ದೇವೇಗೌಡರ ಭೇಟಿ ಆದ ನಟ ಶಿವರಾಜ್ ಕುಮಾರ್ ದಂಪತಿ
ಬೆಂಗಳೂರು, ಫೆಬ್ರವರಿ 05: ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರ ನಿವಾಸಕ್ಕೆ ನಟ ಶೀವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್‌ಕುಮಾರ್ ಹಾಗೂ ಮಧು ಬಂಗಾರಪ್ಪ ಅವರು ಇಂದು ಭೇಟಿ ನೀಡಿದ್ದರು.
ದೇವೇಗೌಡ ಅವರು ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಕಾರಣ ಆರೋಗ್ಯ ವಿಚಾರಿಸಲು ಈ ಮೂವರು ಪ್ರಮುಖರು ಹೋಗಿದ್ದರು ಎನ್ನಾಗಿದೆ.
ಬಹು ಸಮಯ ದೇವೇಗೌಡ ಅವರ ಜೊತೆ ಶಿವರಾಜ್ ಕುಮಾರ್ ದಂಪತಿ ಮಾತನಾಡಿದ್ದಾರೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು ಹಾಗಾಗಿ ಈ ಭೇಟಿ ಮಹತ್ವದ್ದಾಗಿದೆ.

ಲೋಕಸಭೆ ಚುನಾವಣೆ ಸಹ ಹತ್ತಿರ ಬರುತ್ತಿರುವ ಕಾರಣ ಗೀತಾ ಶಿವರಾಜ್‌ಕುಮಾರ್ ಅವರು ಸ್ಪರ್ಧಿಸುವ ಉಮೇದು ಹೊಂದಿದ್ದಾರೆ ಹಾಗಾಗಿ ಇಂದು ದೇವೇಗೌಡ ಅವರನ್ನು ಭೇಟಿ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್ ಪಕ್ಷದಿಂದ ಶಿವಮೊಗ್ಗದಿಂದ ಸ್ಪರ್ಧಿಸಿ ಸೋತಿದ್ದರು.












Click it and Unblock the Notifications