Auto Rickshaw App: ಹೊಸದಾಗಿ ಆಟೋ ರಿಕ್ಷಾ ಅಪ್ಲಿಕೇಶನ್‌ ಬಿಡುಗಡೆ-ಪ್ರಯಾಣಿಕರಿಗೆ ಏನೆಲ್ಲಾ ಪ್ರಯೋಜನೆಗಳಿವೆ?

Auto Rickshaw App: ನಮ್ಮ ಯಾತ್ರಿ ಆಪ್‌ ಯಶಸ್ಸು ಕಂಡ ಹಿನ್ನೆಲೆ ಬೆಂಗಳೂರಿನ ಮತ್ತೊಂದು ಸಾರಿಗೆ ಒಕ್ಕೂಟವು ಇಂದು (ಜೂನ್‌ 10) ಆಟೋ-ರಿಕ್ಷಾ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹಾಗಾದರೆ ಇದರಿಂದ ಏನಲ್ಲಾ ಹಾಗೂ ಯಾರಿಗೆಲ್ಲಾ ಲಾಭ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕರ್ನಾಟಕ ರಾಜ್ಯ ಚಾಲಕ ಪರಿಷತ್ತು ಅಗ್ನಿಭು ಟೆಕ್ನಾಲಜೀಸ್ ಜೊತೆಗೆ ಜೂನ್ 10ರಂದು ಮಧ್ಯಾಹ್ನ 'ನಗರ ಮೀಟರ್ಡ್ ಆಟೋ' ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದ್ದಿ, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.

Auto Rickshaw App Launch today What are the benefits

ಒಕ್ಕೂಟದ ಪ್ರಕಾರ, ಬಳಕೆದಾರರು ಈ ಅಪ್ಲಿಕೇಶನ್ ಮೂಲಕ ರೈಡ್‌ಗಳನ್ನು ಬುಕ್ ಮಾಡಬಹುದು. ಆದರೆ ಮೀಟರ್‌ನಲ್ಲಿ ಪ್ರದರ್ಶಿಸಿದಂತೆ ಮೊದಲ ಎರಡು ಕಿಲೋ ಮೀಟರ್‌ಗೆ 30 ರೂಪಾಯಿ, ನಂತರದ ಪ್ರತಿ ಕಿಲೋ ಮೀಟರ್‌ಗೆ 15 ರೂಪಾಯು ಮಾತ್ರ ಸರ್ಕಾರಿ-ನಿಗದಿತ ದರಗಳನ್ನು ಪಾವತಿಸಬಹುದಾಗಿದೆ.

ಓಲಾ, ಉಬರ್ ಮತ್ತು ರಾಪಿಡೊಗೆ ಪರ್ಯಾಯವಾಗಿ ಈ ಹೊಸ ಆ್ಯಪ್ ಕಾರ್ಯನಿರ್ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಚಾಲಕ ಪರಿಷತ್ತಿನ ಕೆ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

"ಈ ಹೊಸ ಅಪ್ಲಿಕೇಶನ್ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ತುಂಬಾ ಸಹಕಾರಿಯಾಗಲಿದೆ. ಹಲವು ಸಂದರ್ಭಗಳಲ್ಲಿ, ಹೆಚ್ಚು ದೂರ ಕ್ರಮಿಸಿದರೂ ಚಾಲಕರು ಸರಿಯಾದ ದರವನ್ನು ಪಡೆಯುವುದಿಲ್ಲ. ಆದ್ದರಿಂದ ಹೆಚ್ಚಿನ ಜನರು ಈ ಆ್ಯಪ್ ಮೂಲಕ ಆಟೋಗಳನ್ನು ಬುಕ್ ಮಾಡಲು ಬಯಸುತ್ತಾರೆ," ಎಂದು ಹೇಳಿದರು.

ಯಾವುದೇ ಏರಿಕೆ ಬೆಲೆ ಅಥವಾ ಕಮಿಷನ್ ಇರುವುದಿಲ್ಲ. ಆದರೆ ಚಾಲಕರು ಸ್ವಲ್ಪ ಮಟ್ಟಿಗೆ ಹಣವನ್ನು ಪಾವತಿಸಬೇಕಾಗಬಹುದು. ಇನ್ನು ಇದಕ್ಕೆ ಮೊದಲ ಹಂತದಲ್ಲಿ ಕನಿಷ್ಠ 1,000 ಚಾಲಕರನ್ನು ದಾಖಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಹಲವು ಚಾಲಕ QR ಕೋಡ್ ಮೂಲಕ ಪ್ರಯಾಣಿಕರಿಗೆ ತಮ್ಮದೇ ಆದ ಮಾರ್ಗಗಗಳಲ್ಲಿ ಸವಾರಿ ಪ್ರಾರಂಭಿಸಲು ಇದರಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅಪ್ಲಿಕೇಶನ್ ಪ್ರತಿ ಚಾಲಕರಿಗೆ ತಮ್ಮ ರುಜುವಾತುಗಳನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲು ವೆಬ್‌ಸೈಟ್‌ನಲ್ಲಿ ಅವಕಾಶವನ್ನು ಕಲ್ಪಿಸಿದೆ.

ಚಾಲಕರು ಅಪ್ಲಿಕೇಶನ್ ಮೂಲಕ ಪಿಕ್-ಅಪ್ ಮತ್ತು ಪ್ರಯಾಣಿಕರ ಗಮ್ಯಸ್ಥಾನದ ಸ್ಥಳವನ್ನು ಸ್ವೀಕರಿಸುತ್ತಾರೆ. ಬಳಿಕ ಪ್ರಯಾಣಿಕರ ಒಟಿಪಿ ನಮೂದಿಸಿದ ನಂತರವೇ ಚಾಲಕ ದರದ ಮೀಟರ್ ಅನ್ನು ಪ್ರಾರಂಭಿಸುತ್ತಾನೆ ಎಂದು ತಿಳಿಸಿದ್ದಾರೆ.

ಹೇಗೆ ಕಾರ್ಯ ನಿರ್ವಹಿಸಲಿದೆ?

ಪ್ರಯಾಣಿಕರು ಆ್ಯಪ್ ಮೂಲಕ ಆಟೋವನ್ನು ಬುಕ್ ಮಾಡಬೇಕಾಗುತ್ತದೆ. ಪ್ರಯಾಣವನ್ನು ನಿರ್ಧರಿಸದಾಗ, ಪ್ರಯಾಣಿಕರು ಚಾಲಕನೊಂದಿಗೆ OTP ಅನ್ನು ಹಂಚಿಕೊಳ್ಳುತ್ತಾರೆ. ಪ್ರಯಾಣದ ಪ್ರಾರಂಭದಲ್ಲಿ ಚಾಲಕರು ಸ್ವಯಂ ಮೀಟರ್ ಅನ್ನು ಆನ್ ಮಾಡುತ್ತಾರೆ ಮತ್ತು ಅಪ್ಲಿಕೇಶನ್‌ನಲ್ಲಿ ಮ್ಯಾಪ್‌ ಅನ್ನು ಫಾಲೋ ಮಾಡುತ್ತಾರೆ.

ಕೊನೆಯಲ್ಲಿ ಚಾಲಕ ಆ್ಯಪ್‌ನಲ್ಲಿ ಪ್ರಯಾಣಿಸಿದ ದೂರವನ್ನು ನಮೂದಿಸುತ್ತಾನೆ. ಬಳಿಕ ಪ್ರಯಾಣಿಕರು ಮೀಟರ್‌ನಲ್ಲಿ ತೋರಿಸಿರುವ ಶುಲ್ಕವನ್ನು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಮಾಪನಾಂಕವನ್ನು ಪರಿಶೀಲಿಸಿ ನೇರವಾಗಿ ಚಾಲಕನಿಗೆ ನಗದು ಅಥವಾ UPI ಮೂಲಕ ಪಾವತಿಸುತ್ತಾರೆ.

ಪ್ರಯಾಣಿಕರು ಪ್ರಯಾಣದ ಸ್ಥಳಕ್ಕೆ ಆಟೋ ಬುಕ್ ಮಾಡಲು ಚಾಲಕನ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಇನ್ನು ಬೆಂಗಳೂರಿನ ಸಾರಿಗೆ ಸಂಸ್ಥೆಗಳು ಓಲಾ ಮತ್ತು ಉಬರ್‌ಗೆ ಪೈಪೋಟಿ ನೀಡಲು ಆ್ಯಪ್ ಬಿಡುಗಡೆ ಮಾಡಿರುವುದು ಇದೇ ಮೊದಲೇನಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+