ಕಾಲೇಜಿಗೆ ಬಂಕ್ ಹಾಕಿದ್ರೆ ಎಸ್‌ಎಂಎಸ್ ಬರುತ್ತೆ!
ಬೆಂಗಳೂರು, ಮೇ 30 : ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಲಾಸಿಗೆ ಬಂಕ್ ಹೊಡೆದರೆ ತಂದೆ-ತಾಯಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗಲಿದೆ. ಹೌದು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇಂಟರ್‌ನಲ್ ಅಂಕಗಳ ಬಗ್ಗೆ ಪೋಕಷರಿಗೆ ಮಾಹಿತಿ ರವಾನಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಕುರಿತು ಮಾಹಿತಿ ನೀಡಿದರು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ಇಂಟರ್‌ನಲ್ ಅಂಕಗಳ ಕುರಿತು ಪೋಷಕರಿಗೆ ಎಸ್‌ಎಂಎಸ್ ಮತ್ತು ಈ ಮೇಲ್ ಕಳಿಸಲು ಚಿಂತಿಸಲಾಗುತ್ತಿದೆ ಎಂದರು. [ಸರ್ಕಾರಿ ಕಾಲೇಜಿನಲ್ಲಿ 5 ರೂ.ಗೆ ಬಿಸಿಯೂಟ]

'ಈ ಯೋಜನೆಯನ್ನು ಜಾರಿಗೊಳಿಸಲು ನಾವು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ. ಆದರೆ, ಬೆಂಗಳೂರು ನಗರದಲ್ಲಿರುವ ಕಾಲೇಜುಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ದೇಶಪಾಂಡೆ ಅವರು ಹೇಳಿದರು. [ನಕಲಿ ವಾಟ್ಸಪ್ ಸಂದೇಶ ತಂದ ಫಜೀತಿ]
'ಮನೆಯಿಂದ ಕಾಲೇಜಿಗೆಂದು ಬರುವ ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡುತ್ತಾರೆ. ಈ ಕುರಿತು ಪೋಷಕರಿಗೆ ಮಾಹಿತಿ ತಿಳಿಸಲು ಸಹಾಯಕವಾಗುವಂತೆ ಈ ಯೋಜನೆ ಆರಂಭಿಸಲು ಮುಂದಾಗಿದ್ದೇವೆ. ವಿದ್ಯಾರ್ಥಿಗಳ ಕಾಲ-ಕಾಲದ ಹಾಜರಾತಿ ಮತ್ತು ಇಂಟರ್‌ನಲ್ ಅಂಕಗಳ ಕುರಿತು ಪೋಷಕರಿಗೆ ಎಸ್‌ಎಂಎಸ್ ಅಥವ ಈ ಮೇಲ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ' ಎಂದು ವಿವರಣೆ ನೀಡಿದರು.












Click it and Unblock the Notifications