• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಸಿಎಸ್ ಟೆಕ್ಕಿಗಳ ಅಭಿನಯದ ಅವತಾರ್ಸ್ ನಾಟಕಗಳ ಸಂಗಮ

|

ಬೆಂಗಳೂರು, ಮಾರ್ಚ್ 11: ಅಶ್ವಘೋಷ ಥಿಯೇಟರ್ ಟ್ರಸ್ಟ್ ಅರ್ಪಿಸುವ, Hi5 stage and Screen Productions ಅಭಿನಯಿಸುವ ನಾಟಕ 'ಅವತಾರ್ಸ್' ಈ ವಾರಾಂತ್ಯದಲ್ಲಿ ಕೆಎಚ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಕಿರು ಹಾಸ್ಯ ನಾಟಕಗಳ ಸಂಗಮವಾಗಿದ್ದು, ಜಯಂತ್ ಪಾಟೀಲ್ ವಿ ಎಂ ನಿರ್ದೇಶಿಸಿದ್ದಾರೆ.

ಅವತಾರ್ಸ್ ಕನ್ನಡ ನಾಟಕ ರಂಗದಲ್ಲಿ ಒಂದು ಪ್ರಾಯೋಗಿಕ ಪ್ರಯತ್ನ. ಹಲವು ಹಾಸ್ಯ ಕಿರುನಾಟಕಗಳ ಸಂಗಮ. 5 ವಿವಿಧ ಬಗೆಯ ಕಥೆಗಳು ಸೇರಿ 90 ನಿಮಿಷಗಳ ಹಾಸ್ಯದ ಹೊನಲು ಸೃಷ್ಟಿಯಾಗಲಿದೆ.

ಈ ನಾಟಕಗಳಲ್ಲಿ ಅಭಿನಯಿಸುವವರೆಲ್ಲರೂ ಸಹ ಐಟಿ ಕಂಪನಿ ಉದ್ಯೋಗಿಗಳು. ಎಲ್ಲರೂ ಸಹ ಟಿ ಸಿ ಎಸ್ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ನಾಟಕದ ತಾಲೀಮು ಮಾಡುತ್ತಾ, ಯಾವುದೇ ವೃತ್ತಿಪರ ನಟರಿಗಿಂತ ಕಡಿಮೆ ಇಲ್ಲದಂತೆ ಅಭಿನಯಿಸಿದ್ದಾರೆ. ಕನ್ನಡದ ಮಟ್ಟಿಗೆ ಅವತಾರ್ಸ್ ಒಂದು ಹೊಸ ಬಗೆಯ ಪ್ರಯತ್ನ.

ಕಿರು ಹಾಸ್ಯ ನಾಟಕಗಳು

ನಾಟಕ 1 - ಬಾಡಿಗೆ ಬಾಯ್‍ಫ್ರೆಂಡ್

ನಾಟಕ 2 - ಬಿಕ್ಕಟ್ಟು

ನಾಟಕ 3 - ಪ್ರಾಕ್ಟಿಕಲ್ ಇಂಗ್ಲೀಷ್

ನಾಟಕ 4 - ಪಾಸಾ? ಫೇಲಾ?

ನಾಟಕ 5 - ಯಮಧರ್ಮ

ನಾಟಕದ ವಿವರಗಳು

ಸ್ಥಳ : ಕೆ ಹೆಚ್ ಕಲಾಸೌಧ, ಹನುಮಂತನಗರ

ದಿನಾಂಕ : 16 ಮಾರ್ಚ್ 2019, ಶನಿವಾರ

ಸಮಯ : ಸಂಜೆ 5 ಗಂಟೆ ಮತ್ತು 7:30ಕ್ಕೆ (ಎರಡು ಪ್ರದರ್ಶನಗಳು)

English summary
Ashvagosha Theatre Trust, Hi5 stage and Screen Productions acting in the play AVATARS. It’s a collection of short Comedy Plays in Kannada Directed by Jayanth Patil V M.All the actors are acting in this play are corporate company employees from TCS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X