ಎಟಿಎಂಗೆ ಹಣ ತುಂಬಲು ಬಂದವರು 90 ಲಕ್ಷದೊಂದಿಗೆ ಪರಾರಿ!

ಬೆಂಗಳೂರು, ಜನವರಿ 30 : ಎಟಿಎಂಗೆ ಹಣ ತುಂಬಿಸಲು ಬಂದು ಸಿಬ್ಬಂದಿ ಹಣದೊಂದಿಗೆ ಪರಾರಿಯಾದ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವೃತ್ತದ ಬಳಿ ಮಂಗಳವಾರ ನಡೆದಿದೆ.

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಪೊಲೀಸ್ ಠಾಣೆ ವೃತ್ತದ ಬಳಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಸಿಬ್ಬಂದಿಗಳು 90 ಲಕ್ಷ ರೂ ಜತೆಗೆ ಪರಾರಿಯಾಗಿದ್ದಾರೆ. ಹಣದ ಜತೆಗೆ ವಾಹನವನ್ನೂ ಕೊಂಡೊಯ್ದಿದ್ದಾರೆ. ಸಿಎಂಎಸ್ ಕಂಪನಿಗೆ ಸೇರಿದ ವಾಹನವಾಗಿದ್ದು ವಾಹನ ಚಾಲಕ ನಾರಾಯಣಸ್ವಾಮಿ ಹಾಗೂ ನೌಕರ ನರಸಿಂಹರಾಜು ಪರಾರಿಯಾಗಿದ್ದಾರೆ.

ATM crew escape with Rs.90 lakhs

ಗನ್ ಮ್ಯಾನ್ ಬಳಿ ಬಾಳೆ ಹಣ್ಣು ತರಲು ತೆರಳಿದ್ದ ಸಂದರ್ಭದಲ್ಲಿ ವಾಹನದೊಂದಿಗೆ ಪರಾರಿಯಾಗಿದ್ದಾರೆ. ವಾಹನವು ಸ್ಥಳದಲ್ಲಿ ಕಾಣದಿದ್ದ ಪರಿಣಾಮ ಗನ್ ಮೆನ್ ಗೆ ಅನುಮಾನ ಉಂಟಾಗಿ ತಕ್ಷಣದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+