ಬನ್ನೇರುಘಟ್ಟದಲ್ಲಿ ಆನೆಮರಿ ಹುಟ್ಟುಹಬ್ಬ: ಫ್ರುಟ್ಸ್ ಕೇಕ್ ಕತ್ತರಿಸಿ ಸಂಭ್ರಮಿಸಿದ 'ಓಂ ಗಂಗಾ'
ಬೆಂಗಳೂರು, ಆಗಸ್ಟ್ 29: ಬನ್ನೇರುಘಟ್ಟ ಉದ್ಯಾನವನ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿ ಇರುತ್ತದೆ. ಸಾಕಷ್ಟು ವಿಚಾರಗಳಿಂದ ಟ್ರೆಂಡಿಂಗ್ ಅಲ್ಲಿರುವ ಉದ್ಯಾನವನದಲ್ಲಿ ಈಗ ಗಜ ರಾಣಿಯ ಮುದ್ದು ಮರಿಯ ಕ್ಯೂಟ್ ಬರ್ತ್ ಡೇ ವಿಡಿಯೋ ಇಂದ ಮತ್ತಷ್ಟು ಜನರನ್ನು ಆಕರ್ಷಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ಈಗ ಮರಿ ಆನೆಯ ಹುಟ್ಟುಹಬ್ಬದ ಸಮಾಚಾರವೇ ಆಗಿದೆ.
ಸಾಮಾನ್ಯವಾಗಿ ಶ್ವಾನಗಳ ಅದ್ಧೂರಿ ಹುಟ್ಟುಹಬ್ಬ ಆಚರಣೆಗಳ ವಿಡಿಯೋ ನೋಡಿರುತ್ತೀರಿ, ವಾಟ್ಸ್ ಆ್ಯಪ್, ಫೇಸ್ ಬುಕ್, ಸ್ಟೇಟಸ್ ಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಕೊಳ್ಳುವ ಪೆಟ್ಸ್‌ಗಳ ವಿಡಿಯೋ ನೋಡಿರುತ್ತೀರಾ. ಅದರ ಜೊತೆಗೆ ಮನುಷ್ಯರ ಹುಟ್ಟುಹಬ್ಬದ ವಿಡಿಯೋ ಕೂಡ ಒಬ್ಬರಿಗಿಂತ ಒಬ್ಬರು ಜಿದ್ದಿಗೆ ಬಿದ್ದವರ ಹಾಗೇ ಆಚರಣೆ ಮಾಡೋದನ್ನ ನೋಡಿರುತ್ತೀರಿ. ಆದರೆ ಆನೆಯ ಬರ್ತ್ ಡೇ ಆಚರಣೆ ಮಾಡಿರೋದು ಯಾವತ್ತಾದರೂ ನೋಡಿದ್ದೀರಾ? ನೋಡಿದರೂ ಈ ಆನೆಯ ಹುಟ್ಟು ಹಬ್ಬ ತುಂಬಾ ವಿಭಿನ್ನವಾಗಿದೆ.

ಬನ್ನೇರುಘಟ್ಟ ಉದ್ಯಾನವನದಲ್ಲಿ ಮರಿ ಆನೆ ಕುಟುಂಬದ ಜೊತೆಗೆ ಅದರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಮುದ್ದುಮುದ್ದಾದ ಆನೆ ಮರಿಗೆ ಹ್ಯಾಪಿ ಹ್ಯಾಪಿ ಬರ್ತ್ ಡೇ ಅಂತ ಆಚರಣೆ ಮಾಡಿದ್ದಾರೆ. ಅಷ್ಟಕ್ಕೂ ಈ ಕ್ಯೂಟ್ ಕ್ಯುಟ್ ಆನೆಮರಿಯ ಹೆಸರು ಓಂ ಗಂಗಾ. ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ಓಂ ಗಂಗಾ ಆನೆ ಮರಿ ಈಗ ಫುಲ್ ಟ್ರೆಂಡಿಂಗ್ ಅಲ್ಲಿ ಇದೆ.
ಕಾಡು ಪ್ರಾಣಿ ಕೇಕ್ ಕಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ಸದ್ಯ ಈ ವಿಡಿಯೋ ಹಿನ್ನಲೆಯಲ್ಲಿ ಏನು ಅಂತ ನೋಡೋದಾದ್ರೆ ಇದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನಶ್ರೀ ಅನೆಯ ಹೆಣ್ಣು ಮರಿ ಬರ್ತ್ ಡೇ ಆಚರಣೆ. ವನಶ್ರೀಯ ಮೂರನೇ ಮಗುವಾಗದ ಓಂಗಂಗಾವನ್ನು ಬೆಂಗಳೂರಿನ ಜಿ ಗ್ರೂಪ್‌ನವರು ದತ್ತು ಪಡೆದುಕೊಂಡಿದ್ದರು. ಜೊತೆಗೆ ಆನೆ ಮರಿಗೆ ಓಂ ಗಂಗಾ ಎಂದು ನಾಮಕರಣ ಕೂಡ ಮಾಡಿದ್ದರು.

ಈಗ ಓಂಗಂಗಾಗೆ ಒಂದು ವರ್ಷ ತುಂಬಿದ್ದರಿಂದ ಆನೆಗಳ ಆರೈಕೆ ಕೇಂದ್ರದಲ್ಲಿ ಹುಟ್ಟು ಹಬ್ಬದ ಆಚರಣೆ ಮಾಡಲಾಯಿತು. ಆನೆ ಮರಿ ಮತ್ತು ಕುಟುಂಬಕ್ಕೆ ಅನ್ನದ ಪೊಂಗಲ್, ಬೆಲ್ಲ, ತೆಂಗಿನಕಾಯಿನೊಂದಿಗೆ ಕ್ಯಾರೆಟ್, ಬಾಳೆಹಣ್ಣು, ಕಬ್ಬು ಮತ್ತು ಕಲ್ಲಂಗಡಿಗಳಿಂದ ಮಾಡಿದ ಕೇಕ್ ನೀಡಿ ಸಂಭ್ರಮಿಸಿದ್ದಾರೆ. ಓಂ ಗಂಗಾ ಹುಟ್ಟುಹಬ್ಬಕ್ಕೆ ವಿಶೇಷ ತಿಂಡಿಗಳನ್ನು ಸವಿದು ಕುಣಿದು ಓಂ ಗಂಗಾ ಆಂಡ್ ಟೀಂ ಕುಣಿದು ಕುಪ್ಪಳಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಾಕಷ್ಟು ಪ್ರಾಣಿಗಳಿಂದ ಕೂಡಿದೆ. ಒಂದಲ್ಲ ಒಂದು ವಿಶೇಷತೆಗಳಿಂದ ಟೂರಿಸ್ಟ್ ಫೇವರೇಟ್ ಸ್ಪಾಟ್. ಆನೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರುತ್ತದೆ. ಇನ್ನೂ ಇತ್ತೀಚಿಗಷ್ಟೇ ಹೊಸ ಗೆಸ್ಟ್ ಎಂಟ್ರಿ ಕೂಡ ಆಗಿದೆ. ಕಬಿನಿ ಎಂಬ ಜೀಬ್ರಾ ಮುದ್ದಾರಿ ಮರಿಗೆ ಜನ್ಮ ನೀಡಿದೆ. ಕಬಿನಿ ಹಾಗೂ ಹರಿಶ್ಚಂದ್ರ ಜೀಬ್ರಾ ದಂಪತಿಗೆ ಮರಿ ಜೀಬ್ರಾ ಜನಿಸಿದೆ. ನೋಡೋಕೆ ಜೀಬ್ರಾ ಮರಿ ಸಖತ್ ಕ್ಯೂಟ್ ಆಗಿ ಕಾಣ್ತಾ ಇದ್ದು ಅಮ್ಮನ ಹಿಂದೆ ಹಿಂದೆಯೇ ಓಡಾಡ್ತಾ ಇರೋ ಫೋಟೋ ಕೂಡ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications