ಚಿತ್ರಕಲಾ ಪರಿಷತ್ತಿನಲ್ಲಿ 'ದ ಸೋಕ್ ಮಾರ್ಕೆಟ್' ಉದ್ಘಾಟಿಸಿದ ಪದ್ಮಜಾ ರಾವ್

ಬೆಂಗಳೂರು ಜೂನ್ 21: ಭಾರತ ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾಕಾರರ ಕಲಾಕೃತಿಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ. ಇಂತಹ ಕಲಾಕೃತಿಗಳಿಗೆ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ವೇದಿಕೆ ಒದಗಿಸುವ ಮೂಲಕ ಚಿತ್ರಕಲಾ ಪರಿಷತ್ ಅತ್ಯಂತ ಆರ್ದಶನೀಯ ಕಾರ್ಯಮಾಡುತ್ತಿದೆ ಎಂದು ಹಿರಿಯ ನಟಿ ಪದ್ಮಜಾ ರಾವ್ ಹೇಳಿದರು.

ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಚಿತ್ತಾರ ಸಹಯೋಗದಲ್ಲಿ ಗ್ರಾಂಡ್ ಫ್ಲಿಯಾ ಆಯೋಜಿಸಿದ ದ ಸೋಕ್ (ಮಾರ್ಕೇಟ್) ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ರಾಜ್ಯದ ಕಲೆಯನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುತ್ತಾಡುವ ಮೂಲಕ ದೇಶದ ಸಂಸ್ಕೃತಿಯನ್ನು ಅರಿತುಕೊಳ್ಳುವ ಹಾಗೂ ಆಯಾ ಪ್ರಾಂತ್ಯದ ಕಲೆಯನ್ನು ನೋಡುವ ಅವಕಾಶ ಇಲ್ಲಿದೆ. ಇಲ್ಲಿರುವ ಕಲಾಕೃತಿಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ ಎಂದು ಹೇಳಿದರು. ಹಲವಾರು ಕಲಾಕೃತಿಗಳನ್ನು ಹಾಗೂ ಕರಕುಶಲ ವಸ್ತುಗಳನ್ನು ಕೊಂಡುಕೊಂಡಿರುವ ನಾನು ಇಲ್ಲಿನ ಹೊಸ ರೀತಿಯ ಕಲೆಕ್ಷನ್ ಗೆ ಮಾರುಹೋಗಿದ್ದೇನೆ ಎಂದು ಹೇಳಿದರು.

ನಗರದ ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ 21/06/2019 ರಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಲಿದ್ದು, 30/06/2019 ರ ವರೆಗೆ ನಡೆಯಲಿದೆ.

ಕಾರ್ಯಕ್ರಮದ ಸಂಚಾಲಕರಾದ ಅಫ್ತಾಬ್ ಮಾತನಾಡಿ

ಕಾರ್ಯಕ್ರಮದ ಸಂಚಾಲಕರಾದ ಅಫ್ತಾಬ್ ಮಾತನಾಡಿ

ಕಾರ್ಯಕ್ರಮದ ಸಂಚಾಲಕರಾದ ಅಫ್ತಾಬ್ ಮಾತನಾಡಿ, ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ. ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ. ಇಂತಹ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಮಾರಾಟ ಮೇಳ ಆಯೋಜಿಸಲಾಗಿದೆ ಎಂದರು,

ಜೂನ್ 21 ರಿಂದ ಜೂನ್ 30 ರ ವರೆಗೆ ಮಾರ್ಕೆಟ್

ಜೂನ್ 21 ರಿಂದ ಜೂನ್ 30 ರ ವರೆಗೆ ಮಾರ್ಕೆಟ್

ಜೂನ್ 21 ರಿಂದ ಜೂನ್ 30 ರ ವರೆಗೆ ನಗರದ ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ ದಿ ಸೋಕ್ ಮಾರ್ಕೆಟ್ ಎನ್ನುವ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಕಲಾವಿದರು ಹಾಗೂ ಕಲಾಪ್ರಕಾರಗಳು ಪಾಲ್ಗೊಳ್ಳಲಿವೆ. ಈ ಮೇಳದಲ್ಲಿ ಹೋಂ ಡೆಕೋರ್‍ಗಳು, ಲ್ಯಾಂಪ್‍ಶೇಡ್‍ಗಳು, ಹ್ಯಾಂಡ್‍ಲೂಮ್ಸ್, ಹ್ಯಾಂಡ್‍ಕ್ರಾಫ್ಟ್‍ಗಳು, ತಂಜಾವೂರ್ ಪೇಂಟಿಂಗ್‍ಗಳು, ಮಧುಬನಿ, ಒರಿಸ್ಸಾ ಪೇಂಟಿಂಗ್‍ಗಳು, ಕೋಲ್ಕತ್ತಾ ಪೇಂಟಿಂಗ್‍ಗಳು, ವಿವಿಧ ಬಗೆಯ ಸೀರೆಗಳು, ರೇಷ್ಮೆ ಸೀರೆಗಳು, ಕಾಶ್ಮೀರಿ ಸೀರೆಗಳು, ಕೋಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಮಣಿಪುರ, ಚಂದೇರಿ ಸೀರೆಗಳು, ಕಾಂತವರ್ಕ್ ಸೀರೆಗಳು, ಕಲಾಮ್ಕರಿ ಸೀರೆಗಳು, ಲೈನೆನ್ ಸಿಲ್ಕ್ ಸೀರೆಗಳು ಮತ್ತು ಬಾಗಲ್ಪುರಿ ಸೀರೆಗಳು ಇರಲಿವೆ.

ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ

ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ

ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ದ ಸೋಕ್ ಮಾರ್ಕೆಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿರಲಿದೆ ಎಂದು ಹೇಳಿದರು.

ಪ್ರದರ್ಶನ ಹಾಗೂ ಮಾರಾಟ ಮೇಳ

ಪ್ರದರ್ಶನ ಹಾಗೂ ಮಾರಾಟ ಮೇಳ

ಈ ಪ್ರದರ್ಶನ ಹಾಗೂ ಮಾರಾಟ ಮೇಳ ನಗರದ ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ 21/06/2019 ರಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಲಿದ್ದು, 30/06/2019 ರ ವರೆಗೆ ನಡೆಯಲಿದೆ. ಮಹಿಳೆಯರಿಗೆ ಇಷ್ಟವಾಗುವ ಕಾಶ್ಮೀರಿ ಬ್ಯಾಗ್‍ಗಳು, ಕಲಾಮ್ಕರಿ ಬ್ಯಾಗ್‍ಗಳು, ಖಾದಿ ಕುರ್ತಾಗಳು ಇವೆ. ವಿವಿಧ ಬಗೆಯ ವಿನ್ಯಾಸದ ಆಭರಣಗಳು, ಒರಿಸ್ಸಾ ಆಭರಣಗಳು, ರಾಜಸ್ಥಾನಿ ಆಭರಣಗಳು, ಹ್ಯಾಂಡ್‍ಮೇಡ್ ಆಭರಣಗಳು ಹೀಗೆ ನೂರಾರು ಬಗೆಯ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+