ಮದುವೆಯಾಗುವುದಾಗಿ ನಂಬಿಸಿ ನಟನಿಂದ ಯುವತಿ ಮೇಲೆ ಅತ್ಯಾಚಾರ
ಬೆಂಗಳೂರು, ಮೇ 15: ಮದುವೆಯಾಗುವುದಾಗಿ ನಂಬಿಸಿ ನಟನೊಬ್ಬ ಯುವತಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಕಿರುಚಿತ್ರ, ನಿರ್ದೇಶಕ ಹಾಗೂ ನಟನಾಗಿರುವ ವ್ಯಕ್ತಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ತನ್ನ ಜನ್ಮದಿನವೆಂದು ಹೇಳಿ ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ವಿವೇಕನಗರ ಪೊಲೀಸರ ಕೈಗೆ ಒಪ್ಪಿಸಲಾಗಿದೆ.
ಸಂತ್ರಸ್ತೆಯು ನಟನ ತಾಯಿಯ ವಿರುದ್ಧವು ದೂರು ದಾಖಲಿಸಿದ್ದಾಳೆ. ಮಗನನ್ನು ಭೇಟಿಯಾಗುವುದನ್ನು ನಿಲ್ಲಿಸುವಂತೆ ಹೇಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ನಟನನ್ನು ಪ್ರಮೋದ್ ಕುಮಾರ್ ಎಂದು ಗುರುತಿಸಲಾಗಿದೆ.

ವಿವೇಕನಗರದ ಅಶ್ವಿನಿ ಲೇಔಟ್ ನಿವಾಸಿಯಾಗಿದ್ದಾನೆ. ಆಕೆ ವಿದ್ಯಾಭ್ಯಾಸ ಮಾಡುತ್ತಿರುವ ದಿನದಿಂದಲೇ ಆತನ ಪರಿಚಯವಿತ್ತು ಎಂದು ತಿಳಿಸಿದ್ದಾರೆ. ಅವರಿಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು ಕಳೆದ ಎರಡು ವರ್ಷಗಳಿಂದ ಅವರಿಬ್ಬರ ಮಧ್ಯೆ ಸಂಬಂಧವಿದೆ. ಮದುವೆಯಾಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಮನೆಗೆ ಕರೆಸಿಕೊಂಡು ದೈಹಿಕವಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದ ಎಂದು ದೂರಲಾಗಿದೆ.












Click it and Unblock the Notifications