ಬೆಂಗಳೂರಲ್ಲಿ 5 ಮಂದಿ ಅಮಾಯಕರ ಪ್ರಾಣ ತೆಗೆದ ಆಂಬುಲೆನ್ಸ್
ಬೆಂಗಳೂರು, ಮೇ 27: ಜೀವ ಉಳಿಸಬೇಕಿದ್ದ ಆಂಬುಲೆನ್ಸ್ ಐದು ಮಂದಿ ಅಮಾಯಕರ ಪ್ರಾಣವನ್ನು ತೆಗೆದಿರುವ ಘಟನೆ ಬೆಂಗಳೂರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೋಗಿಲು ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಆಂಬ್ಯುಲೆನ್ಸ್‌ನ್ನು ಚಾಲಕ ವೇಗವಾಗಿ ಓಡಿಸಿಕೊಂಡು ಹೋಗಿದ್ದೇ ಅಪಘಾತಕ್ಕೆ ಕಾರಣವಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ. ಆಂಬುಲೆನ್ಸ್ ಕಾರಿಗೆ ಹೋಗಿ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಐದು ಮಂದಿ ಮೃತಪಟ್ಟಿದ್ದಾರೆ. ಚಾಲನೆ ವೇಗವಾಗಿದ್ದರಿಂದ ವಾಹನಕ್ಕೆ ಡಿಕ್ಕಿ ಹೊಡೆದರೂ ಕೂಡ ನಿಯಂತ್ರಣಕ್ಕೆ ಬಂದಿರಲಿಲ್ಲ. ಸೌಗತ್ ಚೌಧರಿ, ಸುಜಯ್, ಜಯಂತಿ, ಧೃವಡೇ, ದೀಪಂಕರ್ ಮೃತ ದರ್ದೈವಿಗಳು.

ಸುಜಯ್ ಬೆಳಗ್ಗೆ 6 ಗಂಟೆಗೆ ಚೆನ್ನೈಗೆ ವಿಮಾನ ಮೂಲಕ ತೆರಳುವವರಿದ್ದರು. ಅವರನ್ನು ಬಿಡಲು ಈ ಐದೂ ಮಂದಿ ತೆರಳಿದ್ದರು.












Click it and Unblock the Notifications