ಬೆಂಗಳೂರು ಸಿವಿಲ್ ವಾರ್ಡನ್‌ ಆಗಲು ಹೆಸರು ಕೊಡಿ; ಆಯುಕ್ತರ ಮನವಿ

ಬೆಂಗಳೂರು, ಜುಲೈ 14 : ಬೆಂಗಳೂರು ನಗರದಲ್ಲಿ ಮಂಗವಾರದಿಂದ ಒಂದು ವಾರದ ಲಾಕ್ ಡೌನ್ ಜಾರಿಗೆ ಬರುತ್ತಿದೆ. ಈ ಸಮಯದಲ್ಲಿ ಪೊಲೀಸರಿಗೆ ಸಹಕಾರ ನೀಡಲು ಜನರು ಸಿವಿಲ್ ವಾರ್ಡನ್ ಆಗಿ ಕೆಲಸ ಮಾಡಬಹುದಾಗಿದೆ.

Recommended Video

      Yedyurappa Govt Negligent | Oneindia Kannada

      ಮಂಗಳವಾರ ಸಂಜೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ನಗರದ 18 ರಿಂದ 45 ವರ್ಷದೊಳಗಿನ ಪುರುಷ, ಮಹಿಳೆಯರು ಸಿವಿಲ್ ವಾರ್ಡನ್ ಆಗಲು ಹೆಸರು ನೋಂದಾಯಿಸಬಹುದಾಗಿದೆ ಎಂದು ಹೇಳಿದ್ದಾರೆ.

      Apply For Civil Police Warden To Help Bengalugu Local Police

      ದೈಹಿಕವಾಗಿ ಸಮರ್ಥವಾಗಿರುವ ಮತ್ತು ಸೇವಾ ಮನೋಭಾವನೆ ಹೊಂದಿರುವ ಬೆಂಗಳೂರಿನ ಜನರು ಸಿವಿಲ್ ವಾರ್ಡನ್ ಆಗುವ ಮೂಲಕ ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಬಹುದು. ಲಾಕ್ ಡೌನ್ ಅವಧಿಯಲ್ಲಿ ಪೊಲೀಸರಿಗೆ ಸಿವಿಲ್ ವಾರ್ಡನ್ ಸಹಾಯ ಮಾಡಬಹುದಾಗಿದೆ.

      ಸಿವಿಲ್ ವಾರ್ಡನ್ ಆಗುವ ಜನರು ಕೋವಿಡ್ - 19 ಹರಡದಂತೆ ಇರುವ ಮಾರ್ಗಸೂಚಿಗಳನ್ನು ಜನರು ಪಾಲನೆ ಮಾಡಲು ಸ್ಥಳೀಯ ಪೊಲೀಸರಿಗೆ ನೆರವು ನೀಡಬೇಕಿದೆ. ಆಸಕ್ತರು http://bcp.gov.in ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

      ಭಾಸ್ಕರರಾವ್ ಟ್ವೀಟ್

      ಕರ್ನಾಟಕ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಲಾಕ್ ಡೌನ್ ಜಾರಿಗೊಳಿಸುತ್ತಿದೆ. ಈಗಾಗಲೇ ಲಾಕ್ ಡೌನ್ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+