ಯುವತಿಯ ಟಿ ಶರ್ಟ್ ಹಿಡಿದು ಎಳೆದಾಡಿದ ಕಾಮುಕರು

ಬೆಂಗಳೂರು, ಜನವರಿ 7: ಕಮ್ಮನಹಳ್ಳಿ, ಕೆ.ಜಿ ಹಳ್ಳಿ ಪ್ರಕರಣಗಳು ಹಸಿಯಾಗಿರುವಾಗಲೇ ಬೆಂಗಳೂರಿನ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಣಸವಾಡಿಯಲ್ಲಿ ಜನವರಿ 4ನೇ ದಿನ ಗೋಲ್ಡ್ ಜೀಮ್ ಗೆ ಹೋಗಿದ್ದ ಯುವತಿ ರಾತ್ರಿ 9 ಗಂಟೆ ಸಮಯದಲ್ಲಿ ಜಿಮ್ನಿಂದ ತನ್ನ ಮನೆಗೆ ಸಾಗುತ್ತಿದ್ದಾಗ ಆಕೆಯ ಮೇಲೆ ಇಬ್ಬರು ಕಾಮುಕರು ಎರಗಿದ್ದಾರೆ. ಆ ಸಮಯದಲ್ಲಿ ಮಹಿಳೆ ಬಿಡಿಸಿಕೊಳ್ಳಲು ಪ್ರಯತ್ನಪಟ್ಟಾಗ ಆಕೆಯ ಟಿ ಶರ್ಟ್ ಹಿಡಿದು ಕಾಮುಕರು ಎಳೆದಾಡಿದ್ದಾರೆ. ಜೋರಾಗಿ ಚೀರಾಡಿದ ಮಹಿಳೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದಾಳೆ. ನಂತರ ಅಲ್ಲಿಂದ ಉಸಿರು ಕಟ್ಟಿಕೊಂಡು ಓಡಿ ಮನೆ ಸೇರಿದ್ದಾಳೆ.[ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾದ ವಿಕೃತಕಾಮಿ]

molestation

ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಜನವರಿ 5ರಂದು ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.[ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?]

ಕಮ್ಮನಹಳ್ಳಿ ಮತ್ತು ಕೆ.ಜಿ ಹಳ್ಳಿ ಪ್ರಕರಣಗಳು ಇನ್ನು ಹಸಿರಾಗಿರುವಾಗಲೇ ಬಾಣಸವಾಡಿಯಲ್ಲಿ ಈ ಘಟನೆ ಜರುಗಿದೆ. ಬೆಂಗಳೂರು ಉದ್ಯಾನ ನಗರಿ, ಸುಂದರ ಪ್ರದೇಶ ಎಂದು ಬಂದು ಸೇರುವವರಿಗೆ ಇದೊಂದು ಕಾಮುಕ ನಗರಿ ಎಂದು ಭಾಸವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+