ಬೈಯಪ್ಪನಹಳ್ಳಿ-ಕೆ.ಆರ್.ಪುರಂ ಮೆಟ್ರೋ ನಿಲ್ದಾಣ: ಬಿಎಂಟಿಸಿ ಫೀಡರ್ ಬಸ್‌ಗಳಿಂದ ನಿತ್ಯ 160 ಟ್ರಿಪ್, ಪ್ರಯಾಣಿಕರ ಹೆಚ್ಚಳ ಸಂಭವ
ಬೆಂಗಳೂರು, ಮಾರ್ಚ್ 28: ಕೆ.ಆರ್.ಪುರಂ-ವೈಟ್‌ಫಿಲ್ಡ್ ಮೆಟ್ರೋ ಮಾರ್ಗ ಆರಂಭವಾಗಿದೆ. ಆದರೆ ಕೆ.ಆರ್.ಪುರಂನಿಂದ ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ಸಂಚಾರ ಆರಂಭವಾಗಿಲ್ಲ. ಈ ಮಧ್ಯೆ ವೈಟ್‌ಫಿಲ್ಡ್ ಹೋಗುವವರಿಗೆ ಬಿಎಂಟಿಸಿ ಫಿಡರ್ ಬಸ್‌ಗಳು ನಿತ್ಯ ಉತ್ತಮ ಸೇವೆ ಒದಗಿಸುತ್ತಿದೆ. ಎಷ್ಟು ಬಸ್‌ಗಳು, ಟ್ರಿಪ್‌ಗಳ ಮಾಹಿತಿ ಇಲ್ಲಿದೆ.
ವೈಟ್‌ಫಿಲ್ಡಗೆ ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ ಎಂಬುದು ಮೊದಲ ದಿನ BMRCL ಬಹಿರಂಗ ಪಡಿಸಿದ ಅಂಕಿ ಅಂಶಗಳಿಂದ ಗೊತ್ತಾಗಿತ್ತು. ಸದ್ಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಫಿಡರ್ ಬಸ್ ಸೇವೆಗಳ ಟ್ರೀಪ್‌ಗಳಿಂದ ಅದು ಮತ್ತೊಮ್ಮೆ ಸಾಬೀತಾಗಿದೆ.

ಬೈಯಪ್ಪನಹಳ್ಳಿ ಸುತ್ತಮುತ್ತಲಿನ ಪ್ರದೇಶದಿಂದ ವೈಟ್‌ಫಿಲ್ಡ್ ಕಡೆಗೆ ಹೋಗುವವರಿಗೆ ಬಿಎಂಟಿಸಿ ಫಿಡರ್ ಬಸ್‌ಗಳು ಸಾಕಷ್ಟು ಆಸರೆಯಾಗಿವೆ. ಬಿಎಂಟಿಸಿ ನೀಡಿರುವ ಮಾಹಿತಿ ಪ್ರಕಾರ ಪ್ರತಿನಿತ್ಯ ಬಸ್‌ಗಳು 160 ಟ್ರಿಪ್ ಮಾಡಿವೆ. ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ಮೆಟ್ರೋ ನಿಲ್ದಾಣಗಳ ನಡುವೆ ಐದು ಫೀಡರ್ ಬಸ್ ಬಿಡಲಾಗಿದೆ.
ಪ್ರತಿ ದಿನ 160 ಟ್ರಿಪ್
ಅಂದರೆ ಒಂದು ಕಡೆ 80ಟ್ರಿಪ್‌ಗಳಂತೆ ಎರಡು ಕಡೆಗೆ ಒಟ್ಟು 160 ಟ್ರಿಪ್‌ಗಳನ್ನು ಮಾಡಿದೆ ಎಂದು ಇತ್ತೀಚೆಗೆ ವೇಳಾಪಟ್ಟಿ ಸಿದ್ದಪಡಿಸಿದರುವ ಬಿಎಂಟಿಸಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ವ್ಯವಸ್ಥೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೊಸದಾಗಿ ತೆರೆದಿರುವ ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಬಳಸುವ ಪ್ರಯಾಣಿಕರಿಗೆ ಸಹಾಯ ಮಾಡಲು ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವೆ ಪ್ರತಿದಿನ ಫೀಡರ್ ಬಸ್ 160 ಟ್ರಿಪ್ ಸೇವೆಗಳನ್ನು ನೀಡುತ್ತಿವೆ.

ಕೆಆರ್ ಪುರ-ವೈಟ್‌ಫೀಲ್ಡ್ ಮೆಟ್ರೊ ಮಾರ್ಗವನ್ನು ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ಮೆಟ್ರೊ ನಿಲ್ದಾಣಗಳ ನಡುವೆ ಫೀಡರ್ ಬಸ್‌ಗಳ ಬಗ್ಗೆ ಗೊಂದಲವಿದೆ ಎಂದು ಅನೇಕ ಪ್ರಯಾಣಿಕರು ದೂರಿದ್ದಾರೆ. ಕಾರಣ ಬಸ್‌ಗಳಿಗೆ ಸರಿಯಾದ ಸೂಚನಾ ಫಲಕ ಮತ್ತು ಗೊತ್ತುಪಡಿಸಿದ ಬಸ್ ನಿಲ್ದಾಣಗಳ ಕೊರತೆಯಂತಹ ಅವ್ಯವಸ್ಥೆ ಇದೆ ಎನ್ನಲಾಗಿದೆ.
ಬೈಯಪ್ಪನಹಳ್ಳಿ-ಕೆಆರ್ ಪುರಂ: ತೆರೆಯುವವರೆಗೆ ಫಿಡರ್ ಬಸ್ ಸೇವೆ
ಟಿನ್ ಫ್ಯಾಕ್ಟರಿ ಸ್ಟಾಪ್‌ನಲ್ಲಿ ಮಧ್ಯದಲ್ಲಿ ಬಿಡುವ ಸಾಮಾನ್ಯ ಬಸ್‌ಗಳಿಗೆ ಹೋಗಲು ಒತ್ತಾಯಿಸಲಾಯಿತು ಎಂದು ಅನೇಕ ಪ್ರಯಾಣಿಕರು ಹೇಳಿದರು. ಕೆ.ಆರ್ ಪುರ ತಲುಪಲು ಬೇರೆ ಬಸ್‌ನಲ್ಲಿ ಹೋಗಬೇಕಿತ್ತು. ಫೀಡರ್ ಬಸ್ ಸೇವೆಗಳು 13.71-ಕಿಮೀ ಕೆಆರ್ ಪುರ-ವೈಟ್‌ಫೀಲ್ಡ್ ಮತ್ತು 25.66 ಕಿಲೋ ಮೀಟರ್ ಕೆಂಗೇರಿ-ಬೈಯಪ್ಪನಹಳ್ಳಿ ಮಾರ್ಗಗಳ ನಡುವೆ ನಿರ್ಣಾಯಕ ಸಂಪರ್ಕವನ್ನು ಒದಗಿಸುತ್ತವೆ. ಮುಂದಿನ ಕೆಲವು ತಿಂಗಳುಗಳಲ್ಲಿ 2.1-ಕಿಮೀ ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ಮಾರ್ಗ ತೆರೆಯುವವರೆಗೂ ಈ ಫಿಡರ್ ಬಸ್ ಸೇವೆ ಮುಂದುವರಿಯಲಿದೆ.
ಸೋಮವಾರ ಫೀಡರ್ ಬಸ್‌ಗಳಲ್ಲಿ 3,000 ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ಈ ವಾಡ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಒಂದು ಮಾರ್ಗದ ದರವು 10 ರೂಪಾಯಿ ಎಂದು ಅಧಿಕಾರಿ ತಿಳಿಸಿದರು. ಮಾರ್ಗ ಉದ್ಘಾಟನೆಯ ಎರಡನೇ ದಿನ ನಿರೀಕ್ಷೆಗಿಂತ ಕಡಿಮೆ ಮಂದಿ ಪ್ರಯಾಣ ಮಾಡಿದ್ದಾರೆ. ಸೋಮವಾರ ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ ಹೊಸದಾಗಿ ತೆರೆದ ಮೆಟ್ರೋ ಮಾರ್ಗದಲ್ಲಿ 17,846 ಮಂದಿ ಪ್ರಯಾಣಿಸಿದ್ದಾರೆ.
ಇನ್ನೂ ಮೊದಲ ದಿನವಾದ ಭಾನುವಾರ ಬೆಳಗ್ಗೆ 7ಗಂಟೆಯಿಂದ ರಾತ್ರಿ 11 ಗಂಟೆವರೆಗೆ 27,379 ಪ್ರಯಾಣಿಕರು ಸಂಚರಿಸಿದ್ದಾರೆ.
ಮೊದಲ ದಿನ ಹೆಚ್ಚಿನ ಸವಾರರು ಸಾರ್ವಜನಿಕರ ಉತ್ಸಾಹಕ್ಕೆ ಕಾರಣವಾಗಿದೆ. ವಾರದ ಮಧ್ಯದ ವೇಳೆಗೆ ಸವಾರರು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications