ಬೆಂಗಳೂರು ವಿಮಾನ ನಿಲ್ದಾಣಕ್ಕೆ 'ಹಸಿರು ಪ್ರಶಸ್ತಿ'
ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿಯನ್ನಾಗಿಸುವ ಉದ್ದೇಶದಿಂದ ಲೆವೆಲ್ 3 ಪ್ಲಸ್ ಇಂಗಾಲ ತಟಸ್ಥತೆ ನಿಯಮವನ್ನು ಅನುಸರಿಸಿದ್ದಕ್ಕೆ ಸಂದ ಹಿರಿಮೆ.
ಬೆಂಗಳೂರು, ಏಪ್ರಿಲ್ 26: ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕೌನ್ಸಿಲ್ ವತಿಯಿಂದ 'ಹಸಿರು ವಿಮಾನ ನಿಲ್ದಾಣ' ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿಯನ್ನಾಗಿಸುವ ಉದ್ದೇಶದಿಂದ ಲೆವೆಲ್ 3 ಪ್ಲಸ್ ಇಂಗಾಲ ತಟಸ್ಥತೆ ನಿಯಮವನ್ನು ಅನುಸರಿಸಿತ್ತು.

ಲೆವೆಲ್ 3 ಪ್ಲಸ್ ಇಂಗಾಲ ತಟಸ್ಥತೆಯು ಅಂತಾರಾಷ್ಟ್ರೀಯ ಏರ್ ಪೋರ್ಟ್ಸ್ ಕೌನ್ಸಿಲ್ ನಿಂದ ಇಂಗಾಲ ತಡೆಗೆ ನಿಗದಿಪಡಿಸಲಾಗಿರುವ ಅತ್ಯುನ್ನತ ಮಟ್ಟದ ನಿಯಮಾವಳಿಗಳು.
ಈ ನಿಯಮಾವಳಿಗಳನ್ನು ಅಳವಡಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣ, ತನ್ನಲ್ಲಿ ಶೇ. 57ರಷ್ಟು ಇಂಗಾಲ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡಿಕೊಂಡಿತ್ತು.
ಈ ಸಾಧನೆಗಾಗಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಕೌನ್ಸಿಲ್ ವತಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹಸಿರು ಪ್ರಶಸ್ತಿ ಪತ್ರ (ಗ್ರೀನ್ ಅವಾರ್ಡ್) ನೀಡಿ ಗೌರವಿಸಿದೆ.












Click it and Unblock the Notifications