ಜೆಡಿಎಸ್‌ ವರಿಷ್ಠರಿಗೆ ಶಾಕ್ ಕೊಟ್ಟ ಅರವಿಂದ ಲಿಂಬಾವಳಿ

ಬೆಂಗಳೂರು, ನವೆಂಬರ್ 25: ಮತ್ತೆ ಆಪರೇಷನ್ ಕಮಲ ಮಾಡುವ ಸೂಚನೆಯನ್ನು ಶಾಸಕ ಅರವಿಂದ ಲಿಂಬಾವಳಿ ನೀಡಿದ್ದಾರೆ.

ಒಂದೊಮ್ಮೆ ಬಿಜೆಪಿಯು 7ಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಗೆದ್ದರೆ ಸರ್ಕಾರ ಪತನವಾಗಲಿದೆ ಆಗ ಮತ್ತೆ ಆಪರೇಷನ್ ಕಮಲ ಮಾಡಬೇಕಾಗುತ್ತದೆ ಎನ್ನುವ ಸೂಚನೆ ದೊರೆತಿದೆ.

ಜೆಡಿಎಸ್​ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಮತ್ತೆ ಒತ್ತಿ ಹೇಳಿದ್ದಾರೆ, ಫಲಿತಾಂಶ ಬಂದ ಬಳಿಕ ರಾಜಕೀಯ ಧ್ರುವೀಕರಣ ಆಗಲಿದೆ ಎಂದರು. ಈ ಮೂಲಕ ಮತ್ತೆ ಆಪರೇಷನ್​ ಕಮಲ ನಡೆಯಲಿದೆ ಎನ್ನುವ ಸೂಚನೆ ನೀಡಿದರು.

Arvind Limbavali Gave Shock To JDS Leaders

ಲಿಂಬಾವಳಿ ಹೇಳಿಕೆ ನಂತರ ಜೆಡಿಎಸ್​ ವಲಯದಲ್ಲಿ ಟೆನ್ಶನ್​ ಆರಂಭವಾಗಿದೆ. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಹಕರಿಸಿದ ಅನರ್ಹ ಶಾಸಕರಿಗೆ ಈಗ ಬಿಜೆಪಿ ಟಿಕೆಟ್​ ನೀಡಿದೆ.

ಅಲ್ಲದೆ, ಗೆದ್ದರೆ ಸಚಿವರನ್ನಾಗಿ ಮಾಡುವ ಭರವಸೆಯನ್ನೂ ನೀಡಿದೆ. ಹೀಗಾಗಿ ವಿಪಕ್ಷ ಶಾಸಕರಿಗೆ ಒಂದು ಭರವಸೆ ಬಂದಿದೆ. ಬಿಜೆಪಿ ಸಂಪಕರ್ದಲ್ಲಿರುವ ಶಾಸಕರು ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಒಂದೊಮ್ಮೆ ಬಿಜೆಪಿ ಮತ್ತೆ ಆಪರೇಷನ್​ ಕಮಲಕ್ಕೆ ಮುಂದಾದರೆ, ಜೆಡಿಎಸ್​ನ ಕೆಲ ಶಾಸಕರು ಬಿಜೆಪಿ ಸೇರುವುದು ಹೌದು ಎಂದು ಮೂಲಗಳು ಹೇಳುತ್ತಿವೆ. ಹೀಗಾದರೆ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಕೂಡ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+