ಚಿತ್ರ ಕಲಾವಿದ ಶ್ರೀಧರ್‌ ದಂಪತಿ ಮಗಳಿಗೆ ಡಿಸ್ಟಿಂಕ್ಷನ್‌

ಬೆಂಗಳೂರು, ಮೇ .14: ಚಲನಚಿತ್ರ ಕಲಾವಿದರಾದ ಶ್ರೀಧರ್ ಮತ್ತು ಅನುರಾಧ ದಂಪತಿ ಪುತ್ರಿ ನೃತ್ಯದಲ್ಲಿ ಹೆಸರು ಮಾಡಿದಂತೆ ಓದಿನಲ್ಲೂ ವಿಶಿಷ್ಟ ಸಾಧನೆ ಮಾಡುವ ಮೂಲಕ ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಜಯನಗರದ ಎನ್‌ಎಂಕೆಆರ್‌‌ವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ‌ಯಾಗಿರುವ ಅನಘ ಗೌರಿ 600ಕ್ಕೆ 568 ಅಂಕಗಳಿಸಿದ್ದಾರೆ. ಮನಃಶಾಸ್ತ್ರದಲ್ಲಿ ನೂರಕ್ಕೆ 100, ಇತಿಹಾಸದಲ್ಲಿ 98, ಅರ್ಥಶಾಸ್ತ್ರದಲ್ಲಿ 95, ಇಂಗ್ಲಿಷ್‌ 92,‌ ಸಂಸ್ಕೃತ 96, ಸಮಾಜಶಾಸ್ತ್ರದಲ್ಲಿ 87 ಅಂಕವನ್ನು ಪಡೆದಿದ್ದಾರೆ.[ರಾಯಚೂರಿನ ಹುಡುಗ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ]

Anagha d/o actor Actor Shridhar-

ಮನಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವ ಅನಘಳಿಗೆ ಆ ವಿಷಯದಲ್ಲಿ ನೂರಕ್ಕೆ ನೂರು ಬಂದಿದ್ದು ಬಹಳ ಸಂತಸ ತಂದಿದೆ. ಈಗಾಗಲೇ ದೇಶ ಮತ್ತು ವಿದೇಶದಲ್ಲಿ ನೃತ್ಯ ಪ್ರದರ್ಶನ ನೀಡಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಪರಿಷತ್‌ನ (ಎನ್‌ಸಿಇಆರ್‌ಟಿ) ಸ್ಕಾಲರ್‌ಶಿಪ್‌ನ್ನು ಸಹ ಪಡೆಯುತ್ತಿದ್ದಾರೆ. ಪೋಷಕರ ಜೊತೆಗೆ ಇಂಗ್ಲೆಂಡ್‌, ಫ್ರಾನ್ಸ್‌ನಲ್ಲೂ ಅನಘ ಗೌರಿ ನೃತ್ಯ ಪ್ರದರ್ಶ‌ನ ನೀಡಿದ್ದಾರೆ.[ಪಿಯು ಟಾಪರ್ ಪೂಜಾ ಬಾಳಿಗ ಸಂದರ್ಶನ]

ಕಲಾವಿಭಾಗದಲ್ಲಿ ತೇರ್ಗಡೆಯಾಗುವುದು ಸುಲಭ, ಆದರೆ ಹೆಚ್ಚಿನ ಅಂಕ ತೆಗೆಯುವುದು ಕಷ್ಟ. ವಾರದಲ್ಲಿ ಮೂರುದಿನ ನೃತ್ಯ ತರಗತಿಗಳು ನಡೆಯುತ್ತಿತ್ತು. ಈ ಮಧ್ಯೆ ಬಿಡುವು ಮಾಡಿಕೊಂಡು ಅಧ್ಯಯನ ನಡೆಸುತ್ತಿದ್ದಳು. ಅಲ್ಲದೇ ಪ್ರತಿದಿನವು ನೃತ್ಯ ಆಭ್ಯಾಸ ಮಾಡಿದ್ದರೂ ಓದಿನ ಕಡೆಗೂ ಗಮನ ಕೊಡುತ್ತಿದ್ದಳು. ಹೀಗಾಗಿ ಈ ಫಲಿತಾಂಶ ಬಂದಿದೆ ಎಂದು ತಾಯಿ ಅನುರಾಧ ಶ್ರೀಧರ್‌ ಅನಘ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+