Aero India 2023: ಬೆಂಗಳೂರಿನ ಯಲಹಂಕ ವಾಯನೆಲೆಯಲ್ಲಿ 14ನೇ ಆವೃತ್ತಿಯ 'ವೈಮಾನಿಕ ಪ್ರದರ್ಶನ'
ಬೆಂಗಳೂರು, ನವೆಂಬರ್ 25: ಏರೋ ಇಂಡಿಯಾದ ಬಹುನಿರೀಕ್ಷಿತ 14ನೇ ಆವೃತ್ತಿಯು ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಆಯೋಜಿಸಲು ಸಿದ್ಧತೆ ಆರಂಭವಾಗಿದೆ. 2023ರ ಪೆಬ್ರುವರಿಯಲ್ಲಿ ಏರೋ ಇಂಡಿಯಾ ನಡೆಯಲಿದೆ.
ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ 1996 ರಿಂದ ಏಷ್ಯಾದ ಅತಿದೊಡ್ಡ ಏರ್ ಶೋದ (ವೈಮಾನಿಕ ಪ್ರದರ್ಶನ) ಆತಿಥ್ಯ ವಹಿಸಿದೆ. ಈ ಬೃಹತ್ ಏರ್ ಶೋ ಆಯೋಜನೆ ದಿನಾಂಕಗಳ ಬಗ್ಗೆ ಸಂಬಂಧಿತ ಸಂಸ್ಥೆಗಳು ಅಧಿಕೃತವಾಗಿ ಘೋಷಿಸಬೇಕಿದೆ. ಪ್ರತಿ ವರ್ಷದಂತೆ ಈವರ್ಷವು 2023ರವರೆ ಫೆಬ್ರುವರಿಯಲ್ಲಿ ನಡೆಯುವ ಸಾಧ್ಯತೆ ಇದೆ.
ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ 'ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್' ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ. ಏರೋಸ್ಪೇಸ್ ಉದ್ಯಮ ಬೆಳೆವಣಿಗೆಗೆ ಈ ಏರೋ ಇಂಡಿಯಾ ಪ್ರದರ್ಶನ ಉತ್ತಮ ವೇದಿಕೆಯೂ ಆಗಿದೆ.

2003ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 4ನೇ ಆವೃತ್ತಿ ವೈಮಾನಿಕ ಪ್ರದರ್ಶನದಲ್ಲಿ ಪ್ರಪಂಚದಾದ್ಯಂತದ 22 ದೇಶಗಳಿಂದ ಸುಮಾರು 176 ಪ್ರದರ್ಶಕರು ಭಾಗವಹಿಸಿದ್ದರು. 2005ರಲ್ಲಿ 380 ಪ್ರದರ್ಶಕರು ಭಾಗವಹಿಸುವ ಮೂಲಕ ಈ ಸಂಖ್ಯೆಯನ್ನು ದ್ವಿಗುಣಗೊಳಿಸಿದರು. ಅದಾದ ಬಳಿಕ ವರ್ಷದಿಂದ ವರ್ಷಕ್ಕೆ ಬೆಂಗಳೂರಿನ ಏರ್‌ಶೋನಲ್ಲಿ ಗಣನೀಯ ಮಟ್ಟದಲ್ಲಿ ಪ್ರದರ್ಶಕರ ಸಂಖ್ಯೆ ಕಂಡ ಬಂತು.
ಏರೋ ಇಂಡಿಯಾದ 13ನೇ ಆವೃತ್ತಿಯು 2021ರಲ್ಲಿ ಫೆಬ್ರವರಿ 3 ದ 5ರ ವರೆಗೆ ಮೂರು ದಿನಗಳ ಕಾಲ ನಡೆದಿತ್ತು. ಆದರೆ ಕೊರೋನಾ ಸಾಂಕ್ರಾಮಿಕದ ಭೀತಿ ಕಾರಣದಿಂದ ಪ್ರದರ್ಶನದಲ್ಲಿ ವಿದೇಶಿ ವಿಮಾನಗಳು, ಪ್ರದರ್ಶಕರು ಭಾಗವಹಿಸಲು ಸಾಧ್ಯವಾಗಲಿಲ್ಲ. ಅದೇ ವರ್ಷ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ರಕ್ಷಣಾ ಸಚಿವಾಲಯದ ನಡುವೆ 83 ಎಚ್‌ಎಎಲ್ ತೇಜಸ್ ಎಂಕೆ 1ಎಎಸ್ (ಸಿಂಗಲ್ ಇಂಜಿನ್ ಫೈಟರ್ ಜೆಟ್) ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದ ನಡೆದಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

20,000 ವಾಹನಗಳ ನಿಲುಗಡೆಗೆ ವ್ಯವಸ್ಥೆ!
ಏರೋ ಇಂಡಿಯಾ 2023 ಸಂಬಂಧ ರಾಜ್ಯ ಸರ್ಕಾರ, ಬಿಬಿಎಂಪಿ, ಬೆಂಗಳೂರು ನಗರ ಸಂಚಾರಿ ಪೊಲೀಸ್ ಸೇರಿದಂತೆ ವಾಹನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಲಕ್ಷಾಂತರ ಜನ ಬರುವ ನಿರೀಕ್ಷೆ ಇದ್ದು, 20,000 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವುದಾಗಿ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕಾಗಿ ಜಕ್ಕೂರು ಸುತ್ತಮುತ್ತ ಸ್ಥಳ ನಿಗದಿ ಮಾಡಿದ್ದಾರೆ. ಒಟ್ಟಾರೆ ವೈಮಾನಿಕ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.












Click it and Unblock the Notifications