ಬೆಂಗಳೂರಿನಲ್ಲಿ ದುಬೈನ ಪ್ರಜ್ಞಾ ಅನಂತ್ ಭರತನಾಟ್ಯ ರಂಗಪ್ರವೇಶ
ಭಾವ ರಾಗ ತಾಳಗಳ ಸಮ್ಮಿಳನದ ದೈವೀಕ ನೃತ್ಯ ಕಲೆಯೇ ಭರತನಾಟ್ಯ. ಉದಯೋನ್ಮುಖ ಕಲಾವಿದೆ ಕು. ಪ್ರಜ್ಞಾ ಅನಂತ್ ನಾಟ್ಯದ ಎಲ್ಲಾ ಸ್ತರಗಳ ಏಕವ್ಯಕ್ತಿ ಪ್ರದರ್ಶನ ನೀಡುವ ರಂಗಪ್ರವೇಶವನ್ನು ಆಗಸ್ಟ್ 04, 2018ರ ಸಂಜೆ ಬೆಂಗಳೂರಿನಲ್ಲಿ ನೆರವೇರಿಸಲಿದ್ದಾರೆ.
ಸಂಯುಕ್ತ ಅರಬ್ ಸಂಸ್ಥಾನದ ದುಬೈ ನಿವಾಸಿ ಅನಂತ್ ರಘುನಾಥ್ ಹಾಗು ಶ್ರೀಲೇಖಾ ಅನಂತ್ ಅವರ ಸುಪುತ್ರಿ ಪ್ರಜ್ಞಾ, ದುಬೈನ ಜೆಮ್ಸ್ ಫೌಂಡರ್ಸ್ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ 5ನೇ ವಯಸ್ಸಿನಿಂದ ದುಬೈಯ ಸಂಕೀರ್ಣ ನೃತ್ಯ ಶಾಲೆಯ ನಿರ್ದೇಶಕಿ, ಗುರು, ವಿದುಷಿ ಸಪ್ನಾ ಕಿರಣ್ ರಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ.
ದುಬೈನಲ್ಲಿ ವಿಜೃಂಭಣೆಯ ನೃತ್ಯ ಶಾಲೆ ವಾರ್ಷಿಕೋತ್ಸವ
ಸಮರ್ಥ ಗುರು ಮಾತ್ರ ಒಬ್ಬ ಪರಿಪೂರ್ಣ ಶಿಷ್ಯನನ್ನು ಬೆಳೆಸಬಲ್ಲ ಎನ್ನುವಂತೆ ನಾಟ್ಯ, ರಂಗ ನಟನೆ, ನೃತ್ಯ ನಿರ್ದೇಶನ, ಪ್ರದರ್ಶನ ಹೀಗೆ ಬಹುಮುಖ ಪ್ರತಿಭೆಗಳ ಆಗರವಾಗಿರುವ ಗುರು ಸಪ್ನಾರವರ ಗರಡಿಯಲ್ಲಿ ಚಿಗುರುತ್ತಿರುವ ಪ್ರಜ್ಞಾ, ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಚೆಸ್, ಅಬಾಕಸ್ ಮುಂತಾದ ಬುದ್ಧಿಮತ್ತೆಗೆ ಇಂಬು ನೀಡುವಂತಹ ಸ್ಪರ್ಧೆಗಳಲ್ಲಿ ಬಹಳಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ.

ಈಗಾಗಲೇ ವಿದೇಶದ ದುಬೈ, ಶಾರ್ಜಾ, ಅಬುಧಾಬಿಗಳಲ್ಲಿ ಸಮೂಹ ನೃತ್ಯ ಪ್ರದರ್ಶನ ನೀಡಿರುವ ಪ್ರಜ್ಞಾ, ಇತ್ತೀಚಿಗೆ ವಿಶೇಷವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ, ಪರ್ಯಾಯ ಪೀಠದ ಪಲಿಮಾರು ಶ್ರೀಗಳ ಸಮ್ಮುಖದಲ್ಲಿ ಸಮೂಹ ನೃತ್ಯ ಪ್ರದರ್ಶನ ಮಾಡಿದ್ದರು.

ದಕ್ಷಿಣ ಭಾರತದ ಪಾರಂಪರಿಕ ನೃತ್ಯ ಕಲೆ ಭರತನಾಟ್ಯವನ್ನು ವಿದೇಶದ ಸಂಯುಕ್ತ ಅರಬ್ ಸಂಸ್ಥಾನದ ದುಬೈಯಲ್ಲಿ ಕಲಿತ 'ಸಂಕೀರ್ಣ'ದ ವಿದ್ಯಾರ್ಥಿನಿ, ಭರವಸೆಯ ಕಲಾವಿದೆ ಪ್ರಜ್ಞಾ ಅನಂತ್ ಆಗಸ್ಟ್ 4ರ ಸಂಜೆ 5.30 ರಿಂದ ಬೆಂಗಳೂರು ನಗರದ ಕೆಆರ್ ರಸ್ತೆಯಲ್ಲಿರುವ ಗಾಯನ ಸಮಾಜದ ಸಭಾಂಗಣದಲ್ಲಿ ಏಕವ್ಯಕ್ತಿ ಪ್ರದರ್ಶನದ ರಂಗಪ್ರವೇಶ ನೆರವೇರಿಸಲಿದ್ದಾರೆ.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications