ಬೆಂಗಳೂರು: ಹೆಂಡತಿ ತವರಿಗೆ ಹೋಗಿದ್ದಕ್ಕೆ ಆಟೋ ಚಾಲಕನ ಸಂಭ್ರಮ ಹೇಗಿದೆ ಗೊತ್ತಾ?

ಬೆಂಗಳೂರು, ಫೆಬ್ರವರಿ, 07: ಕೆಲವೊಂದು ಪೋಸ್ಟರ್‌ಗಳು ಆಗಾಗ ಸಖತ್ ವೈರಲ್‌ ಆಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ಆಟೋ ಚಾಲಕರೊಬ್ಬರು ತಮ್ಮ ಸೀಟ್‌ ಹಿಂದೆಗಡೆ ವಿಚಿತ್ರ ಪೋಸ್ಟರ್ ಹಾಕಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಈ ಪೋಸ್ಟರ್‌ನಲ್ಲಿ ಏನಿದೆ ಹಾಗೂ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಕೆಲ ವಿವಾಹಿತ ಪುರುಷರು ಪತ್ನಿ ತವರಿಗೆ ಹೋಗುವುದನ್ನೇ ಕಾಯುತ್ತಿರುತ್ತಾರೆ. ಯಾಕೆಂದರೆ ಪಾರ್ಟಿ ಆಯೋಜನೆ ಹಾಗೂ ಮಜಾ ಮಾಡಲು ಇದೇ ಉತ್ತಮ ಸಮಯವೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಕೂಡ ಹಂಚಿಕೊಂಡಿರುವ ಉದಾಹರಣೆಗಳು ನಡೆದಿವೆ. ಹಾಗೆಯೇ ಇದೀಗ ಬೆಂಗಳೂರಿನಲ್ಲೊಬ್ಬ ಆಟೋ ಚಾಲಕ ಕೂಡ ಇದನ್ನೇ ಎಲ್ಲಾ ಪ್ರಯಾಣಿಕರಿಗೆ ಕಾಣುವಂತೆ ಇದೇ ರೀತಿಯ ಪೋಸ್ಟರ್‌ವೊಂದನ್ನು ಹಾಕಿಕೊಳ್ಳುದಲ್ಲದೆ, ಸ್ವೀಟ್‌ ಹಂಚಿರುವ ಘಟನೆಯೂ ನಡೆದಿದೆ.

Auto Driver Celebrated For Wife go to parents house in Bengaluru Viral

ಪೋಸ್ಟರ್ ಭಾರೀ ವೈರಲ್: ಬೆಂಗಳೂರಿನ ಆಟೋವೊಂದರಲ್ಲಿ ಕುಳಿತ ಪ್ರಯಾಣಿಕರಿಗೆ ಆ ಆಟೋ ಚಾಲಕ ಫ್ರೀಯಾಗಿ ಬಿಸ್ಕತ್ ಹಂಚುತ್ತಿದ್ದ. ಇದಕ್ಕೆ ಕಾರಣ ಏನೆಂದು ಆತನಿಗೆ ಕೇಳಿದ್ರೆ, ನನ್ನ ಪತ್ನಿ ಆಕೆಯ ತವರಿಗೆ ಹೋಗಿದ್ದಾರೆ. ಇದರಿಂದ ನನಗೆ ತುಂಬಾ ಖುಷಿಯಾಗಿದ್ದೇನೆ. ಆದ್ದರಿಂದ ಬಿಸ್ಕತ್ ಹಂಚುತ್ತಿದ್ದೇನೆ ಎಂದು ಹೇಳಿದ್ದಾನೆ. ಇದೇ ವಿಷಯವನ್ನು ಆಟೋದಲ್ಲಿ ಬರೆದಿಟ್ಟು, ಬಿಸ್ಕೆಟ್ ಪ್ಯಾಕ್ ಕೂಡ ಇಟ್ಟಿದ್ದಾನೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಇನ್ನು ಇದಕ್ಕೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ನೆಟ್ಟಿಗರು ಹೇಳೋದೇನು?: ಈ ಪೋಸ್ಟರ್ ಅನ್ನು ಆಟೋ ಚಾಲಕನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ 'ಹೆಂಡತಿ ಅವರ ತವರ ಮನೆಗೆ ಹೋಗಿದ್ದಾಳೆ, ಇದರಿಂದ ನಾನು ಸಂತೋಷವಾಗಿದ್ದೇನೆ' ಎಂದು ಬರೆಯಲಾಗಿದ್ದು, ಇದು ಇದೀಗ ಸಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಬಿಸ್ಕೆಟ್ ಹಂಚಿದ ಆಟೋ ಚಾಲಕ: ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಸ್ವಾತಂತ್ರ್ಯ ಅಂದ್ರೆ ಇದಪ್ಪಾ ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಆ ವ್ಯಕ್ತಿ ತಮ್ಮ ಆಟೋದಲ್ಲಿ ಪ್ರಯಾಣಿಸುವವರಿಗೆ ಬ್ರಿಟಾನಿಯಾ ಮಿಲ್ಕ್ ಬಿಕಿಸ್‌ಗಳನ್ನು ವಿತರಣೆ ಮಾಡಿದ್ದಾನೆ. ಇನ್ನು ಕೆಲವರು ಈ ಪೋಸ್ಟರ್‌ಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಕಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+