ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲಿ ಮಹಾಘಟಬಂಧನ್: ದೇವೇಗೌಡ-ನಾಯ್ಡು ಭೇಟಿ ಇಂದು

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಇಂದು ಎಚ್ ಡಿ ದೇವೇಗೌಡ, ಎಚ್ ಡಿ ಕೆ, ಚಂದ್ರಬಾಬು ನಾಯ್ಡು ಭೇಟಿ | Oneindia Kannada

ಬೆಂಗಳೂರು, ನವೆಂಬರ್ 8: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಗುರುವಾರ(ನ.8) ಆಗಮಿಸಲಿದ್ದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಬಳಿ ಚರ್ಚೆ ನಡೆಸಲಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಗುರುವಾರ ಮಧ್ಯಾಹ್ನ 3.30ಕ್ಕೆ ಪದ್ಮನಾಭನಗರದಲ್ಲಿರುವ ಎಚ್‌ಡಿ ದೇವೇಗೌಡರ ನಿವಾಸದಲ್ಲಿ ಎಚ್‌ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಭೇಟಿಯಾಗಲಿದ್ದಾರೆ.

ರೆಡ್ಡಿ ಕೇಸ್: ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ ಆಂಧ್ರ ಸಿಎಂ ರೆಡ್ಡಿ ಕೇಸ್: ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ ಆಂಧ್ರ ಸಿಎಂ

ಹಾಗಾದರೆ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿಂದಿರುವ ಕಾರಣವೇನು ಎನ್ನುವುದಾದರೆ ದೇಶದಲ್ಲಿ ಎನ್‌ಡಿಎಯೇತರ ರಾಜಕೀಯ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್ ರಚಿಸುವ ಸಂಬಂಧ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂಧನ ಭೀತಿ: ಹೈದರಾಬಾದ್‌ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ ಬಂಧನ ಭೀತಿ: ಹೈದರಾಬಾದ್‌ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ

Alternative political forum: Naidu to meet HDD today

ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆ ಸಂಬಂಧ ನಾಯ್ಡು ಜೊತೆ ದೇವೇಗೌಡ ಮತ್ತು ಕುಮಾರಸ್ವಾಮಿ ಚರ್ಚಿಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

ಎಂಇಪಿಯ ನೌಹೀರಾ ಶೇಖ್‌ರಿಂದ ಕೋಟ್ಯಂತರ ಹಣ ಪಡೆದಿದ್ದ ರೆಡ್ಡಿ ಎಂಇಪಿಯ ನೌಹೀರಾ ಶೇಖ್‌ರಿಂದ ಕೋಟ್ಯಂತರ ಹಣ ಪಡೆದಿದ್ದ ರೆಡ್ಡಿ

ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೈತ್ರಿಪಕ್ಷಗಳ ಸರ್ಕಾರವನ್ನು ಜೊತೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿಯೇ ಹೋರಾಡುತ್ತೇವೆ ಂದು ಎಚ್‌ಡಿ ದೇವೇಗೌಡ ಹೇಳಿದ್ದಾರೆ.

English summary
Eyeing on the upcoming parliament election in the nation, Andra Pradesh chief minister Chandrababu Naidu will meet former prime minister H.D. Devegowda on November 8 in Bengaluru and like to discuss about formation of Mahaghatabandhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X