ಮದುವೆಗೆ ಪ್ರೇಯಸಿ ನೋ ಅಂದಿದ್ದಕ್ಕೆ ಹೈ-ಟೆನ್ಷನ್ ಕಂಬ ಏರಿದ ಪಾಗಲ್‌ ಪ್ರೇಮಿ; ಆನೇಕಲ್‌ನಲ್ಲಿ ಯುವಕನ ಹೈಡ್ರಾಮಾ

ಆನೇಕಲ್: ಪ್ರೇಯಸಿ ಮದುವೆಗೆ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಸಾವಿರಾರು ವೋಲ್ಟ್ ವಿದ್ಯುತ್ ಹರಿಯುವ ಹೈ-ಟೆನ್ಷನ್ ಕಂಬ ಏರಿ ಭಾರಿ ಹೈಡ್ರಾಮಾ ಸೃಷ್ಟಿಸಿರುವ ಆಘಾತಕಾರಿ ಘಟನೆ ಆನೇಕಲ್‌ ತಾಲ್ಲೂಕಿನ ಚಿನ್ನಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ. ಯುವಕ ಇಡೀ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದ ಈ ಹೈಡ್ರಾಮಾದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮಾದಕ ವ್ಯಸನ ತಂದಿಟ್ಟ ಪ್ರೇಮ ವಿರಹ

ಇದೇ ಗ್ರಾಮದ ನಿವಾಸಿಯಾದ ಸೋಮಶೇಖರ್ ಎಂಬ ಯುವಕ, ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಸೋಮಶೇಖರ್ ಮದ್ಯ ಹಾಗೂ ಮಾದಕ ಚಟಗಳಿಗೆ ದಾಸನಾಗಿದ್ದ. ಆತನ ಈ ವಿಕೃತ ವರ್ತನೆ ಮತ್ತು ಹವ್ಯಾಸಗಳಿಂದ ಬೇಸತ್ತ ಯುವತಿ, ಇತ್ತೀಚೆಗೆ ಆತನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಳು. ಅಲ್ಲದೆ ಆತನನ್ನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಳು.

Anekal

ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ ಮನೆ ಧ್ವಂಸ

ಬುಧವಾರ ಬೆಳಗ್ಗೆ ಪೂರ್ಣ ಪ್ರಮಾಣದಲ್ಲಿ ನಶೆಯಲ್ಲಿದ್ದ ಸೋಮಶೇಖರ್, ತನ್ನ ಪ್ರೇಯಸಿಗೆ ಕರೆ ಮಾಡಿ ಮತ್ತೊಮ್ಮೆ ಮದುವೆಯ ಪ್ರಸ್ತಾಪ ಇಟ್ಟಿದ್ದಾನೆ. ಆದರೆ ಯುವತಿ ಮದುವೆಗೆ ನಿರಾಕರಿಸಿದಾಗ ಆಕ್ರೋಶಗೊಂಡ ಆತ, ನೇರವಾಗಿ ಯುವತಿಯ ಮನೆಗೆ ನುಗ್ಗಿ ಮೇಲ್ಛಾವಣಿಯ ಶೀಟ್‌ಗಳು ಸೇರಿದಂತೆ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಅಲ್ಲಿಂದ ಓಡಿಹೋಗಿ ಹತ್ತಿರದಲ್ಲೇ ಇದ್ದ ಹೈ-ಟೆನ್ಷನ್ ವಿದ್ಯುತ್ ಕಂಬವನ್ನು ಏರಿದ್ದಾನೆ. ತನಗಾಗಿ ಪ್ರೇಯಸಿ ಸ್ಥಳಕ್ಕೆ ಬಂದು, ಮದುವೆಗೆ ಒಪ್ಪಿಕೊಳ್ಳುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದ.

ತಲೆಗೆ ಐಫೋನ್ ಕಟ್ಟಿಕೊಂಡು ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ; ಈತನ ಒಂದು ಗಂಟೆಯ ಆದಾಯ ಕೇಳಿ ಸಾಫ್ಟ್‌ವೇರ್ ಇಂಜಿನಿಯರ್‌ಗಳೂ ಶಾಕ್
ತಲೆಗೆ ಐಫೋನ್ ಕಟ್ಟಿಕೊಂಡು ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ; ಈತನ ಒಂದು ಗಂಟೆಯ ಆದಾಯ ಕೇಳಿ ಸಾಫ್ಟ್‌ವೇರ್ ಇಂಜಿನಿಯರ್‌ಗಳೂ ಶಾಕ್

ಯುವಕ ಪ್ರಾಣದ ಹಂಗು ತೊರೆದು ವಿದ್ಯುತ್ ಕಂಬ ಏರಿದ್ದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇತ್ತ ಮಗನ ಹುಚ್ಚು ಸಾಹಸ ಮತ್ತು ರಂಪಾಟದಿಂದ ಬೇಸತ್ತ ಸೋಮಶೇಖರ್ ತಂದೆ ಕೂಡ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಮಗನ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಅಗ್ನಿಶಾಮಕ ದಳದ ಕಾರ್ಯಾಚರಣೆ ಯಶಸ್ವಿ

ಈ ವಿಷಯ ತಿಳಿಯುತ್ತಿದ್ದಂತೆ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆ ಲೈನ್‌ನ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಯಿತು. ಪೊಲೀಸರು ಕೆಳಗೆ ಇಳಿಯುವಂತೆ ಎಷ್ಟೇ ಮನವಿ ಮಾಡಿದರೂ ಸೋಮಶೇಖರ್ ಕೇಳಲಿಲ್ಲ. ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಪ್ರಯತ್ನ ನಡೆಸಿ, ಕಂಬದ ಮೇಲಿದ್ದ ಸೋಮಶೇಖರ್‌ನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕ ಕೆಳಗೆ ಇಳಿಯುತ್ತಿದ್ದಂತೆ ಇಡೀ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ತದನಂತರ ಆತನನ್ನು ವೈದ್ಯಕೀಯ ತಪಾಸಣೆ ಮತ್ತು ಮುಂದಿನ ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+