Price Hike: ಬಸ್, ಮೆಟ್ರೋ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್
ಬೆಂಗಳೂರು, ಮಾರ್ಚ್, 05: ಈಗಾಗಲೇ ಬಸ್, ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಈ ಶಾಕ್‌ನಿಂದ ಹೊರಬರುವ ಮುನ್ನವೇ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಏನದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತ್ತೀಚೆಗಷ್ಟೇ ಬಸ್ ಹಾಗೂ ಮೆಟ್ರೋ ದರದ ಹೆಚ್ಚಳ ಮಾಡಲಾಗಿತ್ತು. ಈ ಹೊರೆಯಿಂದ ಸುಧಾರಿಸಿಕೊಳ್ಳುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ಮೀಟರ್ ದರ ಏರಿಕೆಗೆ ಮುಂದಾಗಿದೆ ಎನ್ನುವ ಮಾಹಿತಿ ತಿಳಿದುಬದಿದೆ.

ಈಗಾಗಲೇ ಬಸ್, ಮಟ್ರೋ ಟಿಕೆಟ್ ದರ ಏರಿಕೆಯಿಂದ ನಗರದ ಜನರು ಬೇಸತ್ತು ಹೋಗಿದ್ದಾರೆ. ಈ ನಡುವೆಯೂ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಬೇಡಿಕೆಗಳನ್ನು ಆಟೋ ಚಾಲಕರು ಇಟ್ಟಿದ್ದಾರೆ. ಇದು ಜಾರಿಯಾದ್ರೆ ಈಗಾಗಲೇ ದರ ಏರಿಕೆಯ ಗಾಯಗೊಂಡಿರುವ ಪ್ರಯಾಣಿಕರ ಹೊಟ್ಟೆ ಮೇಲೆ ಮತ್ತೆ ಬರೆ ಎಳೆದಂತೆ ಆಗಲಿದೆ.
ಜನವರಿಯಲ್ಲಿ ರಾಜ್ಯದಲ್ಲಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಇದೇ ವೇಳೆ ನಗರದ ಜನರ ಜೀವನಾಡಿ ಸಾರಿಗೆ ಬಿಎಂಟಿಸಿ ಬಸ್‌ಗಳ ದರವೂ ಏರಿಕೆ ಮಾಡಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರವವನ್ನು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿತ್ತು.
ಇನ್ನು ಇದೇ ತಿಂಗಳು ಅಂದರೆ, ಮಾರ್ಚ್‌ನಲ್ಲಿಯೇ ಆಟೋ ಮೀಟರ್ ದರ ಏರಿಕೆಯಾಗುವ ಸಾಧ್ಯತೆಯಿ ಎನ್ನಲಾಗುತ್ತಿದೆ. ಇದು ಒಂದು ವೇಳೆ ಜಾರಿಯಾದ್ರೆ, ನಗರದ ಜನತೆಗೆ ಮತ್ತೊಂದು ದರ ಏರಿಕೆ ಪೆಟ್ಟು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಎಂಟಿಸಿ, ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಆಟೋ ಮೀಟರ್ ದರ ಹೆಚ್ಚಳ ಮಾಡಲು ಒತ್ತಡ ಹೆಚ್ಚಾಗಿದೆ.
ಈ ಹಿನ್ನೆಲೆ ಮಾರ್ಚ್ 12ರಂದು 11 ಗಂಟೆಗೆ ಆಟೋ ದರ ಏರಿಕೆ ಕುರಿತು ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ದರ ಪರಿಷ್ಕರಣೆ ಸಭೆ ನಡೆಯಲಿದೆ. ಈಗಾಗಲೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮೀಟರ್ ದರ ಹೆಚ್ಚಳ ಮಾಡುವಂತೆ ಒತ್ತಡ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಅಂದರೆ 2024ರಲ್ಕೇ ಆಟೋ ಚಾಲಕ ಸಂಘಟನೆಗಳು ದರ ಏರಿಕೆಗೆ ಮನವಿ ಮಾಡಿದ್ದವು. ಒಂದು ಕಿಲೋ ಮೀಟರ್‌ಗೆ 5 ರೂಪಾಯಿ, ಎರಡು ಕಿಲೋ ಮೀಟರ್‌ಗೆ 10 ರೂಪಾಯಿ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ನಗರದಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿಲೋ ಮೀಟರ್‌ಗೆ 30 ರೂಪಾಯಿ ಇದ್ದು, ಈ ಕನಿಷ್ಟ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಈಗ ಮನವಿ ಮಾಡಲಾಗಿದೆ.
ಈ ಹಿಂದೆ ಅಂದರೆ 2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಆಟೋ ಸಿಎನ್ಜಿ ಅನಿಲದ ದರವೂ ಒಂದು ಕೆಜಿಗೆ 88 ರೂಪಾಯಿ ಆಗಿದೆ. ಎಲ್ಪಿಜಿ ದರ ಕೆಜಿಗೆ 61 ರೂಪಾಯಿ ಆಗಿದ್ದು, ಮೀಟರ್ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಇದೀಗ 88 ರೂಪಾಯಿಗೆ ಹೆಚ್ಚಳ ಆಗಿದೆ, ಅದ್ದರಿಂದ ಆಟೋ ಮೀಟರ್ ದರವನ್ನು ಏರಿಕೆ ಮಾಡಲೇಬೇಕು ಎಂದು ಆಟೋ ಚಾಲಕರು ಬೇಡಿಕೆ ಹಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಕುರಿತು ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.












Click it and Unblock the Notifications