ಏರ್‌ಪೋರ್ಟ್ ಮೆಟ್ರೋ: ಬಳಕೆದಾರ ಶುಲ್ಕ ಪ್ರಸ್ತಾವ ತಿರಸ್ಕೃತ

ಬೆಂಗಳೂರು, ಏಪ್ರಿಲ್ 24: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ಮೆಟ್ರೋ ಯೋಜನೆಯಲ್ಲಿ ವಿಮಾನ ಪ್ರಯಾಣಿಕರಿಂದ ಬಳಕೆದಾರ ಶುಲ್ಕ ವಸೂಲಿ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರ ಸಮ್ಮತಿಸಿಲ್ಲ. ಹೀಗಾಗಿ ಮರು ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ 29.ಕಿ.ಮೀ ಉದ್ದದ ಮೆಟ್ರೋ ಸಂಪರ್ಕ ಕಲ್ಪಿಸಲು 5,950 ಕೋಟಿ ರೂ. ಮೊತ್ತದ ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರವು 1,250 ಕೋಟಿ ರೂ. ಕೇಂದ್ರ ಸರ್ಕಾರ 500 ಕೋಟಿ ರೂ. ನೀಡಲಿದೆ. ಉಳಿದ ಮೊತ್ತವನ್ನು ಸಾಲ ಪಡೆಯಲಾಗುತ್ತದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಹಿಂದಿನಂತೆಯೇ ತಮ್ಮ ಪಾಲಿನ ಮೊತ್ತವನ್ನು ಬಿಡುಗಡೆಗೊಳಿಸಲಿವೆ. ಆದರೆ ಬಿಐಎಎಲ್ ತನ್ನ ಪಾಲಿನ ಹಣ ನೀಡಲು ವಿಮಾನ ಪ್ರಯಾಣಿಕರ ಮೇಲೆ ಹೊರೆ ಹೇರಲು ನಿರ್ಧರಿಸಿವೆ.

Airports authority rejects metro users cess on air passengers

ದೇಶೀಯ ವಿಮಾನ ಬಳಕೆದಾರರಿಗೆ ಟಿಕೆಟ್ ನಲ್ಲಿ 60ರೂ. ಹಾಗೂ ವಿದೇಶಕ್ಕೆ ಪ್ರಯಾಣಿಸುವವವರಿಗೆ ಟಿಕೆಟ್ ನಲ್ಲಿ 80ರೂ. ಬಳಕೆದಾರ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.ಇದಕ್ಕೆ ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆಯಲು ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪ್ರಸ್ತಾವದಲ್ಲಿ ಕೆಲ ಅಂಶಗಳು ಪ್ರಶ್ನಾರ್ಹವಾಗಿರುವುದರಿಂದ ತಿರಸ್ಕಾರ ಮಾಡಲಾಗಿದೆ.

ಮತ್ತೊಂದು ಹೊರೆ: ಕೆಐಎ ನಲ್ಲಿ ಟರ್ಮಿನಲ್ ಸೇರಿದಂತೆ ಮೊದಲಾದ ಸೌಲಭ್ಯಗಳನ್ನು ನೀಡಿದ್ದು, ಅದಕ್ಕೆ ಸಂಬಂಧಿಸಿದಂತೆ ಬಳಕೆದಾರ ಶುಲ್ಕ ಸಂಗ್ರಹಿಸಲಾಗುತ್ತಿದೆ. ಕೆಐಎನಿಂದ ಪ್ರಯಾಣಿಸುವ ಪ್ರತಿ ದೇಶೀಯ ಪ್ರಯಾಣಿಕನಿಗೆ ಟಿಕೆಟ್ ನಲ್ಲಿ 306ರೂ ಹಾಗೂ ವಿದೇಶಕ್ಕೆ ಪ್ರಯಾಣಿಸುವವರಿಗೆ 1,226 ರೂ. ಬಳಕೆದಾರ ಶುಲ್ಕ ವಿಧಿಸಲಾಗುತ್ತಿದೆ.

ಈ ಬಗ್ಗೆ ಪ್ರಸ್ತಾವದಲ್ಲಿ ವಿವರಣೆ ನೀಡಲಾಗಿದೆ. ಇದೂ ಸೇರಿದಂತೆ ಕೆಲ ಅಂಶಗಳು ಪ್ರಾಧಿಕಾರಕ್ಕೆ ಒಪ್ಪಿಗೆಯಾಗಿಲ್ಲ. ಮುಂಬೈ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಯೋಜನೆಗೂ ಇದೇ ರೀತಿ ಬಳಕೆದಾರ ಶುಲ್ಕ ವಿಧಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+