Vijayalakshmi: ಪರಪ್ಪನ ಅಗ್ರಹಾರದವರೆಗೂ ಬಂದು ಪತಿ ದರ್ಶನ್‌ ನೋಡದೆ ವಿಜಯಲಕ್ಷ್ಮಿ ವಾಪಸ್‌-ಕಾರಣ ಏನು?

Vijayalakshmi: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಟೀಂ ಬೆಂಗಳೂರು ಸೆಂಟ್ರಲ್‌ ಜೈಲು (ಪರಪ್ಪನ ಅಗ್ರಹಾರ ಜೈಲು) ಸೇರಿದ್ದಾರೆ. ಇನ್ನು ನಟ ದರ್ಶನ್‌ನನ್ನು ನೋಡಲು ಆಪ್ತರು, ಕುಟುಂಬದವರು ಬರುತ್ತಲೇ ಇದ್ದಾರೆ. ಇನ್ನು ವಿಜಯಲಕ್ಷ್ಮಿ ತನ್ನ ಮಗ ವಿನೀಶ್‌ ಜೊತೆ ಪತಿ ದರ್ಶನ್‌ನ್ನು ನೋಡಲು ಬಂದಿದ್ದು, ಈ ವೇಳೆ ಮಾಧ್ಯಮದವರನ್ನು ಕಂಡು ವಾಪಾಸ್‌ ಆಗಿದ್ದಾರೆ. ಈ ಘಟನೆ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್​ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್​ ಅವರು ಜೈಲಿನ ಬಳಿ ಬಂದಿದ್ದರು. ಆದರೆ ಜೈಲಿನ ಮುಂದೆ ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡ ತಕ್ಷಣ ಅವರು ಅಲ್ಲಿಂದ ವಾಪಾಸ್‌ ಕಾಲ್ಕಿತ್ತ ಘಟನೆ ನಡೆದಿದೆ.

Actor Darshan s wife Vijayalakshmi went back seeing the media in front of Parappana agrahara

ಇನ್ನು ಈ ಪ್ರಕರಣದಲ್ಲಿ ನಟ ದರ್ಶನ್​ ಎ2 ಆಗಿದ್ದು, ಅವರಿಗೆ ಕಾನೂನಿನ ಸಂಕಷ್ಟ ದಿನದಿಂದ ದಿನಕ್ಕೆ ಉರುಳಾಗುತ್ತಲೇ ಇದೆ. ಅನ್ನಪೂರ್ಣೇಶ್ವರಿನಗರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ವಿಚಾರಣೆ ತೀವ್ರ ಆದಂತೆಲ್ಲ ಅನೇಕ ಸ್ಫೋಟಕ ವಿಚಾರಗಳು ಹೊರಬರುತ್ತಲೇ ಇವೆ. ಈ ಪ್ರಕರಣದಲ್ಲಿ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾಳೆ. ಇನ್ನು ಇವರ ಪಟಾಲಂ ಗ್ಯಾಂಗ್‌ ಕೂಡ ಬಧನಕ್ಕೊಳಗಾಗಿದ್ದು, ಇವರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.

ಬೇರೆ ಕಾರ್‌ನಲ್ಲಿ ಬಂದ ವಿಜಯಲಕ್ಷ್ಮಿ: ಕಪ್ಪು ಬಣ್ಣದ ಕಿಯಾ ಕಾರ್‌ನಲ್ಲಿ ಬಂದ ವಿಜಯಲಕ್ಷ್ಮಿ ಮಾಧ್ಯಮದವರನ್ನು ಕಂಡು ವಾಪಾಸ್‌ ಆಗಿದ್ದರು. ಬಳಿಕ ಮಗ ವಿನೀಶ್‌ ಜೊತೆ ಬೇರೆ ಕಾರಿನಲ್ಲಿ ಬಂದು ಪತಿ ದರ್ಶನ್‌ನನ್ನು ಭೇಟಿಯಾಗಿದ್ದಾರೆ. ಈ ವೇಳೆ ನಟ ದರ್ಶನ್‌ ಮಗನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ ದರ್ಶನ್‌ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜೊತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದರು. ನಂತರ ಅವರು, ಮೃತ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+