ನಿರ್ಮಾಣವಾಗಲಿದೆ 29 ಅಂತಸ್ತಿನ 'ಬಿಬಿಎಂಪಿ ಭವನ'

Bangalore 29 floors new BBMP bhvan to come up at headquarters,
ಬೆಂಗಳೂರು, ಅ.29: ದುರ್ಭಿಕ್ಷದಲ್ಲಿ ಅಧಿಕ ಮಾಸವೆಂಬಂತೆ ಈಗಾಗಲೇ ಹಣಕಾಸು ಮುಗ್ಗಟ್ಟಿನಿಂದ ಬಸವಳಿದಿರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು (ಬಿಬಿಎಂಪಿ) 29 ಅಂತಸ್ತಿನ ಬೃಹತ್ 'ಬಿಬಿಎಂಪಿ ಭವನ'ವನ್ನು ನಿರ್ಮಿಸಲು ತೀರ್ಮಾನಿಸಿದೆ.

ಸುಮಾರು 10.78 ಎಕರೆ ಪ್ರದೇಶಕ್ಕೆ ವ್ಯಾಪಿಸಿರುವ ಹಾಲಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ತನ್ನ ಇಡೀ ಆಡಳಿತ ವ್ಯವಸ್ಥೆಯನ್ನು ಒಂದೇ ಸೂರಿನಡಿ ಕೇಂದ್ರೀಕರಿಸುವ ಉದ್ದೇಶದಿಂದ ಕಟ್ಟಡ ನಿರ್ಮಿಸಲು ಇಂದು ನಡೆದ ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.

ಅಂದಹಾಗೆ ಬೃಹತ್ ಪಾಲಿಕೆ ಭವನ ನಿರ್ಮಿಸಲು 2010ರಲ್ಲೇ ಚಿಂತಿಸಲಾಗಿತ್ತು. ಇದೀಗ ಇನ್ನೆರಡು ವರ್ಷಗಳಲ್ಲಿ ಪಾಲಿಕೆ ಆವರಣದಲ್ಲಿ ಈ ಬೃಹತ್ ಭವನ ತಲೆ ಎತ್ತಲಿದೆ. ಆದರೆ ರಾಜ್ಯ ಸರಕಾರವು BBMPಯನ್ನು ನಾಲ್ಕಾರು ಭಾಗಗಳನ್ನಾಗಿ ಮಾಡಲು ಉದ್ದೇಶಿಸಿರುವಾಗ, ವಿಕೇಂದ್ರೀಕೃತವಾದರೆ 29 ಅಂತಸ್ತಿನ ಬೃಹತ್ ಕಟ್ಟಡದ ಅಗತ್ಯವಿರುವುದಿಲ್ಲ ಎಂಬ ಟೀಕೆ ಟಿಪ್ಪಣಿಗಳೂ ದಾಖಲಾಗಿವೆ.

BBMP Bhavan: ಮೇಯರ್, ಉಪ ಮೇಯರ್, ಆಯುಕ್ತರು, ಎಲ್ಲಾ ಸ್ಥಾಯಿ ಸಮಿತಿಗಳ ಕಚೇರಿಗಳು ಹಾಗೂ 600 ಮಂದಿ ಕುಳಿತುಕೊಳ್ಳುವ ಬೃಹತ್ ಸಭಾಂಗಣವೂ ಇರುವಂತೆ 29 ಅಂತಸ್ತಿನ ಬಿಬಿಎಂಪಿ ಭವನ ನಿರ್ಮಿಸಲು ಬೃಹತ್ ಕಾಮಗಾರಿಗಳ ಸ್ಥಾಯಿ ಸಮಿತಿ ನಿರ್ಣಯಗೊಂಡಿದೆ.

400 ಕೋಟಿ ವೆಚ್ಚದಲ್ಲಿ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ನೆರವಿನಲ್ಲಿ ಪಾಲಿಕೆ ವತಿಯಿಂದಲೇ ಈ ಭವನ ನಿರ್ಮಿಸಲು ಸೋಮವಾರ ನಡೆದ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭವನ ನಿರ್ಮಾಣದ ಯೋಜನಾ ವರದಿ ಸಿದ್ಧಪಡಿಸುವಂತೆ ಮೇಯರ್‌ ಕಟ್ಟೆ ಸತ್ಯನಾರಾಯಣ ಅವರು ಆಯುಕ್ತ ಎಂ ಲಕ್ಷ್ಮೀನಾರಾಯಣ ಅವರಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆ ಭವನ ನಿರ್ಮಿಸುವುದರಿಂದ ಅನೇಕ ಅನಗತ್ಯ ಕಟ್ಟಡಗಳು ನೆಲಸಮಗೊಳ್ಳುತ್ತವೆ. ಆದರೆ, ಪಾಲಿಕೆ ಮುಖ್ಯದ್ವಾರದ ಐತಿಹಾಸಿಕ ಕಲ್ಲು ಕಟ್ಟಡ ಹಾಗೂ ಪಾಲಿಕೆ ಕೌನ್ಸಿಲ್ ಕಟ್ಟಡಗಳನ್ನು ಸ್ಮಾರಕಗಳ ಮಾದರಿ ಉಳಿಸಿಕೊಳ್ಳಲಾಗುತ್ತದೆ.

ಹಾಗೆಯೇ ಹೆಚ್ಚು ಜಾಗ ಆಕ್ರಮಿಸಿರುವ ಡಾ. ರಾಜ್‌ಕುಮಾರ್ ಗಾಜಿನ ಮನೆಯನ್ನು ಕಂಠೀರಣ ಸ್ಟುಡಿಯೋದಲ್ಲಿರುವ ಡಾ. ರಾಜ್ ಸಮಾಧಿ ಸಮೀಪಕ್ಕೆ ವರ್ಗಾಯಿಸಲಾಗುತ್ತದೆ. ಈ ಬಗ್ಗೆ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೂ ಮಾತುಕತೆ ನಡೆಸಲಾಗಿದ್ದು, ಕುಟುಂಬ ವರ್ಗದವರೂ ಒಪ್ಪಿಗೆ ನೀಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+