ನ.11 ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ
ಬೆಂಗಳೂರು, ನವೆಂಬರ್ 03 : ಬೆಂಗಳೂರು-ಹುಬ್ಬಳ್ಳಿ ನಡುವೆ ನವೆಂಬರ್ 11ರಿಂದ ಬೆಳಗಿನ ಹೊತ್ತು ವಿಮಾನ ಸೇವೆ ಆರಂಭವಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ ಎಂದು ಏರ್‌ಪೆಗಾಸಸ್ ಹೇಳಿದೆ.
2015ರ ಏಪ್ರಿಲ್‌ನಿಂದ ಏರ್ ಪೆಗಾಸಸ್‌ನ ಒಂದು ವಿಮಾನ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸುತ್ತಿದೆ. ಈ ವಿಮಾನ ಸಂಜೆ ಸಂಚಾರ ನಡೆಸುತ್ತದೆ. ಆದ್ದರಿಂದ, ಸಂಸ್ಥೆ ಬೆಳಗಿನ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. [ಹುಬ್ಬಳ್ಳಿಗೆ ಸ್ಪೈಸ್ ಜೆಟ್ ಹಾರಾಟ ಸ್ಥಗಿತ]

ವೇಳಾಪಟ್ಟಿ : ನವೆಂಬರ್ 11ರ ಬುಧವಾರದಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ ಆರಂಭವಾಗಲಿದೆ. www.airpegasus.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. [ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ]
ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 8.15ಕ್ಕೆ ಹುಬ್ಬಳ್ಳಿ ತಲುಪಲಿದೆ. 8.40ಕ್ಕೆ ಹುಬ್ಬಳ್ಳಿಯಿಂದ ಹೊರಡಲಿರುವ ವಿಮಾನ 9.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. [ಬೆಂಗಳೂರು-ಕಡಪ ನಡುವೆ ಏರ್ ಪೆಗಾಸಸ್ ವಿಮಾನ ಸೇವೆ]
2015ರ ಜುಲೈನಲ್ಲಿಯೇ ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಸೇವೆ ಆರಂಭಿಸಲು ನಿರ್ಧರಿಸಿತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದ್ದು, ನವೆಂಬರ್ 11ರಿಂದ ಹಾರಾಟ ಆರಂಭವಾಗಲಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]
ಸ್ಪೈಸ್ ಜೆಟ್ ಹಾರಾಟ ನಡೆಸುತ್ತಿತ್ತು : ಮೊದಲು ಹುಬ್ಬಳ್ಳಿಗೆ ಸ್ಪೈಸ್‌ಜೆಟ್ ವಿಮಾನಯಾನ ಸೇವೆ ನೀಡುತ್ತಿತ್ತು. 2015ರ ಮಾ.8ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.












Click it and Unblock the Notifications