11 ವರ್ಷಗಳ ಬಳಿಕ ಗುರುತು ಪತ್ತೆ ಪರೇಡ್ ಪ್ರಯೋಜನವಿಲ್ಲ: ಹೈಕೋರ್ಟ್

ಬೆಂಗಳೂರು.ಅ.3: ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್‌ ನಡೆಸಲು ವರ್ಷಾನುಗಟ್ಟಲೆ ವಿಳಂಬ ಮಾಡಿದರೆ ಪ್ರಯೋಜನವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ತಡವಾಗಿ ಗುರುತು ಪತ್ತೆ ಪರೇಡ್ ನಡೆಸಿದರೆ ಸಾಕ್ಷಿಗಳು ತಮ್ಮ ಜ್ಞಾಪಕ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟಕರ ಎಂದೂ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರಿನ ಕೆ.ಉಮೇಶ್‌ ಶೆಟ್ಟಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ. ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯಪೀಠ, ಘಟನೆ ನಡೆದ 11 ವರ್ಷಗಳ ಬಳಿಕ ಗುರುತು ಪತ್ತೆ ಪರೇಡ್‌ (ಟಿಐಪಿ) ನಡೆಸಲು ತನಿಖಾಧಿಕಾರಿಗೆ ಅವಕಾಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಅಲ್ಲದೆ, ಕೋರ್ಟ್ ಪೊಲೀಸರು ಆದಷ್ಟು ಶೀಘ್ರ ಆರೋಪಿಗಳ ಗುರುತು ಪತ್ತೆ ಪರೇಡ್‌(ಟಿಐಪಿ) ನಡೆಸಬೇಕೆಂದು ಪೊಲೀಸರಿಗೆ ಆದೇಶಿಸಿದೆ.

After 11 years delay, TIP will not serve any purpose: Ruled HC

ಉದ್ದೇಶವೇ ವಿಫಲ: ''ಗುರುತು ಪತ್ತೆ ಪರೇಡ್‌ ಪರೀಕ್ಷೆ ನಡೆಸುವುದು ಅಪರಾಧ ಕೃತ್ಯಕ್ಕೆ ಕಾರಣವಾದ ಅಥವಾ ಮಾಡಿದ ವ್ಯಕ್ತಿ ಪತ್ತೆ ಹಚ್ಚಲು, ಅದನ್ನು ಆದಷ್ಟು ಶೀಘ್ರ ಮಾಡಬೇಕು. ಆಗ ಸಾಕ್ಷಿಗಳು ನೆನಪಿನ ಶಕ್ತಿಯನ್ನು ಕಳೆದುಕೊಂಡಿರುವುದಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಯಾವುದೇ ಆಯಾಮದಿಂದ ನೋಡಿದರೂ 11 ವರ್ಷಗಳ ಬಳಿಕ ಟಿಐಪಿ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ, ಪಿಟಿಸಿ ಉದ್ದೇಶವೇ ವಿಫಲವಾಗುತ್ತದೆ'' ಎಂದು ನ್ಯಾಯಪೀಠ ಹೇಳಿದೆ.

''ಈ ಪ್ರಕರಣದಲ್ಲಿ ದೂರು ದಾಖಲಾದ 11 ವರ್ಷಗಳ ಬಳಿಕ ತನಿಖಾಧಿಕಾರಿ ಗುರುತು ಪತ್ತೆ ಪರೇಡ್‌ ನಡೆಸಲು ಅನುಮತಿ ಕೋರಿದ್ದಾರೆ. ಆದ್ದರಿಂದ ಸಾಮಾನ್ಯವಾಗಿ ಮನುಷ್ಯರ ಜ್ಞಾಪಕ ಶಕ್ತಿ ದುರ್ಬಲವಾದುದು ಮತ್ತು ಸಾಕ್ಷಿ ಮಾಡುವ ಗುರುತಿನ ಮೇಲೆ ನಂಬಿಕೆ ಇಡಲಾಗದು. ಘಟನೆ ನಡೆದ 11 ವರ್ಷಗಳ ನಂತರ ಗುರುತು ಪತ್ತೆ ಪರೇಡ್‌ ನಡೆಸಿದರೆ, ಯಾವ ಉದ್ದೇಶದಿಂದ ಅದನ್ನು ನಡೆಸುತ್ತಾರೋ ಅದು ಸಫಲವಾಗುವ ಸಾಧ್ಯತೆಗಳಿರುವುದಿಲ್ಲ, ನಿರರ್ಥಕವಾಗಲಿದೆ'' ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಬಸವೇಶ್ವರನಗರ ಪೊಲೀಸರು 2006ರಲ್ಲಿ ಮಾನವ ಅಕ್ರಮ ಕಳ್ಳ ಸಾಗಾಣೆ ನಿಯಂತ್ರಣ ಕಾಯಿದೆಯಡಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ಸಮಯದಲ್ಲಿ ಉಮೇಶ್‌ ಶೆಟ್ಟಿ ನಾಪತ್ತೆಯಾಗಿದ್ದರು. ಆತನ ವಿರುದ್ಧ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್‌ 82 ಮತ್ತು 83ರಡಿ ಎನ್‌ ಬಿಡಬ್ಲೂಜಾರಿಗೊಳಿಸಿತ್ತು.

ಆದರೆ ಆಗ ಅರ್ಜಿದಾರರಾದ ಉಮೇಶ್‌ ಶೆಟ್ಟಿ, ತಾನು ಪೊನ್ನಪ್ಪನ ಮಗ ಉಮೇಶ್‌ ಶೆಟ್ಟಿಯಲ್ಲ, ತಮ್ಮ ತಂದೆ ಲೇಟ್‌ ವಿಠಲ ಶೆಟ್ಟಿ ಮತ್ತು ಎನ್‌ ಬಿಡಬ್ಲೂಯಲ್ಲಿ ಹೆಸರಿಸಿರುವುದು ತಾನಲ್ಲ ಎಂದು ಪೊಲೀಸರಿಗೆ ತಿಳಿಸಿದ್ದನು.

ಆ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯನ್ನು ಅರಿಯಲು ಪೊಲೀಸರು ಗುರುತು ಪತ್ತೆ ಪರೇಡ್‌ ಅನ್ನು ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆ ಮನವಿಯನ್ನು ವಿಚಾರಣಾ ಕೋರ್ಟ್ ಪುರಸ್ಕರಿಸಿತ್ತು. ಹಾಗಾಗಿ ಆ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+