ಬೆಂಗಳೂರು: ಮಾಧ್ಯಮದ ಬಳಿಕ ಆರೋಗ್ಯ ಕ್ಷೇತ್ರದಲ್ಲೂ ಕ್ರಾಂತಿ ಮಾಡಲು ಮುಂದಾದ ಎಐ, ಕಾರ್ಯಕ್ಷಮತೆ ಹೇಗಿರಲಿದೆ?
ಬೆಂಗಳೂರು, ಅಕ್ಟೋಬರ್, 21: ಕೆಳೆದ ಕೆಳವು ತಿಂಗಳುಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸದ್ದು ಮಾಡಿಕೊಂಡು ಬರುತ್ತಿರುವ ಎಐ ತಂತ್ರಜ್ಞಾನ ಇದೀಗ ಆರೋಗ್ಯ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಹಾಗಾದರೆ ಆರೋಗ್ಯ ಕ್ಷೇತ್ರದಕ್ಕೆ ಇದರ ಕಾರ್ಯಕ್ಷಮತೆ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಾವು ನೀವೆಲ್ಲ ಇಂದು ಬದುಕುತ್ತಿರುವುದು ಡಿಜಿಟಲ್ ದುನಿಯಾದಲ್ಲಿ. ದಿನಕಳೆದಂತೆ ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆ ಆಗುತ್ತಿದೆ. ಇದೀಗ ಆರೋಗ್ಯ ಕ್ಷೇತ್ರದಲ್ಲೂ ಎಐ ಕ್ರಾಂತಿ ಮಾಡಲು ಮುಂದಾಗಿದೆ. ಇಷ್ಟು ದಿನ ಮಾಧ್ಯಮ ಲೋಕದಲ್ಲಿ ಸದ್ದು ಮಾಡುತ್ತಿದ್ದ ಎಐ ಇದೀಗ ಆಸ್ಪತ್ರೆಯ ಅಂಗಳಕ್ಕೂ ಕಾಲಿಟ್ಟಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಎಐ ಕೆಲಸ ಶುರು ಮಾಡಿದ್ದು, ಇನ್ಮುಂದೆ ವೈದ್ಯಕೀಯ ರಿಪೋರ್‌ಗಳು ಕ್ವಿಕ್ ಆಗಿ ವೈದ್ಯರ ಕೈ ಸೇರಲಿದೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಶುರುವಾಗಿದೆ. ಇಷ್ಟು ದಿನ ಮಾಧ್ಯಮ ರಂಗ, ಇನ್ನಿತರ ಕೆಲ ರಂಗದಲ್ಲಿ ಸದ್ದು ಮಾಡ್ತಿದ್ದ ಎಐ ಇದೀಗ ಆಸ್ಪತ್ರೆಯ ಅಂಗಳಕ್ಕೂ ಕಾಲಿಟ್ಟಿದೆ. ನಗರದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಎಐ ಈಗಾಗಲೇ ತನ್ನ ಕೆಲಸ ಕೂಡ ಆರಂಭ ಮಾಡಿದೆ.
ಇಂದಿರಾಗಾಂಧಿ ಆಸ್ಪತ್ರೆಯ ರೆಡಿಯಾಲಜಿ ವಿಭಾಗದ PACS(picture archiving and communication system ) ಉಪಕರಣ ಅಳವಡಿಕೆ ಮಾಡೆಲ್ ಆಗಿದೆ. ಈ ಉಪಕರಣಕ್ಕೆ ಸಪೋರ್ಟಿವ್ ಆಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯವಾಗಿ ಎಂಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನ್ ವರದಿಯನ್ನು consultancyಗೆ ತಗೊಂಡು ಹೋಗಿ ಕೊಡಲು ಸಮಯ ಬೇಕಾಗುತ್ತೆ. ಕೆಲವೊಮ್ಮೆ ದೂರದಲ್ಲಿದ್ದರೆ, ಗಂಟೆಗಳಲ್ಲ ದಿನಗಳೇ ಬೇಕಾಗುತ್ತೆ. ಆದರೆ ಇದೀಗ ಎಐ ಸಹಾಯದಿಂದ ಎಂಆರ್‌ಐ, ಸಿಟಿ ಸ್ಕ್ಯಾನ್ ರಿಪೋರ್ಟ್ ಕೂತಲ್ಲಿಯೇ ಸಂಬಂಧಪಟ್ಟ ವೈದ್ಯರ ಕೈ ಸೇರಲಿದೆ.
ಇದರಿಂದ ಹಣ, ಸಮಯದ ಉಳಿತಾಯದ ಜೊತೆಗೆ, ರೋಗಿಗೆ ತ್ವರಿತವಾಗಿ ಚಿಕಿತ್ಸೆ ಸಿಗಲು ಕೂಡ ಇದು ಸಹಕಾರಿಯಾಗಲಿದೆ. ಯಾಕಂದ್ರೆ ತ್ವರಿತಗತಿಯಲ್ಲಿ ಮೆಡಿಕಲ್ ರಿಪೋರ್ಟ್ ಕೂಡ ವೈದ್ಯರ ಕೈ ಸೇರುವುದರಿಂದ ರೋಗಿಗೆ ಯಾವ ರೀತಿಯ ಚಿಕಿತ್ಸೆ ಕೊಡಬೇಕು ಅನ್ನೋದರ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಅಲ್ಲದೆ ಎಐ ವೈದ್ಯಕೀಯ ಸಂಶೋಧನೆಗೂ ಸಹಕಾರಿ. ಸಾಮಾನ್ಯವಾಗಿ ವೈದ್ಯಕೀಯ ವರದಿಗಳನ್ನು ಒಂದೊಂದು ಕಡೆ ಸೇವ್ ಮಾಡುವುದರಿಂದ ಕೆಲವೊಮ್ಮೆ ಹುಡುಕಬೇಕಾದ ಪರಿಸ್ಥಿತಿ ಇರುತ್ತೆ. ಅಲ್ಲದೆ ಇದು ಮಾಹಿತಿ ಲೀಕ್ ಆಗುವ ಸಾಧ್ಯತೆ ಕೂಡ ಇರಲಿದೆ. ಆದರೆ ಎಐ ಮೂಲಕ ಒಂದೇ ಸರ್ವರ್ ಅಡಿಯಲ್ಲಿ ವೈದ್ಯಕೀಯ ಮಾಹಿತಿಯನ್ನು ಶೇಖರಣೆ ಮಾಡಿಡಲು ಸಾಧ್ಯವಾಗಲಿದ್ದು, ಇದು ವೈದ್ಯಕೀಯ ಸಂಶೋಧನೆಗೂ ಸಹಕಾರಿ. ಅಲ್ಲದೇ ವೈದ್ಯಕೀಯ ಮಾಹಿತಿಯನ್ನು ಕೂಡ ಗೌಪ್ಯವಾಗಿಡಲಿದೆ.
ಒಟ್ಟಿನಲ್ಲಿ ದಿನಕಳೆದಂತೆ ತಂತ್ರಜ್ಞಾನ ಕೂಡ ಅಪ್ಡೇಟ್ ಆಗುತ್ತಿದ್ದು, ಇದೀಗ ಎಐ ವೈದ್ಯಕೀಯ ಲೋಕಕ್ಕೆ ಹೊಸ ಟಚ್ ಕೊಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಎಐ ಅದೆಷ್ಟರ ಮಟ್ಟಿಗೆ ರೋಗಿಗಳಿಗೆ ನೆರವಾಗಲಿದೆ ಅನ್ನುವುದನ್ನು ಮಾತ್ರ ಕಾದುನೋಡಬೇಕಾಗಿದೆ.












Click it and Unblock the Notifications