ಏರೋ ಇಂಡಿಯಾ 2021: ಭಾರತದೊಂದಿಗೆ ಅಮೆರಿಕ ರಕ್ಷಣಾ ಸಹಭಾಗಿತ್ವ
ಬೆಂಗಳೂರು,ಫೆಬ್ರವರಿ 02: ಭಾರತದೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಲು ಅಮೆರಿಕ ಮುಂದಾಗಿದೆ.
ಇಂಡೋ ಫೆಸಿಪಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ನೀಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳೊಂದಿಗೆ 100 ಜನರ ನಿಯೋಗವು ಏರೋ ಇಂಡಿಯಾ 2021ರಲ್ಲಿ ಭಾಗವಹಿಸುತ್ತಿದೆ.
ಅಮೆರಿಕ ಹಾಗೂ ಭಾರತ ರಕ್ಷಣಾ ಕಂಪನಿಗಳ ನಡುವೆ ಹೆಚ್ಚುತ್ತಿರುವ ಜಂಟಿ ಒಪ್ಪಂದಗಳು ಮತ್ತು ಕಾರ್ಯಗಳು ಭಾರತದಲ್ಲಿ ಇರುವ ರಕ್ಷಣಾ ಸರಬರಾಜುದಾರರ ಜಾಲವನ್ನು ಇನ್ನೂ ಸದೃಢ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಏರೋ ಇಂಡಿಯಾದ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ B-1B ಲ್ಯಾನ್ಸರ್ ಹೆವಿ ಬಾಂಬರ್, ಫೆಬ್ರವರಿ 3 ಏರ ಇಂಡಿಯಾ 2021 ಉದ್ಘಾಟನಾ ದಿನದಂದು ಫ್ಲೈ ಬೈ ಮಾಡಲಿದೆ.
B-1 28ನೇ ಬಾಂಬ್ ವಿಂಗ್ , ಎಲ್ಸ್ ವರ್ತ್ ಫೋರ್ಸ್ ಬೇಸ್,ಸೌತ್ ಡಕೋಟದ ವಿಮಾನವಾಗಿದ್ದು, ಈಗಿರುವ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ.
ಇದೊಂದು ಅದ್ಭುತ ವಿಮಾನ. ಇದು ಜಗತ್ತಿನ ಎಲ್ಲೆಡೆ ಅಮೆರಿಕಕ್ಕೆ ಸೇರಿದ ಬೇಸ್‌ಗಳಿಂದ ಹಾಗೂ ಫಾರ್ವರ್ಡ್-ಡಿಪ್ಲಾಯ್ಡ್ ಜಾಗಗಳಿಂದ ಕೂಡ ಮಿಷನ್ ಗಳನ್ನು ಸಫಲಗೊಳಿಸುವ ಸಾಮರ್ಥ್ಯ ಹೊಂದಿದೆ.












Click it and Unblock the Notifications