ಬೆಂಗಳೂರು; ಮೃತಪಟ್ಟ ಎಎಸ್‌ಐಗೆ ಕೊರೊನಾ ಸೋಂಕು ದೃಢ
ಬೆಂಗಳೂರು, ಜೂನ್ 28 : ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಮೃತಪಟ್ಟ ಎಎಸ್‌ಐಗೆ ಕೊರೊನಾ ಸೋಂಕು ತಗುಲಿತ್ತು ಎಂಬುದು ಭಾನುವಾರ ಖಚಿತವಾಗಿದೆ. ಮನೆಯಲ್ಲಿ ಜಾರಿಬಿದ್ದಿದ್ದ ಎಎಸ್‌ಐ ಆಸ್ಪತ್ರೆಗೆ ಕರೆದುಕೊಂಡು ಹೋಗುವಾರ ಸಾವನ್ನಪ್ಪಿದ್ದರು.
57 ವರ್ಷದ ಎಎಸ್‌ಐ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಅವರು ಮೃತಪಟ್ಟ ಬಳಿಕ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿತ್ತು. ಭಾನುವಾರ ವರದಿ ಬಂದಿದೆ.
55 ವರ್ಷ ಮೇಲ್ಪಟ್ಟ ಅಧಿಕಾರಿಗಳು ಮನೆಯಲ್ಲಿ ಇರುವಂತೆ ಜೂನ್ 10ರಂದು ಸೂಚನೆ ನೀಡಲಾಗಿತ್ತು. ಶನಿವಾರ ರಾತ್ರಿ ಮನೆಯ ಬಾತ್ ರೂಂನಲ್ಲಿ ಜಾರಿ ಬಿದ್ದಿದ್ದ ಎಎಸ್‌ಐ ಮೃತಪಟ್ಟಿದ್ದರು. ಇವರ ಜೊತೆ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸುಮಾರು 50 ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಸಿಬ್ಬಂದಿಗೆ ಸೋಂಕು ತಗುಲಿದ್ದು ಖಚಿತವಾದ ಬಳಿಕ ನಗರ ಪೊಲೀಸ್ ಆಯುಕ್ತರ ಕಚೇರಿಯನ್ನೇ ಮೂರು ದಿನಗಳ ಕಾಲ ಮುಚ್ಚಲಾಗಿದೆ.
ವಿಲ್ಸನ್ ಗಾರ್ಡನ್ ಠಾಣೆಯ ಎಎಸ್‌ಐ, ಕಲಾಸಿಪಾಳ್ಯ ಠಾಣೆ ಕಾನ್ಸ್‌ಟೇಬಲ್ ಸೇರಿದಂತೆ ನಗರದ ನಾಲ್ವರು ಸಿಬ್ಬಂದಿಗಳು ಇದುವರೆಗೂ ಮೃತಪಟ್ಟಿದ್ದಾರೆ. ಹಲವು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.












Click it and Unblock the Notifications