B Khata: ಅನಧಿಕೃತ ಬಡಾವಣೆ, ಈ ಆಸ್ತಿದಾರರಿಗೆ ಬಿಗ್ ಗುಡ್‌ನ್ಯೂಸ್ ಕೊಟ್ಟ ಸರ್ಕಾರ!
B Khata Property: ಆಸ್ತಿದಾರರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ರಾಜ್ಯದಲ್ಲಿ ಬಿ ಖಾತಾ ಇರುವವರಿಗೆ ಬಿಗ್ ಗುಡ್‌ನ್ಯೂಸ್‌ವೊಂದನ್ನು ಕೊಡಲಾಗಿದೆ. ರಾಜ್ಯದಲ್ಲಿ ಬಿ ಖಾತಾ ಆಸ್ತಿ ಇರುವವರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿಗಳಿಗೆ ಇ - ಖಾತಾ ಕಡ್ಡಾಯ ಮಾಡಿದ ಮೇಲೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೆ ಎಲ್ಲಾ ಆಸ್ತಿದಾರರು ಕಡ್ಡಾಯವಾಗಿ ಇ - ಖಾತಾ ಮಾಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ನಿರ್ದೇಶನ ನೀಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು. ರಾಜ್ಯದ ಆಸ್ತಿದಾರರು ಹಾಗೂ ಬಿ - ಖಾತಾ ಇರುವವರಿಗೆ ಬಿಗ್ ಗುಡ್‌ನ್ಯೂಸ್ ಕೊಡಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಎಲ್ಲಾ ಆಸ್ತಿಗಳು ಸಹ ರಾಜ್ಯದಲ್ಲಿ ಕಡ್ಡಾಯ ಇ - ಖಾತಾವನ್ನು ಹೊಂದಿರಬೇಕು ಎಂದು ಹೇಳಿದ ಮೇಲೆ ರಾಜ್ಯದಲ್ಲಿ ಇ -ಖಾತಾ ಮಾಡಿಸಿಕೊಳ್ಳಲು ಸಾಕಷ್ಟು ಸಮಸ್ಯೆ ಆಗಿದೆ. ಅದರಲ್ಲೂ ಮುಖ್ಯವಾಗಿ ಬಿ ಖಾತಾ ಇರುವವರಿಗೆ ಸಮಸ್ಯೆ ಆಗಿದೆ. ಇದರಿಂದ ರಾಜ್ಯದ ಖಜಾನೆಯ ಮೇಲೂ ಪರಿಣಾಮ ಬೀರಿದೆ. ಇದೀಗ ರಾಜ್ಯದಲ್ಲಿ ಬಿ- ಖಾತಾಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸುವಂತೆ ಹಾಗೂ ಕೆಲವು ಬದಲಾವಣೆಗಳನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮೂರು ತಿಂಗಳ ಒಳಗಾಗಿ ಬಿ - ಖಾತಾ: ಇನ್ನು ರಾಜ್ಯದಲ್ಲಿ ಎಲ್ಲಾ ಅನಧಿಕೃತ ಬಡಾವಣೆಗಳ ನಿವೇಶನದಾರರಿಗೂ ಗುಡ್‌ನ್ಯೂಸ್ ಕೊಡಲಾಗಿದ್ದು. ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅನಧಿಕೃತ ಬಡಾವಣೆಗಳ ನಿವೇಶನದಾರರಿಗೆ ಮೂರು ತಿಂಗಳ ಒಳಗಾಗಿ ಬಿ ಖಾತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಅನChoose Websiteಧಿಕೃತ ಬಡಾವಣೆಗಳಲ್ಲಿ ನಿವೇಶನದಾರರಿಗೆ ಎ ಖಾತೆ ಕೊಡುವುದಕ್ಕೆ ಬರುವುದಿಲ್ಲ. ಈ ಸಂಬಂಧ ಈಗಾಗಲೇ ಸುಪ್ರಿಂಕೋರ್ಟ್ ಆದೇಶ ಇದೆ. ಹೀಗಾಗಿ ಇಂತಹ ನಿರ್ದಿಷ್ಟ ನಿವೇಶನಗಳಿಗೆ ಬಿ ಖಾತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ. ಇನ್ನು ಮೂರು ತಿಂಗಳ ಒಳಗಾಗಿ ಎಲ್ಲರಿಗೂ ಬಿ ಖಾತಾ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರನ್ನು ಕಚೇರಿಗೆ ಸುತ್ತಿಸದೆ ಬಿ ಖಾತಾ ಕೊಡಬೇಕು ಅಂತ ಹೇಳಲಾಗಿದೆ.
ಒಂದು ಬಾರಿ ಪರಿಹಾರ: ಇನ್ನು ರಾಜ್ಯದಲ್ಲಿ ಬಿ - ಖಾತಾ ಒಂದು ಬಾರಿ ಪರಿಹಾರವಾಗಿ ಇರಲಿದೆ. ಯಾವ ಆಸ್ತಿದಾರರ ಬಳಿ ಖರೀದಿ ಪತ್ರ ಪಡೆದು ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದರೆ ಮಾತ್ರ ಅವರಿಗೆ ಬಿ ಖಾತಾ ಸಿಗಲಿದೆ. ಇನ್ನು ಬಿ - ಖಾತಾ ಪಡೆದುಕೊಳ್ಳುವುದಕ್ಕೆ ಒಮ್ಮೆ ಮಾತ್ರ ಅವಕಾಶ ಇರಲಿದೆ. ಇದು ಒಂದು ಬಾರಿ ಮಾತ್ರ ಪರಿಹಾರವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಮಾರಾಟಗಳಿಗೆ ಅನ್ವಯಿಸುವುದಿಲ್ಲ ಎಂದೂ ಹೇಳಲಾಗಿದೆ.
ಒಟ್ಟಾರೆ ಈ ಮೂಲಕ ಆಸ್ತಿದಾರರಿಗೆ ರಾಜ್ಯ ಸರ್ಕಾರವು ದೊಡ್ಡ ಗುಡ್‌ನ್ಯೂಸ್ ಕೊಟ್ಟಿದೆ. ಆಂದೋಲನ ಮಾದರಿಯಲ್ಲಿ ಬಿ - ಖಾತಾ ನೀಡಬೇಕು ಎಂದೂ ಹೇಳಲಾಗಿದೆ. ಆದರೆ ಮುಖ್ಯವಾಗಿ ಇದು ಒಂದು ಬಾರಿ ಮಾತ್ರ ಇರಲಿದೆ ಎಂದು ಹೇಳಲಾಗಿದೆ.
ಸಾವಿರಾರು ಆಸ್ತಿಗಳಿಗೆ ಅನುಕೂಲ: ಇನ್ನು ರಾಜ್ಯದಲ್ಲಿ ಒಂದು ಬಾರಿ ಬಿ ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡಿರುವುದರಿಂದ ಸಾವಿರಾರು ಬಿ - ಖಾತಾ ಆಸ್ತಿದಾರರಿಗೆ ಹಾಗೂ ಅನಧಿಕೃತ ಬಡಾವಣೆಗಳನ್ನು ಹೊಂದಿರುವವರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಸಾವಿರಾರು ಬಿ - ಖಾತಾ ಆಸ್ತಿಗಳಿವೆ. ಇ - ಖಾತಾ ಪ್ರಾರಂಭವಾದ ಮೇಲೆ ಬಿ - ಖಾತಾ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಲಾಗಿತ್ತು.












Click it and Unblock the Notifications