ಆಚಾರ್ಯ ಮೀಡಿಯಾ ಕ್ರಿಕೆಟ್ ಫೆ. 19ರಿಂದ ಆರಂಭ

ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿರುವ ಆಚಾರ್ಯ ಮೀಡಿಯಾ ಕ್ರಿಕೆಟ್ ಟೂರ್ನಿಯನ್ನು ಐದನೆಯ ಬಾರಿಗೆ ಆಯೋಜಿಸಲಾಗಿದೆ. ಟೂರ್ನಿ ಈ ಬಾರಿಯೂ ನಾಲ್ಕು ದಿನಗಳ ಕಾಲ ನಡೆಯಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಆಚಾರ್ಯ ಶಿಕ್ಷಣ ಸಂಸ್ಥೆಗಳು ಆಯೋಜಿಸುವ ಆಚಾರ್ಯ ಹಬ್ಬದ ಅಂಗವಾಗಿ ಆಚಾರ್ಯ ಮೀಡಿಯಾ ಕ್ರಿಕೆಟ್ ಟೂರ್ನಿ ಜರುಗುತ್ತದೆ. ಆಚಾರ್ಯ ಶಿಕ್ಷಣ ಸಂಸ್ಥೆಯ ಶ್ರೀಮತಿ ನಾಗರತ್ನಮ್ಮ ಸ್ಟೇಡಿಯಂನಲ್ಲಿ ಟೂರ್ನಿ ನಡೆಯುತ್ತದೆ.
ಸುಮಾರು 18ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳು ಟೂರ್ನಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿವೆ. ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಫೀಲ್ಡರ್ ಮತ್ತು ಒಟ್ಟಾರೆಯಾಗಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಳು ಅತ್ಯುತ್ತಮ ಕ್ರೀಡಾಪಟುಗಳಿಗೆ ಸಂದಾಯವಾಗಲಿದೆ.
ಇನ್ನು, ಆಚಾರ್ಯ ಮೀಡಿಯಾ ಕ್ರಿಕೆಟ್ ಟೂರ್ನಮೆಂಟ್ ಚಾಂಪಿಯನ್ಸ್ ತಂಡಕ್ಕೆ 30,000 ರೂ. ನಗದು ಬಹುಮಾನ, ರನ್ನರ್ಸ್ ಅಪ್ ತಂಡಕ್ಕೆ 20,000 ರೂ. ನಗದು ಬಹುಮಾನ ಲಭಿಸಲಿದೆ. ಟೂರ್ನಮೆಂಟ್ ಪಂದ್ಯಾವಳಿಗಳಲ್ಲಿ ಪ್ರತಿ ತಂಡಕ್ಕೂ ತಲಾ 8 ಓವರ್ ಬೌಲಿಂಗ್ ಅವಕಾಶವಿರುತ್ತದೆ. ಮ್ಯಾಚ್ ಟೈ ಆದರೆ ಸೂಪರ್- ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ನಾಕ್ ಔಟ್ ಮಾದರಿಯಲ್ಲಿ ಟೂರ್ನಮೆಂಟ್ ನಡೆಯುತ್ತದೆ.
Suvarna News 24X7 ಈ ಬಾರಿಯ ಡಿಫೆಂಡಿಂಗ್ ಚಾಂಪಿಯನ್ಸ್. ಹಾಗೆಯೇ, Samaya TV ರನ್ನರ್ಸ್ ಅಪ್ ತಂಡವಾಗಿದೆ. ಆನ್ ಲೈನ್ ಮೀಡಿಯಾ ಪಾರ್ಟನರ್ ಸಹ ಆಗಿರುವ Oneindia ತಂಡವು ಕಳೆದ ವರ್ಷ ಸೆಮಿ ಫೈನಲ್ಸ್ ಹಂತಕ್ಕೆ ಬಂದಿತ್ತು. The Hindu ಮತ್ತು Kannada Prabha ಮುದ್ರಣ ಮಾಧ್ಯಮದ ಸಹಭಾಗಿತ್ವ ವಹಿಸಿತ್ತು. Suvarna News 24X7 ಟಿವಿ ಪಾರ್ಟನರ್ ಆಗಿದೆ. 104 FM Fever ರೇಡಿಯೋ ಪಾರ್ಟನರ್ ಆಗಿದೆ.












Click it and Unblock the Notifications