿದ್ದಾರೆ ಎಂದು ಪೊಲೀಸರು ಸಂಸ್ಥೆಯ ನಾಲ್ವರನ್ನು ಬಂಧಿಸಿದ್ದಾರೆ.

ರಮ್ಯಾ ದಂಪತಿಗೆ ಆರಂಭದಿಂದಲೇ ಸ್ಕೈಡೈವಿಂಗ್‌ ಹುಚ್ಚು ಹಿಡಿದಿದೆ. ಮದುವೆಯಾದ ಹೊಸದರಲ್ಲಿ ಯಶಸ್ವಿಯಾಗಿ ಸ್ಕೈಡೈವಿಂಗ್‌ ಹಾರಾಟ, ಮೆರೆದಾಟ ನಡೆಸಿಕೊಂಡು ಬಂದಿದ್ದಾರೆ. ಫೇಸ್ ಬುಕ್ ನಲ್ಲಿ ತಮ್ಮೀ ಪರಾಕ್ರಮದ ಬಗ್ಗೆ ಹೇಳಿಕೊಂಡಿದ್ದಾರೆ. 'ಸ್ಕೈಡೈವಿಂಗ್‌ ಅತ್ಯದ್ಭುತ. ಅದು ಗುಂಡಿಗೆ ಗಟ್ಟಿಯಿರುವವರಿಗೆ ಮಾತ್ರ. ಸ್ಕೈಡೈವಿಂಗ್‌ ಮಾಡದಿದ್ದರೆ ಜೀವನವೇ ವ್ಯರ್ಥ... ಎಂದೆಲ್ಲಾ' ಹೇಳಿಕೊಂಡಿದ್ದಾರೆ. ಆದರೆ ಈಗ ರಮ್ಯಾ ಜೀವವೇ ಹೋಗಿದೆ. ಬುಧವಾರವಷ್ಟೇ ರಮ್ಯಾ 3 ಸಾವಿರ ಅಡಿ ಮೇಲಿಂದ ಯಶಸ್ವಿಯಾಗಿ ಹಾರಿದ್ದರು. ಆದರೆ ಗುರುವಾರ ಪ್ಯಾರಾಚೂಟ್‌ ಅದೃಷ್ಟ ಕೈಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+