ದುಬೈನಲ್ಲಿ ವಿಜೃಂಭಣೆಯ ನೃತ್ಯ ಶಾಲೆ ವಾರ್ಷಿಕೋತ್ಸವ
'ಸಂಕೀರ್ಣ' ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವ ದುಬೈಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಏಪ್ರಿಲ್ 13ರ ಸಂಜೆ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ಗುರು, ವಿದುಷಿ ಸಪ್ನಾ ಕಿರಣ್ ಹಾಗು ಕಿರಣ್ ಕುಮಾರ್ ಕದ್ರಿಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ನಾಟ್ಯ ದೇವಾ ನಟರಾಜನಿಗೆ ಭಕ್ತಿಪೂರ್ವಕ "ಪುಷ್ಪಾಂಜಲಿ"ಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಸಂಕೀರ್ಣದ ವಿದ್ಯಾರ್ಥಿನಿಯರು ಚಾಲನೆ ಕೊಟ್ಟರು. ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ, ಶಕ್ತಿಯನ್ನು ಕಾಳಿ ಕೌತುವಂ ಮೂಲಕ, ಥೊಡ್ಯಾ ಮಂಗಳಂನಲ್ಲಿ ಮಹಾವಿಷ್ಣುವನ್ನು, ಭಕ್ತ ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನು, ಪುರಂದರ ದಾಸರ 'ಭಾಗ್ಯದ ಲಕ್ಷ್ಮಿ ಬಾರಮ್ಮ'ದ ಮೂಲಕ ದೇವಿ ಲಕ್ಷ್ಮೀ ಗೆ ನಾಟ್ಯ ವಂದನೆ ಸಲ್ಲಿಸಿದರು.

ಅಡವು, ಅಜ್ಹಾಗು ದೇವಾ, ಆಡಿದ ನಾಡಿದ, ಕೊರವಂಜಿ, ಗೋವಿಂದ ನಿನ್ನ, ಮುಂತಾದ ನೃತ್ಯ ವೈವಿಧ್ಯಗಳಿಗೆ ನ್ಯಾಯ ಒದಗಿಸಿದ ನರ್ತಕಿಯರು, ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು 'ವಿಷಮಕರ ಕಣ್ಣನ್' ಮೂಲಕ ನರ್ತಿಸಿ ಜನರ ಮನಗೆದ್ದರು. ಅಯಗಿರಿ ನಂದಿನಿಯ ಮೂಲಕ ನವದುರ್ಗೆಯರು ನೆರೆದವರನ್ನು ರೋಮಾಂಚನಗೊಳಿಸಿದರೆ, ಕೊನೆಯದಾಗಿ ಪ್ರದರ್ಶನಗೊಂಡ 'ಧರ್ಮಕ್ಷೇತ್ರ ' ಕೃಷ್ಣಾರ್ಜುನರ ಗೀತೋಪದೇಶದ ನೃತ್ಯವನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತಿತ್ತು.
ಸಿಂಗಪುರದಲ್ಲಿ ದಾಸಶ್ರೇಷ್ಠ ಪುರಂದರ ನಮನ -2018
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಭರತನಾಟ್ಯ ಕಲಾವಿದೆ ಚಂದ್ರಾ ಸುಬ್ರಮಣ್ಯನ್, ಗುರು ಸಪ್ನಾ ಕಿರಣ್ ರವರ ಪರಿಶ್ರಮವನ್ನು ಕೊಂಡಾಡಿ ಕಾರ್ಯಕ್ರಮದ ಗುಣಮಟ್ಟ, ಶಿಸ್ತು ಹಾಗು ಅಚ್ಚುಕಟ್ಟುತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೋರ್ವ ಅತಿಥಿ ಎನ್. ಮೋಹನ್ ಅವರು 'ಸಂಕೀರ್ಣ'ದೊಂದಿಗಿನ ತಮ್ಮ ಕೆಲವು ವರ್ಷಗಳ ಒಡನಾಟವನ್ನು ಮೆಲುಕು ಹಾಕಿ ಈ ನೃತ್ಯ ಶಾಲೆಯ ಬೆಳವಣಿಗೆಗೆ ಹರ್ಷ ವ್ಯಕ್ತಪಡಿಸಿದರು.

ಅದ್ಭುತ ಸಂಗೀತ, ಸೂಕ್ತ ಹಾಡುಗಳು, ಪ್ರತಿಭಾನ್ವಿತ ನೃತ್ಯ ಪಟುಗಳು, ಚಂದದ ವಸ್ತ್ರಭಾರಣಗಳು ಹಾಗು ನೈಪುಣ್ಯತೆಯ ನೃತ್ಯ ಸಂಯೋಜನೆಯ ಸುಂದರ ಕಾರ್ಯಕ್ರಮವನ್ನು ಕಥೆ, ಇತಿಹಾಸ, ಪುರಾಣ ಹಾಗು ವೇದಗಳ ನಿದರ್ಶನಗಳೊಂದಿಗೆ ಬಹಳ ಸೊಗಸಾದ ಭಾಷೆಯಲ್ಲಿ ಶ್ರುತಿ ಕಾರ್ತಿಕ್ ನಿರೂಪಿಸಿದರು.
ಕುವೈತ್ ನಲ್ಲಿ ಬಿಡುಗಡೆಯಾದ ಮೇಷ್ಟ್ರ ಪ್ರವಾಸ ಕಥನ
ಗುರು ವಿದುಷಿ ಸಪ್ನಾ ಕಿರಣ್ ವಿದ್ಯಾರ್ಥಿಗಳ ಪ್ರದರ್ಶನಗಳಿಗೆ ಹೆಮ್ಮೆ ವ್ಯಕ್ತಪಡಿಸಿ ಅತಿಥಿಗಳಿಗೆ, ಗುರುಗಳಿಗೆ, ಹೆತ್ತವರಿಗೆ, ಶಿಷ್ಯವೃಂದಕ್ಕೆ, ಕುಟುಂಬ ವರ್ಗದವರಿಗೆ ಹಾಗು ನೆರೆದವರಿಗೆಲ್ಲಾ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

'ಸಂಕೀರ್ಣ'ನೃತ್ಯ ಶಾಲೆ, ದುಬೈ
2011ನೇ ಇಸವಿಯಲ್ಲಿ ಸಾಕಾರಗೊಂಡ 'ಸಂಕೀರ್ಣ' ವಿದುಷಿ ಸಪ್ನಾ ಕಿರಣ್ ಅವರ ಸ್ವಪ್ನ ಇದು. ಇಲ್ಲಿ ಭಾರತದಾದ್ಯಂತ ವಿದ್ಯಾರ್ಥಿನಿಯರು ಭರತನಾಟ್ಯವನ್ನು ಶಾಸ್ತ್ರೀಯವಾಗಿ ಗುರು ಪರಂಪರೆಯ ಮಾದರಿಯಲ್ಲಿ ಅಭ್ಯಾಸ ಮಾಡುತ್ತಾರೆ. ಗುಣಮಟ್ಟ ಹಾಗು ಸಾಂಪ್ರದಾಯಿಕ ಶೈಲಿಗೆ ಹೆಸರಾದ 'ಸಂಕೀರ್ಣ' ಯು.ಎ.ಇನಲ್ಲಿ ಹಾಗು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು, ಬಹುತೇಕ ಪ್ರತಿವರ್ಷವೂ ಇಲ್ಲಿನ ಒಂದು ಅಥವಾ ಎರಡು ವಿದ್ಯಾರ್ಥಿನಿಯರು ರಂಗ ಪ್ರವೇಶ ಮಾಡುತ್ತಾರೆ.

ಕಿರುವಯಸ್ಸಿನಲ್ಲೇ ನೃತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ವಿದುಷಿ ಸಪ್ನಾ ಕಿರಣ್ ಸ್ವತಃ ಒಬ್ಬ ಅದ್ಭುತ ನೃತ್ಯಗಾರ್ತಿ, ರಂಗ ನಟಿ ಹಾಗೂ ಭರತನಾಟ್ಯ ಕಲಾವಿದರ ಕುಟುಂಬದಿಂದ ಬಂದವರು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications