ವೈದ್ಯರ ಜತೆ ಕೊರೊನಾದಿಂದ ಗುಣಮುಖನಾದ ಆಂಬ್ಯುಲೆನ್ಸ್ ಚಾಲಕನ ನೃತ್ಯ

ಬೆಂಗಳೂರು, ಮೇ 26: ಕೊರೊನಾ ಸೋಂಕಿಗಿಂತ ರೋಗಿಗಳು ಮಾನಸಿಕವಾಗಿ ಕುಗ್ಗಿಹೋಗುವುದೇ ಹೆಚ್ಚು, ಇದರಿಂದಲೇ ಸೋಂಕಿನ ತೀವ್ರತೆಯೂ ಹೆಚ್ಚಾಗುತ್ತಿದೆ.

ಅದೇ ಸೋಂಕನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಪಣ ತೊಡಿ ಆದಷ್ಟು ಬೇಗ ಗುಣಮುಖರಾಗುತ್ತೀರಿ. 28 ವರ್ಷದ ಆಂಬ್ಯುಲೆನ್ಸ್ ಚಾಲಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು, ಮಂಗಳವಾರ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ತೆರಳುವ ವೇಳೆ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ, ಇದಕ್ಕೆ ವೈದ್ಯರು ಕೂಡ ಸಾಥ್ ನೀಡಿದ್ದಾರೆ. ಚಾಲಕನಿಗೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿತ್ತು, ಆಕ್ಸಿಜನ್ ಬೆಡ್ ಸಿಗದೆ ಪರದಾಡಿದ್ದರು, ಊರು ಊರು ಅಲೆದಿದ್ದರು, ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಲಭಿಸಿತ್ತು.

Bengaluru: Ambulance Driver Dances With Doctor In Hospital To Celebrate Beating Covid 19

ಇಆರ್‌ಟಿ ಫರಾಹ್ ಅವರಿಂದ ಚಾಲಕನಿಗೆ ಹಾಸಿಗೆ ಸಿಕ್ಕಿತ್ತು, ಮೇ 18 ರಂದು ರಾತ್ರಿ 11.30ಕ್ಕೆ ಕರೆ ಬಂದಿತ್ತು, ಚಾಲಕ ಅನಾಥನಾಗಿದ್ದು ಮೂವರು ಸ್ನೇಹಿತರೊಂದಿಗೆ ವಾಸವಾಗಿದ್ದ, ನೂರಾರು ಮಂದಿ ಪ್ರಾಣವನ್ನು ರಕ್ಷಿಸುವ ಆಂಬ್ಯುಲೆನ್ಸ್ ಚಾಲಕನಿಗೆ ಸಹಾಯ ಮಾಡದೆ ಇದ್ದರೆ ಹೇಗೆ ಎಂದು ಆಲೋಚಿಸಿದೆ ಎಂದು ಫರಾಹ್ ಹೇಳಿದ್ದಾರೆ.

ದಿನಕ್ಕೆ 30 ಸಾವಿರ ರೂ ಖರ್ಚಾಗಲಿದೆ ಎಂದು ಫರಾಹ್ ಹೇಳಿದ್ದರು ಆದರೆ ರೋಗಿಯ ಸ್ನೇಹಿತರ ಬಳಿಯೂ ಅಷ್ಟು ಹಣವಿರಲಿಲ್ಲ ಹಾಗಾಗಿ ಬಿಬಿಎಂಪಿ ಮೂಲಕ ಚಾಲಕನಿಗೆ ಹಾಸಿಗೆ ದೊರೆಯಿತು. ಇದೀಗ ಚಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದು, ವೈದ್ಯರಿಗೆ ಧನ್ಯವಾದ ತಿಳಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+