ಹೆಂಡತಿಯನ್ನ 50 ಪೀಸ್ ಮಾಡಿ ಫ್ರಿಡ್ಜ್ ಒಳಗೆ ಇಟ್ಟ ರಾಕ್ಷಸ ಗಂಡ? ಬೆಚ್ಚಿಬಿದ್ದ ಬೆಂಗಳೂರಿನ ಜನರು!

ಬೆಂಗಳೂರಿನಲ್ಲಿ ಹೆಂಡತಿಯನ್ನೇ ಗಂಡನು 50 ಪೀಸ್ ಮಾಡಿ ಫ್ರಿಡ್ಜ್ ಒಳಗೆ ಇಟ್ಟ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ಬೆಂಗಳೂರು ಬೆಚ್ಚಿಬೀಳುವ ಘಟನೆ ಈಗ ವೈಯ್ಯಾಲಿ ಕಾವಲ್‌ನಲ್ಲಿ ವರದಿಯಾಗಿದೆ. ವೈಯ್ಯಾಲಿ ಕಾವಲ್ ಪೈಪ್ ಲೈನ್ ಏರಿಯಾದಲ್ಲಿ ವಾಸವಿದ್ದ 26 ವರ್ಷದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸುಮಾರು 50 ಪೀಸ್ ಮಾಡಿ ಫ್ರಿಡ್ಜ್ ಒಳಗೆ ಬಾಡಿಯನ್ನ ಇಟ್ಟು ಕೊಲೆ ಆರೋಪಿ ಎಸ್ಕೇಪ್ ಆಗಿದ್ದಾನೆ. ಹಾಗಾದ್ರೆ ಈ ಕೊಲೆ ಮಾಡಿದ್ದು ಯಾರು? ಕೊಲೆ ಆಗಿರುವ ಯುವತಿ ಯಾರು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಹೌದು, ಬೆಂಗಳೂರಲ್ಲಿ ಒಂಟಿ ಮಹಿಳೆಯನ್ನ ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಿರುವ ಕಿರಾತಕನೊಬ್ಬ ಫ್ರಿಡ್ಜ್ ಒಳಗೆ ಮೃತದೇಹ ಇಟ್ಟು ಓಡಿ ಹೋಗಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ವೈಯ್ಯಾಲಿ ಕಾವಲ್ ಪೈಪ್ ಲೈನ್ ಏರಿಯಾದ ಮನೆ ಒಂದರಲ್ಲಿ ಒಂಟಿಯಾಗಿದ್ದ ಮಹಾಲಕ್ಷ್ಮೀ ಎಂಬ 26 ವರ್ಷದ ಯುವತಿಯ ಕೊಲೆ ಮಾಡಲಾಗಿದೆ. ಸುಮಾರು 19 ದಿನಗಳ ಹಿಂದೆಯೇ ಈ ಕೊಲೆ ನಡೆದಿದ್ದು, ವಿಚಾರ ಅಕ್ಕಪಕ್ಕದ ಮನೆಯವರಿಗೆ ಗೊತ್ತೇ ಆಗಿಲ್ಲ. ಈ ಘಟನೆ ಬೆಳಕಿಗೆ ಬಂದ ನಂತರ ಫ್ರಿಡ್ಜ್ ಒಳಗೆ ತರಕಾರಿ ಇಡುವ ಜಾಗದಲ್ಲಿ ಮೃತದೇಹ ಪತ್ತೆ ಆಗಿದೆ.

Allegedly Teenager Body Found In Fridge At Karnataka Capital Bengaluru

ತರಕಾರಿ ಇಡುವ ಜಾಗದಲ್ಲಿ ಬಾಡಿ!

ಪೀಸ್ ಪೀಸ್ ಆಗಿ ಮಹಾಲಕ್ಷ್ಮೀ ದೇಹವನ್ನು ಫಿಡ್ಜ್ ಒಳಗೆ ತುಂಬಿ ಇಡಲಾಗಿತ್ತು. ಇನ್ನು ಈ ಮಹಿಳೆ ಮೊಬೈಲ್ ಸೆಪ್ಟೆಂಬರ್ 2ರಂದು ಸ್ವಿಚ್ಡ್ ಆಫ್ ಆಗಿತ್ತು ಎನ್ನಲಾಗಿದೆ. ಅದೇ ದಿನವೇ ಈ ಯುವತಿಯ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾಲಕ್ಷ್ಮೀ ದೇಹವನ್ನು 50 ತುಂಡು ಮಾಡಿ ಹಾಕಲಾಗಿದ್ದು, ಫ್ರಿಡ್ಜ್ ಒಳಗೆ ತುಂಬಿ ಇಡಲಾಗಿತ್ತು. ಆದರೆ ಹೀಗೆ ಫ್ರಿಡ್ಜ್‌ನ ಒಳಗಡೆ ನೇಪಾಳ ಮೂಲದ ಮಹಾಲಕ್ಷ್ಮೀ ದೇಹ ಇಟ್ಟಿದ್ದ ಕಾರಣಕ್ಕೆ ರಕ್ತ ಎಲ್ಲ ಸೋರುತ್ತಾ ಹೊರಗೆ ಬಂದಿದೆ. ಈ ಕಾರಣಕ್ಕೆ ಮಹಾಲಕ್ಷ್ಮೀ ಅಕ್ಕಪಕ್ಕದ ಮನೆಯವರಿಗೆ ವಾಸನೆ ಬಂದಿದೆ. ಕೊನೆಗೆ ಬಾಗಿಲು ತೆಗೆದು ನೋಡಿದರೆ ಮನೆಯ ಒಳಗಿನಿಂದ ಹುಳಗಳು ಹರಿದಾಡಿವೆ.

ಬಾಗಿಲು ತೆರೆದಾಗ ಆಘಾತ ಎದುರಾಗಿತ್ತು

ಶುರುವಲ್ಲಿ ಹೆಗ್ಗಣ ಸತ್ತಿರುವ ವಾಸನೆ ಇರಬಹುದು ಅಂತ ಅಕ್ಕಪಕ್ಕದವರು ಅಂದುಕೊಂಡಿದ್ರು. ಆದ್ರೆ ಮಹಾಲಕ್ಷ್ಮೀ ಮನೆಯ ಬಾಗಿಲು ತೆಗೆದು ನೋಡಿದ ನಂತರ ಆಘಾತ ಎದುರಾಗಿದೆ. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದ್ದು, ಹಂತಕನಿಗಾಗಿ ಬಲೆ ಬೀಸಲಾಗಿದೆ. ಹಾಗೇ ತುಂಡು ತುಂಡಾಗಿದ್ದ ಮಹಾಲಕ್ಷ್ಮೀ ದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+