ಬೆಂಗಳೂರು ಸೇಫ್ ಸಿಟಿ ಮೊದಲ ಹಂತದ ಯೋಜನೆಗೆ ಅಮಿತ್ ಶಾ ಚಾಲನೆ
2024ರಲ್ಲಿ ಭಾರತದ ಪೊಲೀಸ್ ವ್ಯವಸ್ಥೆಯು ವಿಶ್ವದ ಅತಿದೊಡ್ಡದಾದ ವ್ಯವಸ್ಥೆಯಾಗಲಿದೆ ಎಂದು ಹೇಳಿರುವ ಅವರು ಇದಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಸಾಮರ್ಥ್ಯಗಳನ್ನು ಪಡೆಯಬೇಕು ಎಂದು ಹೇಳಿದರು.
ಬೆಂಗಳೂರು, ಮಾರ್ಚ್ 4: ಕರ್ನಾಟಕ ಗೃಹ ಇಲಾಖೆ ಆಯೋಜಿಸಿದ್ದ ಸೇಫ್ ಸಿಟಿ ಬೆಂಗಳೂರು ಯೋಜನೆಯ ಮೊದಲ ಹಂತದ ಕಾಮಗಾರಿಗೆ ಚಾಲನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದರು.
2024ರಲ್ಲಿ ಭಾರತದ ಪೊಲೀಸ್ ವ್ಯವಸ್ಥೆಯು ವಿಶ್ವದ ಅತಿದೊಡ್ಡದಾದ ವ್ಯವಸ್ಥೆಯಾಗಲಿದೆ ಎಂದು ಹೇಳಿರುವ ಅವರು ಇದಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಸಾಮರ್ಥ್ಯಗಳನ್ನು ಪಡೆಯಬೇಕು. 632 ಕೋಟಿ ರೂ.ಗಳ ಯೋಜನೆಯಡಿ ನಗರವನ್ನು ಮಹಿಳೆಯರಿಗೆ ಸುರಕ್ಷಿತಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಾವಿರಾರು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸ್ಥಾಪನೆ, ರಾಣಿ ಚೆನ್ನಮ್ಮ ಪಡೆ ಪಡೆ ರಚನೆ ಸೇರಿವೆ.

ಅಪರಾಧಗಳನ್ನು ತಡೆಗಟ್ಟಲು ಮತ್ತು ತ್ವರಿತವಾಗಿ ತನಿಖೆ ನಡೆಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಶಾ ಪೊಲೀಸರಿಗೆ ಸೂಚಿಸಿದರು. ಅಲ್ಲದೆ ಅಕ್ರಮ ಮಾದಕ ದ್ರವ್ಯಗಳ ವಿರುದ್ಧ ತೀವ್ರ ನಿಯಂತ್ರಣ, ನ್ಯಾಯ ವಿಜ್ಞಾನದ ರಾಷ್ಟ್ರೀಯ ಜಾಲವನ್ನು ರೂಪಿಸಲು ಮತ್ತು ಯುವಜನರಲ್ಲಿ ಡಿಜಿಟಲ್ ಜಾಗೃತಿ ಮೂಡಿಸಲು ಅವರು ಕರೆ ನೀಡಿದರು.
ಸೈಬರ್ ಕ್ರೈಮ್ ತರಬೇತಿ ಮತ್ತು ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿದ ಸೈಬರ್ ಅಪರಾಧ ತನಿಖಾ ಕೈಪಿಡಿಯ ಮೂರನೇ ಆವೃತ್ತಿಯನ್ನು ಶಾ ಬಿಡುಗಡೆ ಮಾಡಿದರು. ಇದು ಸಿಐಡಿ ಕರ್ನಾಟಕವು ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇನ್ಫೋಸಿಸ್ ಫೌಂಡೇಶನ್ ಸಹಯೋಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದೆ.

ಈ ಕೈಪಿಡಿಯ ಇತ್ತೀಚಿನ ಆವೃತ್ತಿಯು ಡಿಜಿಟಲ್ ಸಾಕ್ಷ್ಯ ಸಂಗ್ರಹ, ಸಂರಕ್ಷಣೆ ಮತ್ತು ವಿಶ್ಲೇಷಣೆ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳು ಮತ್ತು ಸೈಬರ್ ಕ್ರೈಮ್ ತನಿಖೆಗಳನ್ನು ನಡೆಸಲು ಉತ್ತಮ ಅಭ್ಯಾಸಗಳು ಸೇರಿದಂತೆ ಸೈಬರ್ ಅಪರಾಧ ತನಿಖೆಗಳ ಕುರಿತು ಅಮೂಲ್ಯವಾದ ಮಾರ್ಗದರ್ಶನವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಿಐಡಿ ಹೇಳಿಕೆಯಲ್ಲಿ ತಿಳಿಸಿದೆ. ಇದು ಇತ್ತೀಚಿನ ಡಿಜಿಟಲ್ ಫೋರೆನ್ಸಿಕ್ ಪರಿಕರಗಳು ಮತ್ತು ತಂತ್ರಗಳ ಮಾಹಿತಿಯನ್ನು ಒಳಗೊಂಡಿದೆ, ಇದು ಡಿಜಿಟಲ್ ಫೊರೆನ್ಸಿಕ್ಸ್ ಪರೀಕ್ಷಕರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದಿದೆ.
ಇದು ಉದ್ಯಮದಲ್ಲಿನ ಉತ್ತಮ ಅಭ್ಯಾಸಗಳು ಮತ್ತು ಮಾನದಂಡಗಳನ್ನು ಆಧರಿಸಿದೆ. ಅಲ್ಲದೆ ಪೊಲೀಸ್, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗಕ್ಕೆ ಸಮಗ್ರ ಮತ್ತು ಪ್ರಾಯೋಗಿಕ ಮಾರ್ಗದರ್ಶಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ಗೂ ಶಾ ಭೇಟಿ ನೀಡಿದರು.












Click it and Unblock the Notifications