• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನಾರಸ್: ಪಂಚ ಭಾಷೆಗಳಲ್ಲಿ ಟ್ರೇಲರ್ ವೀಕ್ಷಿಸಿದವರ ಸಂಖ್ಯೆ ಎಷ್ಟು ಮಿಲಿಯನ್ ಗೊತ್ತಾ..?

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ಸದ್ಯ ಸಿನಿಮಾ ನೋಡುವ ಕಾತುರತೆಯನ್ನು ಹುಟ್ಟು ಹಾಕಿರುವುದು ಬನಾರಸ್ ಸಿನಿಮಾ. ಅದಕ್ಕೆ ಹತ್ತು ಹಲವು ಕಾರಣಗಳಿವೆ. ಮಾಯಗಂಗೆ ಸಾಂಗ್ ಹಿಟ್ ಆದಮೇಲೆ ಸಿನಿಮಾ ಹೇಗಿರಬಹುದು ಎಂಬ ಊಹೆ ಸೃಷ್ಟಿಯಾಗಿತ್ತು. ಆ ಊಹೆಗೂ ಮೀರಿ ಈಗ ಟ್ರೇಲರ್ ಎಲ್ಲರ ಮನಸ್ಸಲ್ಲಿ ಕೂತು ಬಿಟ್ಟಿದೆ. ಇತ್ತಿಚೆಗಷ್ಟೇ ಬನಾರಸ್ ಚಿತ್ರತಂಡ ಮಾಧ್ಯಮವರನ್ನೆಲ್ಲಾ ಕರೆಸಿ, ಸಖತ್ ಪ್ರೋಗ್ರಾಂ ಕೂಡ ಮಾಡಿತ್ತು. ವಾರದ ಹಿಂದಷ್ಟೇ ದೊಡ್ಡ ವೇದಿಕೆ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆಗೊಂಡಿತ್ತು. ಹಾಗೆ ಬಿಡುಗಡೆಯಾಗಿದ್ದ ಟ್ರೈಲರ್‌ಗೆ ಈಗ 10 ಮಿಲಿಯನ್ನಿಗೂ ಅಧಿಕ ವೀವ್ಸ್ ಸಿಕ್ಕಿದೆ.

ಟ್ರೇಲರ್ ನೋಡಿದವರೆಲ್ಲಾ ಯಾವುದೋ ಹೊಸ ಪ್ರಪಂಚಕ್ಕೆ ಹೋದವರಂತೆ ಫೀಲ್ ಆಗಿದ್ದಾರೆ. ವಿಷ್ಯುವಲೈಸೇಷನ್ ಕಣ್ಣಿಗೆ ಕಲರ್ ಫುಲ್ ದುನಿಯಾವನ್ನೇ ಕಟ್ಟಿಕೊಟ್ಟಿದರ. ಅಟ್ ದಿ ಸೇಮ್ ಟೈಮ್ ಎದೆ ಝಲ್ ಎನ್ನುವಂತ ಸಬ್ಜೆಕ್ಟ್ ಕೂಡ ಅಡಗಿದೆ. ಈ ಎಲ್ಲಾ ಅಂಶಗಳು ಪ್ರೇಕ್ಷಕರನ್ನು ಹಿಡಿದಿಟ್ಟಿದೆ ಎನ್ನಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಟ್ರೇಲರ್ ಪಂಚ ಭಾಷೆಗಳಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದಿದೆ.

ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಮೊದಲ ಬಾರಿಗೆ ಹೊಸ ಹೀರೋಗೆ ಪ್ಯಾನ್ ಇಂಡಿಯಾ ಲೆವೆಲ್ ಗೆ ಸಿನಿಮಾ ಸಿದ್ಧವಾಗಿದೆ. ಕನ್ನಡ ಸೇರಿದಂತೆ ಟ್ರೇಲರ್ ಕೂಡ ಪಂಚಭಾಷೆಯಲ್ಲಿ ರಿಲೀಸ್ ಆಗಿದೆ. ಸುಮಾರು ಹತ್ತು ಮಿಲಿಯನ್‌ಗಿಂತ ಅಧಿಕ ವೀಕ್ಷಣೆ ಪಡೆದಿದೆ. ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡ ಟ್ರೇಲರ್ ರಿಲೀಸ್ ದಿನ ಸಾಥ್ ನೀಡಿದ್ದರು. ಟ್ರೇಲರ್ ರಿಲೀಸ್ ಮಾಡಿ ರವಿಚಂದ್ರನ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಅವರೆಲ್ಲರ ಮೆಚ್ಚುಗೆಯೇ ಜನರ ಮೆಚ್ಚುಗೆಯೂ ಆಗಿದೆ.

ಜಯತೀರ್ಥ ನಿರ್ದೇಶನ ಎಂದಾಗಲೇ ಸಿನಿಮಾ ಮೇಲಿನ ಭರವಸೆ, ನಿರೀಕ್ಷೆ ಎರಡು ಮನದಲ್ಲಿ ಕುಳಿತು ಬಿಡುತ್ತದೆ. ಬನಾರಸ್ ಸಿನಿಮಾ ಬಗ್ಗೆ ಒಂದಷ್ಟು ಪಾಸಿಟಿವ್ ಟಾಕ್ ಕ್ರಿಯೇಟ್ ಆಗುವುದಕ್ಕೂ ಜಯತೀರ್ಥ ಡೈರೆಕ್ಷನ್ ಕಾರಣವಾಗಿದೆ. ಇನ್ನು ಹೊಸ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಝೈದ್ ಖಾನ್ ನಟನೆಯನ್ನು ಸಾಂಗ್, ಟ್ರೇಲರ್ ಮೂಲಕ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ಯಾವ ರೀತಿಯ ಕಮಾಲ್ ಮಾಡುತ್ತಾರೆ ಎಂಬ ಕುತೂಹಲವಂತು ಇದೆ.

Banaras: Do you know how many million people watched the trailer in five languages?

ಝೈದ್ ಖಾನ್ ಜೊತೆಗೆ ಸೋನಲ್ ಮೊಂತೇರೋ ಜೋಡಿಯಾಗಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಸುಜನ್ ಶಾಸ್ತ್ರಿ, ಸ್ವಪ್ನಾ ಅವರಂತ ದೊಡ್ಡ ದೊಡ್ಡ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಜಯತೀರ್ಥ ನಿರ್ದೇಶನದಲ್ಲಿ ತಿಲಕ್ ರಾಜ್ ಬಲ್ಲಾಳ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಬನಾರಸ್ ಸಿನಿಮಾಗಿದೆ. ನವೆಂಬರ್ 4ರಂದು ಸಿನಿಮಾ ತೆರೆಗೆ ಬರಲಿದೆ.

English summary
Banaras trailer was released recently. The trailer which was released like that has now got more than 10 million views.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X