ಬೆಂಗಳೂರಲ್ಲಿ ಜನವರಿ 8ರಂದು ಆಟೋ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು, ಜನವರಿ 05: ಉದ್ಯಾನ ನಗರಿ ಬೆಂಗಳೂರಿನಲ್ಲಿ ಜನವರಿ 8ರಂದು ಆಟೋ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಆಟೋರಿಕ್ಷಾ ಚಾಲಕರು ಬುಧವಾರ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ರಿ) ಸಿಐಟಿಯು ಮುಷ್ಕರಕ್ಕೆ ಕರೆ ನೀಡಿದೆ. 6 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಹಲವು ಆಟೋ ಚಾಲಕರ ಸಂಘಗಳಿದ್ದು ಯಾರು-ಯಾರು ಬೆಂಬಲ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ. ಈಗಾಗಲೇ ಹಲವು ಆಟೋಗಳಲ್ಲಿ ಮುಷ್ಕರಕ್ಕೆ ಬೆಂಬಲ ನೀಡುವುದಾಗಿ ಫೆಕ್ಸ್‌ ಹಾಕಿಕೊಳ್ಳಲಾಗಿದೆ.

Auto Drivers Called For Strike On January 8

ಮರಿಯಪ್ಪನಪಾಳ್ಯದಲ್ಲಿರುವ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ರಿ) ಸಿಐಟಿಯು ಆಟೋ ಚಾಲಕರ ಮುಷ್ಕರಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ. ಬೆಂಗಳೂರು ನಗರದಲ್ಲಿ ಅಂದು ಆಟೋ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಬೇಡಿಕೆಗಳು

* ಮೋಟಾರು ವಾಹನ ಕಾಯ್ದೆ 2019 (ತಿದ್ದುಪಡಿ) ವಾಪಸ್ ಪಡೆಯಬೇಕು.
* ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ/ಸಂಚಾರಿ ಪೊಲೀಸರ ಕಿರುಕುಳ/ಕಂಪ್ಯೂಟರ್ ಕೇಸ್‌ಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ
* ಅಸಂಘಟಿತ ಕಾರ್ಮಿಕ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ / ಗುಂಪು ಮನೆಗಳು/ ಇ. ಎಸ್‌. ಐ / ಪಿಎಫ್/ ಪಿಂಚಣಿ/ಶಾಸನ ಜಾರಿಗಾಗಿ ಮತ್ತು 500 ಕೋಟಿ ರೂ. ಹಣ ಬಜೆಟ್‌ನಲ್ಲಿ ಮೀಸಲಿಡುವಂತೆ ಹಾಗೂ ಸಹಜ ಮರಣಕ್ಕೆ 2 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ
* ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ಪರಿಹಾರ ದಿ ನ್ಯೂ ಇಂಡಿಯಾ ಇನ್ಸೂರೆನ್ಸ್‌ ಕಂಪನಿಯಿಂದ ಶೀಘ್ರ ಬಿಡುಗಡೆಗೆ ಒತ್ತಾಯಿಸಿ
* ಓಲಾ, ಊಬರ್, ದ್ವಿಚಕ್ರ ಟ್ಯಾಕ್ಸಿ ವಾಹನ, ದ್ವಿಚಕ್ರ ಕಂಪನಿಗಳ ಬಾಡಿಗೆ ನೀಡುವುದನ್ನು ವಿರೋಧಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+