ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಸ್ಐಎಸ್ ಸೇರುವವರ ಬಂಧಿಸಲು ಚಕ್ರವ್ಯೂಹ

By ವಿಕ್ಕಿ ನಂಜಪ್ಪ
|
Google Oneindia Kannada News

ಬೆಂಗಳೂರು, ಜ. 15: ಒಂದು ಮೂಲದ ಪ್ರಕಾರ ಭಾರತದಿಂದ ಹೊರಹೋಗಿ ಐಎಸ್ಐಎಸ್ ಸೇರಲು ಇಚ್ಛಿಸುತ್ತಿರುವವರ ಸಂಖ್ಯೆ 140ರಷ್ಟಿದೆ. ಆದರೆ, ಅವರು ತೆರಳುವ ಮೊದಲೇ ಬಂಧಿಸುವುದಾಗಿ ಭಾರತೀಯ ಗುಪ್ತಚರ ದಳಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಎಸ್ಐಎಸ್ ಸೇರುವವರನ್ನು ಬಂಧಿಸಲೆಂದೇ ಆಪರೇಶನ್ ಚಕ್ರವ್ಯೂಹ್ ಅನ್ನು ಇಂಟೆಲಿಜೆನ್ಸ್ ಬ್ಯೂರೊ ಆರಂಭಿಸಿದೆ. ಐಎಸ್ಐಎಸ್ ಸೇರುವ ಇಚ್ಛೆ ವ್ಯಕ್ತಪಡಿಸಿರುವ ಯುವಕರ ಮೇಲೆ ಐಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅವರ ಕುರಿತು ಎಲ್ಲ ವಿವರ ಸಂಗ್ರಹಿಸಿದ್ದಾರೆ.

ಅಪರಾಧ ಎಸಗದೆ ಬಂಧಿಸಲ್ಲ : ಆದರೆ, ಶಂಕಿತರು ಯಾವುದೇ ಅಪರಾಧ ಎಸಗುವವರೆಗೂ ಅವರನ್ನು ಬಂಧಿಸುವ ಆಲೋಚನೆಯನ್ನು ಅಧಿಕಾರಿಗಳು ಹೊಂದಿಲ್ಲ. ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಅನುಮಾನಾಸ್ಪದ ಚಟುವಟಿಕೆ ಕಂಡುಬಂದ ತಕ್ಷಣ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. [ಶಮಿವಿಟ್ ನೆಸ್ ಸಂಪರ್ಕ ಹೊಂದಿದ್ದ ಎಲ್ಲರ ವಿಚಾರಣೆ]

isis

ಯುವಕರನ್ನು ಸೆಳೆಯಲೆಂದೇ ಆನ್ ಲೈನ್‌ನಲ್ಲಿ ಹಲವು ಉಗ್ರರು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಸಂಖ್ಯೆಯ ಯುವಕರು ಐಎಸ್ಐಎಸ್ ಸೇರುವ ಆಸಕ್ತಿ ಹೊಂದಿದ್ದಾರೆ. ಬರುವ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗುವ ಸಂಭವವಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 3,000 ಯುವಕರು ಈ ಬಯಕೆ ವ್ಯಕ್ತಪಡಿಸಿದ್ದರು. ಇಂದು ಈ ಸಂಖ್ಯೆ 140 ಕ್ಕೆ ಇಳಿದಿದೆ. [ಐಎಸ್ಐಎಸ್ ನೇಮಕಾತಿಯ ಕೊಂಡಿ ಸುಲ್ತಾನ್]

ಚರ್ಚ್ ಸ್ಟ್ರೀಟ್ ಹೊಣೆ ಹೊತ್ತವ ಸಿಗಲಿಲ್ಲ : ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಸ್ಫೋಟ ಪ್ರಕರಣದ ಹೊಣೆ ಹೊತ್ತು ಸಂದೇಶ ಕಳುಹಿಸಿದ್ದ ವ್ಯಕ್ತಿ ಕೈಗೆ ಸಿಗದೆ ಪಾರಾಗಿದ್ದಾನೆ. ಭಾಷಾ ಖಾನ್ ಹೆಸರಲ್ಲಿ ಸಂದೇಶ ಕಳುಹಿಸಿದ್ದ ಈತನ ಜೊತೆ ಓರ್ವ ಅಧಿಕಾರಿ ಮಾತನಾಡಿದ್ದರು. ಆತನನ್ನು ಭೇಟಿಯಾಗಲು ಸಮಯ ನಿಗದಿಪಡಿಸಿದ್ದರು. ಆದರೆ, ಆತ ಅಲ್ಲಿಗೆ ಬರದೆ ಸಂಪರ್ಕವನ್ನೇ ಕಡಿತಗೊಳಿಸಿದ ಎಂದು ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ. [ಮೆಹದಿ ಬಂಧನ : ಟಾಪ್ 10 ಬೆಳವಣಿಗೆ]

English summary
There were 3,000 persons who had hoped to leave India and join the ISIS. Now this number has come down to 140. Officers of Intelligence Bureau watching them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X