ಏರ್‌ಪೋರ್ಟ್‌ಗೆ ಮೆಟ್ರೋ ಯೋಜನೆ ಅನುಮಾನ: ಸಾವಿರ ಕೋಟಿ ಕೊರತೆ

ಬೆಂಗಳೂರು, ಜುಲೈ 31: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಕನಸಾಗೆ ಉಳಿಯುವ ಸಾಧ್ಯತೆಗಳು ಹೆಚ್ಚಿದೆ, ಸಾವಿರ ಕೋಟಿ ರೂ. ಬಳಕೆದಾರರ ಶುಲ್ಕ ವಸೂಲಿ ಮಾಡುವ ಬಿಎಂಆರ್‌ಸಿಎಲ್‌ ಪ್ರಸ್ತಾಪವನ್ನು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತಿರಸ್ಕರಿಸಿದೆ.

ವಿಮಾನ ನಿಲ್ದಾಣದಲ್ಲಿ ಎರಡು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಮೆಟ್ರೋದಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುವುದರಿಂದ ಬಿಐಎಎಲ್‌ 1 ಸಾವಿರ ಕೋಟಿ ನೀಡಲು ಸಮ್ಮತಿ ನೀಡಿತ್ತು. 5,950 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ 500 ಕೋಟಿ ರೂ,ರಾಜ್ಯ ಸರ್ಕಾರ 1250 ಕೋಟಿ ರೂ. ದೀರ್ಘಾವಧಿ ಸಾಲದಿಂದ 3200 ಕೋಟಿ ನೀಡಲು ಒಪ್ಪಿಕೊಂಡಿತ್ತು.

ಈ ಹಣವನ್ನು ಟಿಕೆಟ್‌ ಬಳಕೆದಾರರ ಶುಲ್ಕವಾಗಿ ವಿಧಿ ವಸೂಲಿ ಮಾಡಲು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಮುಂಬೈ ಹಾಗೂ ನವದೆಹಲಿಯಲ್ಲಿ ವಿಮಾನ ನಿಲ್ದಾಣದಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ವಿಮಾನ ಪ್ರಯಾಣಿಕರಿಗೆ ಟಿಕೆಟ್‌ನಲ್ಲಿ ಯುಡಿಎಫ್‌ ವಿಧಿಸಲಾಗಿದೆ. ಬಿಎಂಆರ್‌ಸಿಎಲ್‌ ಇದೇ ವಿಧಾನವನ್ನು ಅನುಸರಿಸುವ ಪ್ರಸ್ತಾವ ಸಲ್ಲಿಸಿತ್ತು.

AERAI rejects users fee collection for metro project

ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮುನ್ನವೇ ಪ್ರಯಾಣಿಕರಿಗೆ ಶುಲ್ಕ ವಸೂಲಿ ಮಾಡುವುದು ಕಾನೂನು ಪ್ರಕಾರ ತಪ್ಪಾಗುತ್ತದೆ ಎಂಬ ಆಕ್ಷೇಪ ಕೇಳಿಬಂದಿತ್ತು.ಕೆಐಎಎಲ್‌ನಲ್ಲಿ ದೇಶದೊಳಗೆ ಪ್ರಯಾಣಿಸುವವರಿಗೆ ಈಗಾಘಲೇ 384 ರು. ವಿದೇಶ ಪ್ರಯಾಣಿಕರಿಗೆ 1500 ರೂ. ಯುಡಿಎಫ್‌ ವಿಧಿಸಲಾಗಿದೆ. ಇದರ ಜತೆಗೆ ಮೆಟ್ರೋಗಾಗಿ ದೇಶೀಯ ಪ್ರಯಾಣಿಕರಿಗೆ 60ರೂ ಹಾಗೂ ವಿದೇಶದ ಪ್ರಯಾಣಿಕರಿಗೆ 80 ರೂ. ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+