ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾರೋಗ್ಯಕ್ಕೆ ಸೆಡ್ಡು: ಆಂಬ್ಯುಲೆನ್ಸ್‌ನಲ್ಲಿ ಹೋಗಿ ಸಿನಿಮಾ ನೋಡಿದ್ದ ಅಂಬರೀಶ್

|
Google Oneindia Kannada News

ಬೆಂಗಳೂರು, ನವೆಂಬರ್ 25: ಅಂಬರೀಶ್ ಕೊನೆಯ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ, ಅಂಬರೀಶ್ ಅವರು ಬಹುದಿನಗಳ ನಂತರ ಚಿತ್ರದಲ್ಲಿ ಅಭಿನಯಿಸಿದ್ದರು. ಆ ಸಂದರ್ಭದಲ್ಲೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರು ಆಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಪೋಷಕನಟನಾಗಿ ಅಭಿನಯಿಸುವುದನ್ನು ಆಗಲೇ ನಿಲ್ಲಿಸಿದ್ದರು. ಆದರೂ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಅಭಿನಯಿಸಿದ್ದರು. ಅದು ತಮಿಳಿನ ಪವರ್ ಪಾಂಡಿ ಚಿತ್ರದ ರಿಮೇಕ್, ಅಂಬರೀಶ್ ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಕಾರಣ ಸೂಪರ್ ಸ್ಟಾರ್ ರಜನಿಕಾಂತ್.

ಕೊನೆಯ ಚಿತ್ರದಲ್ಲಿ ಅಭಿನಯಿಸಲು ಎರಡು ಕಾರಣಗಳು

ಕೊನೆಯ ಚಿತ್ರದಲ್ಲಿ ಅಭಿನಯಿಸಲು ಎರಡು ಕಾರಣಗಳು

ಅಂಬಿ ನಿಂಗೆ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಎರಡು ಕಾರಣಗಳಿಗಾಗಿ ಅಭಿನಯಿಸಿದ್ದರು, ಒಂದು ಅದರಲ್ಲಿ ಮೊದಲಿಗಿದ್ದ ಕಾರಣ ನಟ ರಜನೀಕಾಂತ್, ಎರಡನೇ ಕಾರಣ ಕಿಚ್ಚ ಸುದೀಪ್, ತಮಿಳಿನ ಪವರ್ ಪಾಂಡಿ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದೇನೆ ಅಭಿನಯಿಸಿದರೆ ಚೆಂದ, ಅವರಾದರೆ ಆ ಪಾತ್ರಕ್ಕೆ ನ್ಯಾಯ ಸಿಗುತ್ತದೆ ಎಂದು ರಜನೀಕಾಂತ್ ಸಲಹೆ ಕೊಟ್ಟಿದ್ದರಂತೆ.

ಅಂಬಿ ನೋಡಿದ ಕೊನೆಯ ಚಿತ್ರ ತಾಯಿಗೆ ತಕ್ಕ ಮಗ

ಅಂಬಿ ನೋಡಿದ ಕೊನೆಯ ಚಿತ್ರ ತಾಯಿಗೆ ತಕ್ಕ ಮಗ

ಶನಿವಾರ ರಾತ್ರಿ ಕೊನೆಯುಸಿರೆಳೆದ ಹಿರಿಯ ನಟ ಅಂಬರೀಶ್ ಅವರು ಕೊನೆಯ ಬಾರಿಗೆ ಮಾಧ್ಯಮಗಳ ಜೊತೆಗೆ ಸಿಕ್ಕಿದ್ದು, ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಅವರ ಪತ್ನಿ ಸುಮಲತಾ ಅವರು ಅಭಿನಯಿಸಿದ ತಾಯಿಗೆ ತಕ್ಕ ಮಗ ಚಿತ್ರದ ವೇಳೆ, ಬಳಿಕ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ

ಅಂಬಿನಿಂಗೆ ವಯಸ್ಸಾಯ್ತೋ ಚಿತ್ರದ ವೇಳೆ ಅಸ್ವಸ್ಥರಾಗಿದ್ದರು

ಅಂಬಿನಿಂಗೆ ವಯಸ್ಸಾಯ್ತೋ ಚಿತ್ರದ ವೇಳೆ ಅಸ್ವಸ್ಥರಾಗಿದ್ದರು

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಸಂದರ್ಭದಲ್ಲಿ ಅಂಬರೀಶ್ ಐದಾರು ಬಾರಿ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೂ ದಾಖಲಾಗಿದ್ದರು. ಆದರೂ ನಿಗದಿತ ಸಮಯಕ್ಕೆ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದ್ದರು. ಅದು ರಜನೀಕಾಂತ್ ಸಲಹೆಯ ಕಾರಣದಿಂದಲೋ, ಸುದೀಪ್ ಮೇಲಿನ ಪ್ರೀತಿಯಿಂದ ಚಿತ್ರದ ನಿರ್ಮಾಣಕ್ಕೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದ್ದರು. ಆಗ ವಿಕ್ರಂ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕವೇ ತೆರಳಿ ಚಿತ್ರ ವೀಕ್ಷಿಸಿದ್ದರು.

ನವೆಂಬರ್ 26ಕ್ಕೆ ಅಂಬರೀಶ್ ಅಂತ್ಯಕ್ರಿಯೆ

ನವೆಂಬರ್ 26ಕ್ಕೆ ಅಂಬರೀಶ್ ಅಂತ್ಯಕ್ರಿಯೆ

ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ (26-11-2018) ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನ ನಡೆಯುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸಮಾಧಿ ಸ್ಮಾರಕದ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ಇಡೀ ದಿನ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇಡಲಾಗುತ್ತದೆ. ಅಂತಿಮ‌ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಅಂದು 'ಜಲೀಲ' ಬರೆದಿದ್ದು ವಿದಾಯದ ಪತ್ರವೇ?ಅಂದು 'ಜಲೀಲ' ಬರೆದಿದ್ದು ವಿದಾಯದ ಪತ್ರವೇ?

English summary
Rebel star Ambareesh had been watched his last film 'Ambi Ninge Vayassayto' by traveling in ambulance from hospital who was on treatment recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X